ಮುಸ್ಲಿಂ, ಮಟುವಾ, ಮಹಿಳೆ ಹಾಗೂ ಮಮತಾ: ಬಂಗಾಳದಲ್ಲಿ ಟಿಎಂಸಿ ಗೆಲುವಿನ ರಹಸ್ಯ!

By Suvarna NewsFirst Published May 2, 2021, 3:28 PM IST
Highlights

ಪಶ್ಚಿಮ ಬಂಗಾಳದಲ್ಲಿ ಮೂರನೇ ಅಅವಧಿಗೆ ಟಿಎಂಸಿ ಅಧಿಕಾರ| ಬಿಜೆಪಿಯೂ ಸೋತಿಲ್ಲ, ಗಳಿಸಿದ್ದೇ ಹೆಚ್ಚು| ಎಡಪಕ್ಷ, ಕಾಂಗ್ರೆಸ್‌ ಮೈತ್ರಿಗೆ ಬಿಗ್ ಶಾಕ್| ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಐದು ಎಂ ಫ್ಯಾಕ್ಟರ್ಸ್‌

ಕೋಲ್ಕತ್ತಾ(ಮೇ.02): ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದಲ್ಲಿ '5 ಎಂ ಫ್ಯಾಕ್ಟರ್' ತನ್ನ ಪ್ರಭಾವ ತೋರಿಸಿದೆ. ಟಿಎಂಸಿ ಹಾಗೂ ಬಿಜೆಪಿ ಉಭಯ ಪಕ್ಷಗಳ ದೃಷ್ಟಿ ಈ ಐದು ವಿಚಾರಗಳ ಮೇಲೇ ಇದ್ದವು. ಅತ್ತ ಬಿಜೆಪಿ ಮೋದಿ ಪೇಮ್‌ ಹಾಗೂ ಮಟುವಾ ಸಮುದಾಯದ ಸಹಾಯದೊಂದಿಗೆ ಅಧಿಕಾರಕ್ಕೇರಲು ತಯಾರಿ ನಡೆಸಿದ್ದರೆ, ಇತ್ತ ಟಿಎಂಸಿ ಮಮತಾ, ಮಹಿಳೆ ಹಾಗೂ ಮುಸ್ಲಿಂ ಈ ವಿಚಾರವನ್ನಿಟ್ಟುಕೊಂಡು ಮೂರನೇ ಬಾರಿ ಅಧಿಕಾರಕ್ಕೇರಲು ತಂತ್ರ ಹೆಣೆದಿತ್ತು. ಈ M ಫ್ಯಾಕ್ಟರ್‌ನ ಪ್ರಭಾವದಿಂದಲೇ ಇಂದು ಮಮತಾ ಬ್ಯಾನರ್ಜಿ ಮತ್ತೆ ಸಿಎಂ ಆಗುವ ಹಾದಿಯಲ್ಲಿದ್ದಾರೆ. ಕಾಂಗ್ರೆಸ್‌, ಲೆಫ್ಟ್‌ ಹಾಗೂ ಐಎಸ್‌ಎಫ್‌ ಮೈತ್ರಿ ಮಾಡಿಕೊಂಡಿದ್ದರೂ ಮುಸ್ಲಿಂ ಮತದಾರರು ಮಮತಾ ಕೈ ಬಿಡಲಿಲ್ಲ. 
ಮತ್ತೊಂದೆಡೆ ಈ  ಫ್ಯಾಕ್ಟರ್‌ ಫಲ ಎಂಬಂತೆ ಐದು ವರ್ಷದ ಹಿಂದೆ ಕೇವಲ ಮೂರು ಸ್ಥಾನ ಪಡೆದಿದ್ದ ಬಿಜೆಪಿ ಈ ಬಾರಿ ನೂರು ಸ್ಥಾನದ ಆಸುಪಾಸು ತಲುಪಿದೆ. ಸದ್ಯದ ಫಲಿತಾಂಶ ಗಮನಿಸಿದರೆ ಈ ಚುನಾವಣೆಯಲ್ಲಿ ನಾಲ್ಕು M ಅಂದರೆ ಮಮತಾ, ಮುಸ್ಲಿಂ, ಮಟುವಾ, ಹಾಗೂ ಮಹಿಳೆಯರು ಟಿಎಂಸಿ ಜೊತೆಗಿರುವುದು ಸ್ಪಷ್ಟವಾಗಿದೆ. ಅತ್ತ ಬಿಜೆಪಿಗೆ ಕೇವಲ ಒಂದು M ಅಂದರೆ ಮೋದಿ ವರ್ಚಸ್ಸಷ್ಟೇ ಮತ ಗಳಿಸಿಕೊಟ್ಟಿದೆ.  

ದೀದೀ.. ಓ.. ದೀದೀಗೆ ತಕ್ಕ ಉತ್ತರ: ಮಮತಾಗೆ ಕಂಗ್ರಾಟ್ಸ್ ಎಂದ ಅಖಿಲೇಶ್ ಯಾದವ್!

