ರೈತರ ಆತ್ಮಹತ್ಯೆ ಪ್ರಕರಣಗಳಿಂದ ಸುದ್ದಿಯಲ್ಲಿರುವ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಈ ವರ್ಷವೂ ರೈತರ ಗೋಳು ಮುಂದುವರೆದಿದೆ.
ಔರಂಗಾಬಾದ್: ರೈತರ ಆತ್ಮಹತ್ಯೆ ಪ್ರಕರಣಗಳಿಂದ ಸುದ್ದಿಯಲ್ಲಿರುವ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಈ ವರ್ಷವೂ ರೈತರ ಗೋಳು ಮುಂದುವರೆದಿದೆ. ಕಳೆದ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಮರಾಠವಾಡ ಪ್ರಾಂತ್ಯದಲ್ಲಿ 483 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಬೀಡ್ ಜಿಲ್ಲೆಯಲ್ಲಿ ಅತಿ ಹೆಚ್ಚು 128 ಮಂದಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿ ಒಸ್ಮನಾಬಾದ್ 90, ನಾಂದೇಡ್ 89 ಜಿಲ್ಲೆಗಳಿವೆ. ಜನವರಿಯಲ್ಲಿ 62, ಫೆಬ್ರವರಿ 74, ಮಾಚ್‌ರ್ 78, ಏಪ್ರಿಲ್ 89, ಮೇ 88 ಹಾಗೂ ಜೂನ್‌ನಲ್ಲಿ 92 ರೈತರು ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷ ಈ ಭಾಗದಲ್ಲಿ 1022 ರೈತರು ಸಾವನ್ನಪ್ಪಿದ್ದರು ಎಂದು ಸರ್ಕಾರ ಮಾಹಿತಿ ನೀಡಿತ್ತು.
ಧಾರವಾಡ: ಸಾಲಬಾಧೆಗೆ ಒಂದೂವರೆ ತಿಂಗಳಲ್ಲಿ ಆರು ಜನ ರೈತರ ಆತ್ಮಹತ್ಯೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಹತ್ತಾರು ಯೋಜನೆ ರೂಪಿಸಿ ಅನುಕೂಲ ಕಲ್ಪಿಸಿದರೂ, ರೈತ ಆತ್ಮಹತ್ಯೆ ಆಗದಂತೆ ಜಾಗೃತಿ ಮೂಡಿಸಿದರೂ ರೈತರ ಆತ್ಮಹತ್ಯೆಗಳು ಮಾತ್ರ ನಿಂತಿಲ್ಲ. ಕೃಷಿ ಹಾಗೂ ತನ್ನ ಕುಟುಂಬದ ಜೀವನ ನಿರ್ವಹಣೆಗೆ ಬ್ಯಾಂಕ್ ಸೇರಿದಂತೆ ವಿವಿಧೆಡೆ ಸಾಲ ಮಾಡುವ ರೈತರು ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸಾಮಾನ್ಯವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಅದರಲ್ಲೂ ಜೂನ್ ತಿಂಗಳಲ್ಲಿಯೇ ಐವರು ಹಾಗೂ ಜುಲೈ 15ರೊಳಗೆ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ಬೇಸರದ ಸಂಗತಿ. ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪದ ಮಲ್ಲನಗೌಡ ಚನ್ನಪ್ಪಗೌಡ ಪಾಟೀಲ (31), ಗಂಗಿವಾಳದ ನಾಗರಾಜ ಗುರುನಾಥ ಗೊಡ್ಡೆಮ್ಮಿ (31) ಹಾಗೂ ಬಸವಣ್ಣೆವ್ವ ಗಂಗನಗೌಡರ, ಕುಂದಗೋಳ ತಾಲೂಕಿನ ಮುಳ್ಳೊಳ್ಳಿಯ ಗುರುಪ್ಪ ವಿರೂಪಾಕ್ಷಪ್ಪ ಅಡವಿ (38) ಹಾಗೂ ನವಲಗುಂದ ತಾಲೂಕಿನ ಮೊರಬ ಗ್ರಾಮದ ಶಹಜಾನಬಾನು ಹಮ್ಮದಮಿಯಾ ಬಡಿಮಿಯಾ (46) ಮೃತಪಟ್ಟರೈತರು.
ಆರು ಜನರ ಪೈಕಿ ಯುವ ರೈತರೇ ಹೆಚ್ಚಾಗಿದ್ದು ಇಬ್ಬರು ಮಹಿಳೆಯರು ಎನ್ನುವುದು ಸಹ ಗಮನಾರ್ಹ. ಇನ್ನು, ಒಂದೂವರೆ ತಿಂಗಳಲ್ಲಿ ಆರು ಪ್ರಕರಣ ಹೊರತು ಪಡಿಸಿ ಜುಲೈ 10ರಂದು ಧಾರವಾಡ ತಾಲೂಕು ಸೈಬನಕೊಪ್ಪದಲ್ಲೊಂದು ರೈತ ಆತ್ಮಹತ್ಯೆ ಪ್ರಕರಣ ನಡೆದಿದೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲ್ಲಪ್ಪ ಕುರಗುಂದ (55) ಮೃತ ರೈತ. ಈ ಸಾವಿನ ಬಗ್ಗೆ ಜಿಲ್ಲಾಡಳಿತದ ಪರಿಶೀಲನೆ ನಡೆಯುತ್ತಿದ್ದು ನಂತರದಲ್ಲಿ ಅಧಿಕೃತ ರೈತ ಆತ್ಮಹತ್ಯೆ ಎಂದು ಪರಿಗಣಿಸಲಾಗುತ್ತದೆ.
ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರಕ್ಕೆ ಚಿಂತೆಯಿಲ್ಲ: ಎಚ್‌ಡಿಕೆ ಆಕ್ರೋಶ
ಮೃತ ರೈತರ ಪೈಕಿ ಬಹುತೇಕರು ನೇಣಿಗೆ ಕೊರಳೊಡ್ಡಿದವರು. ಇದರೊಂದಿಗೆ ಒಂದು ಪ್ರಕರಣ ವಿಷ ಸೇವನೆ. ಎಲ್ಲ ರೈತರ ಆತ್ಮಹತ್ಯೆಗೆ ಸಾಲದ ಬಾಧೆಯೇ ಎಂದು ಕಂಡು ಬಂದಿದೆ. ಉತ್ತಮ ಫಸಲು ಬರಲಿದೆ ಎಂದು ಸಾಲ ಮಾಡಿ ಲಕ್ಷಾಂತರ ವೆಚ್ಚ ಮಾಡಿಕೊಂಡ ರೈತರಿಗೆ ಬೆಳೆ ಕೈಕೊಟ್ಟಾಗ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ಪ್ರಕರಣಗಳಿವು. ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿಕೊಂಡು ಬಡ್ಡಿ ಹಾಗೂ ಅಸಲು ತುಂಬಲಾಗದೇ ತೊಂದರೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಜಿಲ್ಲಾಡಳಿತವು ನಡೆಸಿದ ಪರಿಶೀಲನೆಯಿಂದ ಕಂಡು ಬಂದಿದೆ. ಬಹುತೇಕ ಪ್ರಕರಣಗಳನ್ನು ಪರಿಶೀಲಿಸಿ ರೈತರಿಗೆ ಸರ್ಕಾರ ಪರಿಹಾರ ಸಹ ನೀಡಿದೆ. ಕೆಲವು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.
ಮುಂಗಾರು ವೈಫಲ್ಯ: ಎರಡೇ ತಿಂಗಳಲ್ಲಿ 42 ರೈತರ ಆತ್ಮಹತ್ಯೆ!