ವಿಶೇಷ ಪೂಜೆ: ಶಬರಿಮಲೆ ಅಯ್ಯಪ್ಪ ದೇಗುಲ ಓಪನ್‌!

By Suvarna NewsFirst Published Aug 18, 2020, 10:50 AM IST
Highlights

ಮಾಸಿಕ ವಿಶೇಷ ಪೂಜೆ| ಶಬರಿಮಲೆ ಅಯ್ಯಪ್ಪ ದೇಗುಲ ಓಪನ್‌|  ಕೊರೋನಾ ಸೋಂಕಿನ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಓಪನ್

ಪಟನಂತಿಟ್ಟ(ಆ.18): ಕೊರೋನಾ ಸೋಂಕಿನ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲನ್ನು ಐದು ದಿನಗಳ ಮಾಸಿಕ ವಿಶೇಷ ಪೂಜೆಗಾಗಿ ಸೋಮವಾರ ಬೆಳಗ್ಗೆ ತೆರೆಯಲಾಗಿದೆ. ಆಗಸ್ಟ್‌ 21ರವರೆಗೆ ಪೂಜೆ ನಡೆಯಲಿದೆ.

ಮಲಯಾಳಂ ಪಂಚಾಂಗದ ಪ್ರಕಾರ ಮೊದಲ ತಿಂಗಳಾದ ಚಿಂಗಂನಲ್ಲಿ ಅಯ್ಯಪ್ಪ ಸ್ವಾಮಿಗೆ ಐದು ದಿನಗಳ ಕಾಲ ವಿಶೇಷ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವವರು ಕಡ್ಡಾಯವಾಗಿ ಕೊರೊನಾ ನೆಗೆಟಿವ್‌ ಪ್ರಮಾಣ ಪತ್ರ ಹಾಜರುಪಡಿಸಬೇಕೆಂಬ ಕಟ್ಟುನಿಟ್ಟಿನ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ. ಈ ಬಾರಿ ಆಗಸ್ಟ್‌ 21ರವರೆಗೆ ದೇಗುಲ ತೆರೆದಿರಲಿದ್ದು, ನಂತರ ಓಣಂ ಪೂಜೆಯ ನಿಮಿತ್ತ ಮತ್ತೆ ಆಗಸ್ಟ್‌ 29ರಿಂದ ಸೆಪ್ಟೆಂಬರ್‌ 2ರ ತನಕ ದೇಗುಲದಲ್ಲಿ ಪೂಜೆಗಳು ನಡೆಯಲಿವೆ.

ಶಬರಿಮಲೆಗೆ ಪ್ರವೇಶವಿಲ್ಲ: ನೀರಿನಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಸಾವು

ಇದಕ್ಕೂ ಮುನ್ನ ತಿರುವಾಂಕೂರು ದೇವಸ್ಥಾನ ಮಂಡಳಿ ಅಧ್ಯಕ್ಷ ಎನ್‌.ವಾಸು ಅವರು,‘ ನವೆಂಬರ್‌ 16ರಿಂದ ಎರಡು ತಿಂಗಳ ಕಾಲ ಭಕ್ತಾದಿಗಳಿಗೆ ದರ್ಶನಕ್ಕಾಗಿ ದೇಗುಲ ತೆರೆಯಲಿದೆ’ ಎಂದು ಹೇಳಿದ್ದರು.

click me!