ಸೋನಿಯಾ ಗಾಂಧಿ ಈಗ ರಾಜ್ಯಸಭೆ ಸದಸ್ಯೆ: ಮೇಲ್ಮನೆ ಪ್ರವೇಶ ಇದೇ ಮೊದಲು

By Kannadaprabha NewsFirst Published Apr 5, 2024, 6:38 AM IST
Highlights

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ 14 ನೂತನ ರಾಜ್ಯಸಭಾ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕಸಿದರು. ಸೋನಿಯಾ ಈವರೆಗೆ ಲೋಕಸಭೆ ಸದಸ್ಯೆ ಆಗಿದ್ದರು.

ನವದೆಹಲಿ (ಏ.05): ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ 14 ನೂತನ ರಾಜ್ಯಸಭಾ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕಸಿದರು. ಸೋನಿಯಾ ಈವರೆಗೆ ಲೋಕಸಭೆ ಸದಸ್ಯೆ ಆಗಿದ್ದರು. ರಾಜ್ಯಸಭೆಗೆ ಅವರ ಪದಾರ್ಪಣೆ ಇದೇ ಮೊದಲು. ಎಲ್ಲರಿಗೂ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಗುರುವಾರ ನೂತನ ಸದಸ್ಯರಿಗೆ ಗೌಪ್ಯತೆಯ ವಿಧಿ ಬೋಧಿಸಿದರು.

ಪ್ರಮಾಣ ಸ್ವೀಕರಿಸಿದವರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಅಜಯ್ ಮಾಕನ್ ಮತ್ತು ಸೈಯದ್ ನಾಸೀರ್ ಹುಸೇನ್ ಕೂಡ ಇದ್ದಾರೆ. ಉಳಿದಂತೆ ಆರ್‌.ಪಿ.ಎನ್. ಸಿಂಗ್, ಸಮಿಕ್ ಭಟ್ಟಾಚಾರ್ಯ, ಸಂಜಯ್‌ ಕುಮಾರ್‌ ಝಾ, ಸುಭಾಶಿಶ್‌ ಖುಂಟಿಯಾ, ದೇಬಾಶಿಶ್‌ ಸಮಂತರಾಯ್‌, ಮದನ್‌ ರಾಠೋಡ್‌, ಗೊಲ್ಲ ಬಾಬು ರಾವ್‌, ಮೇದಾ ರಘುನಾಥ ರೆಡ್ಡಿ, ಯರ್ರಂ ವೆಂಕಟ ಸುಬ್ಬಾ ರೆಡ್ಡಿ, ರವಿಚಂದ್ರ ವಡ್ಡಿರಾಜು ಕೂಡ ಪ್ರಮಾಣವಚನ ಸ್ವೀಕರಿಸರು.

ಪ್ರಮಾಣ ವಚನ ಸ್ವೀಕಾರ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 12 ಜನರು ಬುಧವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ನೂತನ ಸದಸ್ಯರಿಗೆ ಗೋಪ್ಯತೆಯ ವಿಧಿ ಬೋಧಿಸಿದರು. ಇವರಲ್ಲಿ ಕರ್ನಾಟಕದಿಂದ ಕಾಂಗ್ರೆಸ್‌ ಆಯ್ಕೆಯಾದ ಜಿ.ಸಿ.ಚಂದ್ರಶೇಖರ್‌ ಕೂಡಾ ಸೇರಿದ್ದಾರೆ. ಉಳಿದಂತೆ ಕೇಂದ್ರ ಸಚಿವ ಎಲ್‌. ಮುರುಗನ್‌ ಹಾಗೂ ಧರ್ಮಶೀಲಾ ಗುಪ್ತಾ, ಮನೋಜ್ ಕುಮಾರ್ ಝಾ, ಸಂಜಯ್ ಯಾದವ್, ಗೋವಿಂದಭಾಯ್ ಲಾಲ್ಜಿಭಾಯಿ ಧೋಲಾಕಿಯಾ, ಸುಭಾಷ್ ಚಂದರ್, ಹರ್ಷ್ ಮಹಾಜನ್, ಅಶೋಕ್ ಸಿಂಗ್, ಚಂದ್ರಕಾಂತ್ ಹಂದೋರೆ, ಮೇಧಾ ವಿಶ್ರಮ್ ಕುಲಕರ್ಣಿ ಮತ್ತು ಸಾಧನಾ ಸಿಂಗ್.

ಅಮೇಠಿಯಿಂದ ಸ್ಮೃತಿ ವಿರುದ್ಧ ಸ್ಪರ್ಧೆ: ಸೋನಿಯಾ ಅಳಿಯ ವಾದ್ರಾ ಇಂಗಿತ

40 ಸ್ಟಾರ್‌ ಪ್ರಚಾರಕರು: ಲೋಕಸಭೆ ಚುನಾವಣೆ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ರಾಜ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು 40 ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಪ್ರಕಟಿಸಿರುವ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಸ್ಥಾನ ಪಡೆದಿದ್ದಾರೆ.

click me!