ಜಗತ್ತಿನಾದ್ಯಂತ ಆತಂಕ ಸೃಷ್ಟಿಸುತ್ತಿರುವ ರೂಪಾಂತರಿ ಕೊರೋನಾ ವೈರಸ್ ಗುರುವಾರ ಮತ್ತೆ ಐವರು ಭಾರತೀಯರಲ್ಲಿ ಕಾಣಿಸಿಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.01): ಬ್ರಿಟನ್‌ನಿಂದ ಭಾರತಕ್ಕೆ ಆಗಮಿಸಿರುವ ಪ್ರಯಾಣಿಕರ ಪೈಕಿ ಮತ್ತೆ ಐವರಿಗೆ ಗುರುವಾರ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟಿದೆ. ಈ ಮೂಲಕ ಮಂಗಳವಾರ ಮತ್ತು ಬುಧವಾರ ಹೊಸ ತಳಿಯ ಸೋಂಕು ಪತ್ತೆಯಾಗಿದ್ದ 20 ಮಂದಿಯೂ ಸೇರಿದಂತೆ ದೇಶದಲ್ಲಿ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಈ ಎಲ್ಲಾ 25 ಮಂದಿಯನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಯಲ್ಲಿ 4 ಮತ್ತು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಜೀನಾಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ)ಯಲ್ಲಿ ಒಂದು ಬ್ರಿಟನ್‌ನ ರೂಪಾಂತರಿ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಡಿ.23ರವರೆಗೆ ಅದರ ಹಿಂದಿನ 14 ದಿನಗಳ ಕಾಲ ಬ್ರಿಟನ್‌ನಿಂದ ಬಂದ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರಯಾಣಿಕರ ಮೇಲೆ ರಾಜ್ಯ ಸರ್ಕಾರಗಳು ತೀವ್ರ ನಿಗಾ ಇರಿಸಿವೆ.
undefined
ನಮ್ಮಲ್ಲಿ ಔಷಧಿಯೂ ಇದೆ, ಎಚ್ಚರಿಕೆಯೂ ಇದೆ: ಪ್ರಧಾನಿ ಮೋದಿ
ಬ್ರಿಟನ್‌ನ ಹೈಸ್ಪೀಡ್ ಕೊರೋನಾ ವೈರಸ್ ಈಗಾಗಲೇ ಭಾರತ, ಡೆನ್ಮಾರ್ಕ್, ನೆದರ್ಲೆಂಡ್, ಆಸ್ಪ್ರೇಲಿಯಾ, ಸ್ವೀಡನ್, ಸ್ಪೇನ್, ಜರ್ಮನಿ, ಕೆನಡಾ, ಜಪಾನ್, ಸಿಂಗಾಪುರ ಮತ್ತಿತರ ದೇಶಗಳಲ್ಲಿ ಪತ್ತೆಯಾಗಿದೆ.