ತೈವಾನ್ ಬಳಿಕ ಹಿಮಾಚಲದಲ್ಲೂ 5.3 ತೀವ್ರತೆ ಭೂಕಂಪನ

By Suvarna NewsFirst Published Apr 5, 2024, 7:02 AM IST
Highlights

ತೈವಾನ್ ಬಳಿಕ ಹಿಮಾಚಲ ಪ್ರದೇಶದಲ್ಲಿ ಭಮಿ ಕಂಪಿಸಿದ್ದು, ರಿಕ್ಟರ ಮಾಪಕದಲ್ಲಿ 5.3 ತೀವ್ರತೆಯ ಕಂಪನ ದಾಖಲಾಗಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಸಣ್ಣಗೆ ಕಂಪಿಸಿದ ಅನುಭವವಾಗಿದ್ದು, ಹಿಮಾಚಲ ಪ್ರದೇಶದ ಚಂಬಾದಲ್ಲಿ 5.3 ತೀವ್ರತೆ ದಾಖಲಾಗಿದೆ. 

ಶಿಮ್ಲಾ: ತೈವಾನ್ ಬಳಿಕ ಹಿಮಾಚಲ ಪ್ರದೇಶದಲ್ಲಿ ಭಮಿ ಕಂಪಿಸಿದ್ದು, ರಿಕ್ಟರ ಮಾಪಕದಲ್ಲಿ 5.3 ತೀವ್ರತೆಯ ಕಂಪನ ದಾಖಲಾಗಿದೆ. ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಸಣ್ಣಗೆ ಕಂಪಿಸಿದ ಅನುಭವವಾಗಿದ್ದು, ಹಿಮಾಚಲ ಪ್ರದೇಶದ ಚಂಬಾದಲ್ಲಿ 5.3 ತೀವ್ರತೆ ದಾಖಲಾಗಿದೆ. 

ನಿನ್ನೆ ರಾತ್ರಿ. ಸಮಯ 9.34ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ (National Center for Seismology) ಹೇಳಿದೆ. ಚಂಬಾ ಮಾತ್ರವಲ್ಲದೇ ಪಂಜಾಬ್‌ನ ಕೆಲ ಭಾಗಗಳು, ಹರ್ಯಾಣ, ಚಂಡೀಗಢದಲ್ಲೂ ಭೂಕಂಪನದ ಅನುಭವವಾಗಿದೆ. ಚಂಬಾ ಜಿಲ್ಲೆಯಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಶಿಮ್ಲಾದ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

25 ವರ್ಷಗಳಲ್ಲೇ ಬಲಿಷ್ಠವಾದ ಭೂಕಂಪಕ್ಕೆ ತೈವಾನ್‌ ತತ್ತರ!

ಕೆಲವು ಸೆಕೆಂಡುಗಳ ಕಾಲ ಸಂಭವಿಸಿದ ಭೂಕಂಪದಿಂದ ಹಿಮಾಚಲ ಪ್ರದೇಶದ ಯಾವುದೇ ಭಾಗದಿಂದ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾನು ಒಂದೆರಡು ಸೆಕೆಂಡುಗಳ ಕಾಲ ಬಲವಾದ ಕಂಪನವನ್ನು ಅನುಭವಿಸಿದೆ. ನಾನು ಕೆಳಗೆ ಬರಲು ಯೋಚಿಸುತ್ತಿರುವಾಗ, ಈ ಕಂಪನ ನಿಂತುಹೋಯಿತು ಎಂದು ಚಂಡೀಗಢ ನಿವಾಸಿ ಸಂಜಯ್ ಕುಮಾರ್ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ 1905 ರಲ್ಲಿ ಇದೇ ದಿನ ಸಂಭವಿಸಿದ 8 ತೀವ್ರತೆಯ ಭೂಕಂಪದಿಂದ ದೊಡ್ಡ ಪ್ರಮಾಣದ ಸಾವು ನೋವು ಸಂಭವಿಸಿತ್ತು. ಎನ್‌ಸಿಎಸ್‌ ದಾಖಲೆಗಳ ಪ್ರಕಾರ  ಪಶ್ಚಿಮ ಹಿಮಾಲಯದಲ್ಲಿ ಸಂಭವಿಸಿದ ಈ ದುರಂತದಲ್ಲಿ 20,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ದ್ವೀಪರಾಷ್ಟ್ರ ತೈವಾನ್‌ನಲ್ಲಿ ಎರಡು ದಿನಗಳ ಹಿಂದಷ್ಟೇ 7.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಇದುವರೆಗೆ ಈ ಭೂಕಂಪನದಲ್ಲಿ ಒಟ್ಟು 10 ಜನ ಮಡಿದಿದ್ದಾರೆ. ಈ ಭೂಕಂಪನದ ಹಿನ್ನೆಲೆಯಲ್ಲಿ ಪೂರ್ವ ತೈವಾನ್ ಹಾಗೂ ಜಪಾನ್ ದಕ್ಷಿಣ ಭಾಗದಲ್ಲಿ ಸುನಾಮಿ ಅಲರ್ಟ್‌ ಘೋಷಿಸಲಾಗಿತ್ತು. 25 ವರ್ಷಗಳಲ್ಲೇ ಅತ್ಯಂತ ಬಲಿಷ್ಠವಾದ ಭೂಕಂಪನ ದ್ವೀಪರಾಷ್ಟ್ರ ತೈವಾನ್‌ನಲ್ಲಿ ಸಂಭವಿಸಿದ್ದು, ಕಟ್ಟಡಗಳು ಹಾಗೂ ಹೆದ್ದಾರಿಗಳಿಗೆ ಅಪಾರ ಹಾನಿಯಾಗಿದೆ.

ದ್ವೀಪರಾಷ್ಟ್ರ ತೈವಾನ್‌ನಲ್ಲಿ 7.4 ತೀವ್ರತೆಯ ಭಾರೀ ಭೂಕಂಪ: ಜಪಾನ್‌ನಲ್ಲಿ ಸುನಾಮಿ ಅಲರ್ಟ್‌

click me!