ಕೊರೋನಾ ನಿಗ್ರಹಕ್ಕೆ ಕೇಂದ್ರ 80 ಸಾವಿರ ಕೋಟಿ ಮೀಸಲು

By Kannadaprabha NewsFirst Published Dec 11, 2020, 9:00 AM IST
Highlights

ಕೊರೋನಾ ಸೋಂಕು ನಿಗ್ರಹಕ್ಕೆಂದು ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ 80 ಸಾವಿರ ಕೋಟಿ ರು. ತೆಗೆದಿರಿಸುವ ಸಾಧ್ಯತೆ ಇದೆ.

ನವದೆಹಲಿ (ಡಿ.11): ಭಾರತದ ಜನರನ್ನು ಹೈರಾಣು ಮಾಡಿರುವ ಕೊರೋನಾ ಸೋಂಕು ನಿಗ್ರಹಕ್ಕೆಂದು ಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ 80 ಸಾವಿರ ಕೋಟಿ ರು. ತೆಗೆದಿರಿಸುವ ಸಾಧ್ಯತೆ ಇದೆ. ಇದರ ಮುಖ್ಯ ಪಾಲು ಲಸಿಕೆ ವಿತರಣೆಗೆ ಹೋಗುವ ಸಾಧ್ಯತೆ ಇದೆ.

‘ಕೊರೋನಾ ಲಸಿಕೆ ಖರೀದಿ, ಸಂಗ್ರಹ, ಸಾರಿಗೆ ಹಾಗೂ ವಿತರಣೆಗಾಗಿ ಕೇಂದ್ರ ಸರ್ಕಾರವು ಸಾಕಷ್ಟುಹಣ ತೆಗೆದಿರಿಸಲಿದೆ. ಇದು 80 ಸಾವಿರ ಕೋಟಿ ರು. ಆಗಬಹುದು. ಇದು ಕೇಂದ್ರದ ಪಾಲು ಮಾತ್ರ. ಇನ್ನು ರಾಜ್ಯದ ಪಾಲು ಹಾಗೂ ಖಾಸಗಿ ವೈದ್ಯ ಸಂಸ್ಥೆಗಳ ಪಾಲು ಬೇರೆ ಆಗಿರಲಿದೆ’ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಗಂಭೀರ ಸ್ವರೂಪದ ಅಲರ್ಜಿ ಇರುವವರು ಫೈಝರ್‌ನಿಂದ ದೂರವಿರಿ!' ...

ಇದೇ ವೇಳೆ, ಮೋದಿ ಸರ್ಕಾರ 15ನೇ ಹಣಕಾಸು ಆಯೋಗವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಡಿರುವ ಶಿಫಾರಸನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆ ಇದೆ. ಈ ಪ್ರಕಾರ, ಭಾರತದ ಆರೋಗ್ಯ ಬಜೆಟ್‌ ದ್ವಿಗುಣವಾಗಲಿದೆ. ಫೆ.1ರಂದು ಬಜೆಟ್‌ ಮಂಡನೆ ನಿರೀಕ್ಷೆಯಿದೆ.

click me!