5M ನಲ್ಲಿ ಅಧಿಕ ಟಿಎಂಸಿ ಜೊತೆಗೆ

ಪಶ್ಚಿಮ ಬಂಗಾಳದಲ್ಲಿ ಮಟಟುವಾ ಸಮುದಾಯದ ಸುಮಾರು 30 ಲಕ್ಷ ಮತದಾರರಿದ್ದಾರೆ. ಬಾಂಗ್ಲಾದೇಶದ ಗಡಿಯಲ್ಲಿರುವ ನಾದಿಯಾ, ಉತ್ತರ ಹಾಗೂ ದಕ್ಷಿಣ 24 ಪರಗಣದ ನಾಲ್ಕು ಲೋಕಸಭ ಕ್ಷೇತ್ರ ಹಾಗೂ ಸುಮಾರು 30 ರಿಂದ 40 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವ ಇವರ ಮೇಲೆ ಅವಲಂಭಿಸಿರುತ್ತದೆ. ಈ ಕ್ಷೇತ್ರಗಳಿಗೆ ಆರನೇ ಹಂತದಲ್ಲಿ ಅಂದರೆ ಏಪ್ರಿಲ್ 22ಕ್ಕೆ ನಡೆದಿತ್ತು. ಮಟುವಾ ಸಮುದಾಯ ಪಶ್ಚಿಮ ಬಂಗಾಳದ ಹಿಂದುಳಿದ ಜಾತಿಯ ಬಹುದೊಡ್ಡ ಭಾಗವಾಗಿದೆ. ಈ ಸಮುದಾಯ 1950ಕ್ಕೂ ಮೊದಲೇ ಪೂರ್ವ ಪಾಕಿಸ್ತಾನ ಹಾಗೂ ಈಗ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದವರು. ಧಾರ್ಮಿಕ ಆಧಾರದ ಮೇಲಿನ ಕಿರುಕುಳವೇ ಈ ವಲಸೆಗೆ ಕಾರಣ ಎನ್ನಲಾಗಿದೆ. 

 

ಹೀಗಿರುವಾಗ ಈ ಚುನಾವಣೆಯಲ್ಲಿ ಬಿಜೆಪಿ ಈ ಸಮುದಾಯವನ್ನು ಸಿಎಎ ಹಾಗೂ ಎನ್‌ಆರ್‌ಸಿಯಿಂದ ಹೊರಗಿಡುವುದಾಗಿ ಭರವಸೆ ನೀಡಿತ್ತು. ಆದರೀಗ ಫಲಿತಾಂಶ ಗಮನಿಸಿದರೆ ಬಿಜೆಪಿಯ ಈ ಭರವಸೆ ಜನರ ಮೇಲೆ ಪರಿಣಾಮ ಬೀರಿಲ್ಲ ಎಂಬುವುದನ್ನೇ ತಿಳಿಸುತ್ತದೆ. ಈ ಸಮುದಾಯದ ಜನತೆ ಟಿಎಂಸಿಗೇ ತಮ್ಮ ಮತ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಎದ್ದು, ದೀದಿ ಬಿದ್ರೆ ಏನಾಗುತ್ತೆ?

ಎಡ ಪಕ್ಷ ಹಾಗೂ ಕಾಂಗ್ರೆಸ್‌ಗೆ ಶಾಕ್‌ ಕೊಟ್ಟ ಮುಸ್ಲಿಂಮರು

ಇನ್ನು ಮುಡಸಲ್ಮಾನರ ಮತಗಳ ಬಗ್ಗೆ ಹೇಳುವುದಾದರೆ ಈ ಬಾರಿಯೂ ಇವರ ಕೀಲಿ ಕೈ ಮಮತಾ ಕೈಯ್ಯಲ್ಲೇ ಉಳಿದಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದೊಂದು ದಶಕದಿಂದ ಮುಸಲ್ಮಾನರು ಮಮತಾಗೆ ಸಾಥ್ ನೀಡಿದ್ದಾರೆ. ಈ ಬಾರಿ ಇವರ ಮನವೊಲಿಸಲು ಎಡ ಪಕ್ಷ ಹಾಗೂ ಕಾಂಗ್ರೆಸ್‌ ಐಎಸ್‌ಎಫ್‌ ಜೊತೆ ಕೈ ಜೋಡಿಸಿತ್ತು, ಹೀಗಿದ್ದರೂ ಮುಸಲ್ಮಾನರು ಮಮತಾ ಕೈ ಬಿಡಲಿಲ್ಲ ಎಂಬುವುದಕ್ಕೆ ಫಲಿತಾಂಶವೇ ಸಾಕ್ಷಿ. ಓವೈಸಿ ಪಕ್ಷಕ್ಕೂ ಈ ಬಾರಿ ತಕ್ಕ ಉತ್ತರ ಸಿಕ್ಕಿದೆ.

