ಕೆಲವೇ ದಿನದಲ್ಲಿ ಭಾರತಕ್ಕೆ ಮರಳಲಿದ್ದಾರೆ ಸೀರಂ ಮುಖ್ಯಸ್ಥ ಅದಾರ್ ಪೂನಾವಾಲಾ

By Suvarna NewsFirst Published May 2, 2021, 3:15 PM IST
Highlights

ಕೋವಿಶೀಲ್ಡ್ ಸರಬರಾಜು ಮಾಡಲು ಒತ್ತಾಯಿಸಿ ಭಾರತದ ಕೆಲವು ಪ್ರಭಾವಿಗಳಿಂದ ಒತ್ತಡದ ಕರೆ | ಕೆಲವೇ ದಿನದಲ್ಲಿ ಮರಳಲಿದ್ದಾರೆ ಸೀರಂ ಸಿಇಒ

ದೆಹಲಿ(ಮೇ.02): ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ CEO ಅದಾರ್ ಪೂನವಾಲ್ಲಾ ಅವರು ಕೆಲವೇ ದಿನಗಳಲ್ಲಿ ಲಂಡನ್‌ನಿಂದ ಭಾರತಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.

ಕೊರೋನವೈರಸ್ ವಿರುದ್ಧ ದೇಶ ಹೋರಾಡುತ್ತಿರುವಾಗ ಭಾರತದಲ್ಲಿ ಲಸಿಕೆಗಾಗಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು COVID-19 ಲಸಿಕೆಗಳ ಉತ್ಪಾದನೆಗೆ ಸಂಬಂಧಿಸಿ ಅವರು ಎದುರಿಸುತ್ತಿರುವ ಒತ್ತಡಗಳ ಬಗ್ಗೆ ಮಾತನಾಡಿದ್ದಾರೆ.

ಒತ್ತಡಕ್ಕೆ ಬೆದರಿ ಸೀರಂ ಮಾಲೀಕ ಬ್ರಿಟನ್‌ಗೆ ಎಸ್ಕೇಪ್!

ಯುಕೆ ನಲ್ಲಿ ನಮ್ಮ ಎಲ್ಲ ಪಾಲುದಾರರೊಂದಿಗೆ ಸಭೆ ನಡೆಸಿದ್ದೇವೆ, ಪುಣೆಯಲ್ಲಿ ಕೋವಿಶೀಲ್ಡ್ ಉತ್ಪಾದನೆಯು ಭರದಿಂದ ಸಾಗುತ್ತಿದೆ ಎಂದು ಹೇಳಲು ಸಂತೋಷವಾಗಿದೆ. ಕೆಲವೇ ದಿನಗಳಲ್ಲಿ ನಾನು ಹಿಂದಿರುಗಿದ ನಂತರ ಕಾರ್ಯಾಚರಣೆಗಳನ್ನು ಪರಿಶೀಲಿಸುತ್ತೇನೆ  ಎಂದು ಪೂನವಾಲಾ ಟ್ವೀಟ್ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ಅವರಿಗೆ ಭಾರತ ಸರ್ಕಾರವು ವೈ ವರ್ಗದ ಭದ್ರತೆಯನ್ನು ಒದಗಿಸಿದೆ. ಪೂನವಾಲಾ ಸಂದರ್ಶನವೊಂದರಲ್ಲಿ ಭಾರತದ ಕೆಲವು  ಪ್ರಭಾವಿಗಳಿಂದ ಆಕ್ರಮಣಕಾರಿ ಕರೆಗಳನ್ನು ಸ್ವೀಕರಿಸುವ ಬಗ್ಗೆ ಹೇಳಿದ್ದಾರೆ. ಒತ್ತಡದ ಕಾರಣ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಲಂಡನ್‌ಗೆ ಹಾರಲು ನಿರ್ಧರಿಸಿದ್ದರು ಪೂನಾವಾಲಾ.

ಸೀರಂ ಮುಖ್ಯಸ್ಥ ಪೂನಾವಾಲಾಗೆ ‘ವೈ’ ಭದ್ರತೆ!

ಭಾರತೀಯ ಸರ್ಕಾರಿ ಅಧಿಕಾರಿಗಳ ಪ್ರಕಾರ, ಪೂನವಾಲಾ ಅವರಿಗೆ ಸಂಭಾವ್ಯ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಕ್ಷಣೆ ನೀಡಲಾಗಿದೆ. ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಶಸ್ತ್ರ ಕಮಾಂಡೋಗಳು ಅವರು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸುವಾಗಲೆಲ್ಲಾ ಅವರೊಂದಿಗೆ ಇರುತ್ತಾರೆ. 'ವೈ' ಭದ್ರತಾ ವ್ಯಾಪ್ತಿಯು ಸುಮಾರು 4-5 ಸಶಸ್ತ್ರ ಕಮಾಂಡೋಗಳಿರುತ್ತಾರೆ.

ಈ ವರ್ಷದ ಜನವರಿಯಲ್ಲಿ ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಲಸಿಕೆಯನ್ನು ಅನುಮೋದಿಸುವ ಹೊತ್ತಿಗೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 1.5 ಮಿಲಿಯನ್‌ನಿಂದ 2.5 ಬಿಲಿಯನ್ ಡೋಸ್‌ಗಳಿಗೆ ಹೆಚ್ಚಿಸಿತ್ತು. 

click me!