ಮಮತಾ ಜೊತೆ ನಿಂತ ಮುಸಲ್ಮಾನ ಮತದಾರರು

ಪಶ್ಚಿಮ ಬಂಗಾಳದ ಒಟ್ಟು 294 ವಿಧಾನಸಭಾ ಕ್ಷೇತ್ರಗಳಲ್ಲಿ 46 ಕ್ಷೇತ್ರಗಳಲ್ಲಿ ಮುಸಲ್ಮಾನರು ಶೇ. 50ಕ್ಕಿಂತ ಅಧಿಕವಿದ್ದಾರೆ. ಇನ್ನು 16 ರಿಂದ 20 ಕ್ಷೇತ್ರಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ. 40ಕ್ಕಿಂತ ಅಧಿಕವಿದೆ. 30 ರಿಂದ 35 ಕ್ಷೇತ್ರಗಳಲ್ಲಿ ಶೇ. 30ಕ್ಕಿಂತ ಹೆಚ್ಚು ಮುಸಲ್ಮಾನರಿದ್ದರೆ,  50 ಕ್ಷೇತ್ರಗಳಲ್ಲಿ ಶೇ.  25ಕ್ಕಿಂತ ಹೆಚ್ಚಿದ್ದಾರೆ. ಅಂದರೆ ಸುಮಾರು 120 ರಿಂದ 140 ಕ್ಷೇತ್ರಗಳಲ್ಲಿ ಮುಸಲ್ಮಾನರ ಓಟು ಭಾರೀ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ 100 ರಿಂದ 120 ಕ್ಷೇತ್ರಗಳಲ್ಲಿ ಟಿಎಂಸಿ ತನ್ನ ಮುಷ್ಠಿ ಬಿಗಿ ಹಿಡಿದಿದೆ ಎಂಬುವುದು ಫಲಿತಾಂಶವೇ ತಿಳಿಸಿ ಕೊಡುತ್ತದೆ.

ಪಶ್ಚಿಮ ಬಂಗಾಳ: ಮೋದಿ VS ದೀದಿ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಭರವಸೆಗೆ ಸಿಗಲಿಲ್ಲ ಮನ್ನಣೆ

ಇನ್ನು ಬಿಜೆಪಿ ಫಲಿತಾಂಶದ ಒಂದು ದಿನದ ಮೊದಲು 200ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮಾತುಗಳನ್ನಾಡುತ್ತಿತ್ತು. ಅದರಲ್ಲೂ ವಿಶೇಷವಾಗಿ ಚುನಾವಣೆಗೂ ಮುನ್ನ ಬಿಜೆಪಿ ಕಣ್ಣು ಒಬಿಸಿ ಮೇಲಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡು ಬಿಜೆಪಿ ವ್ಯವಸ್ಥಿತವಾಗಿ ಹಂಚಿಕೆ ನಡೆಸಿ ರಣತಂತ್ರ ಹೆಣೆದಿತ್ತು. ಪ್ರಮುಖವಾಗಿ ಮಟುವಾ ಸಮುದಾಯವನ್ನು ಸೆಳೆಯಲು ಬಿಜೆಪಿ ಬಹುದೊಡ್ಡ ತಂತ್ರ ಹೆಣೆದಿತ್ತು. ಈ ಸಮುದಾಯದ ನಾಯಕರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿತ್ತು. ಖುದ್ದು ಪಿಎಂ ಈ ನಡುವೆ ಬಾಂಗ್ಲಾದೇಶ ಪ್ರವಾಸ ಕೈಗೊಂಡು, ಈ ಸಮುದಾಆಯದ ದೇಗುಲಕ್ಕೆ ಭೇಟಿ ನೀಡಿ ಪೂಜೆ ನಡೆಸಿ ಇವರ ಮನ ಗೆಲ್ಲುವ ಯತ್ನ ನಡೆಸಿದ್ದರು. ಆದರೆ ಈ ತಂತ್ರ ಫಲಿಸಲಿಲ್ಲ. ಮಟಟುವಾ ಜನಾಂಗದ ಪ್ರಭಾವವಿರುವ ಸುಮಾರು 30 ಕ್ಷೇತ್ರಗಳಲ್ಲಿ ಟಿಎಂಸಿ ಅಬ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಯಾಕೆ ಬಿಜೆಪಿ ಕೈ ಹಿಡಿಯಲಿಲ್ಲ ಮಟುವಾ ಜನಾಂಗ

ಬಿಜೆಪಿ ಸಂಸದ ಹಾಗೂ ಮಾಟುವಾ ಠಾಕೂರ್ಬಾರಿ ಬಣದ ನಾಯಕ ಶಾಂತನು ಠಾಕೂರ್, ಟಿಎಂಸಿ ಹಾಗೂ ಸಿಪಿಐ (ಎಂ) ಸರ್ಕಾರ ನಮಗಾಗಿ ಏನೂ ಮಾಡಿಲ್ಲ ಎಂದಿದ್ದರು. ಆದರೆ ಇವರ ಮಾತನ್ನು ಆಲಿಸದ ಪಶ್ಚಿಮ ಬಂಗಾಳ ಜನತೆ ಟಿಎಂಸಿ ಮೇಲೆ ವಿಶ್ವಾಸವಿರಿಸಿ ಟಟಿಎಂಸಿಯನ್ನು ಗೆಲುವಿನ ದಡ ಸೇರಿಸಿದೆ. 

"

click me!