ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸುದೀರ್ಘ ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಸೋಮವಾರವೂ ಮುಂದುವರಿದಿತ್ತು. ಹೀಗಾಗಿ ಇಡೀ ದಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಲಾಪ ಸಾಧ್ಯವಾಗಲಿಲ್ಲ.
ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸುದೀರ್ಘ ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಸೋಮವಾರವೂ ಮುಂದುವರಿದಿತ್ತು. ಹೀಗಾಗಿ ಇಡೀ ದಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಲಾಪ ಸಾಧ್ಯವಾಗಲಿಲ್ಲ.
ಈ ನಡುವೆ, ಚರ್ಚೆಗೆ ಸರ್ಕಾರ ಸಿದ್ಧವಿದೆ. ಸದನ ನಡೆಯಲು ಅವಕಾಶ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ ಮನವಿಗೂ ವಿಪಕ್ಷಗಳು ಕಿವಿಗೊಡಲಿಲ್ಲ. ಅಲ್ಲದೆ, ರಾಜ್ಯಸಭೆ ಸಭಾಪತಿ ಧನಕರ್ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ವಿಪಕ್ಷಗಳನ್ನು ಸಂಪರ್ಕಿಸಿ ಸುಗಮ ಕಲಾಪಕ್ಕೆ ಸಂಧಾನ ಯತ್ನ ನಡೆಸಿದರೂ ಫಲಿಸಲಿಲ್ಲ. ಮೋದಿ ಅವರೇ ಬಂದು ಉತ್ತರಿಸಬೇಕು ಎಂದು ಪಟ್ಟು ಹಿಡಿದವು. ಹೀಗಾಗಿ ಮಂಗಳವಾರಕ್ಕೆ ಕಲಾಪ ಮುಂದೂಡಿಕೆ ಆಯಿತು.
Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್ ಕೇಸ್!
ಈ ನಡುವೆ, ಸದನದ ಹೊರಗೆ ಕೂಡ ಆಡಳಿತ ಹಾಗೂ ವಿಪಕ್ಷಗಳು ಪರಸ್ಪರರ ವಿರುದ್ಧ ಪ್ರತಿಭಟಿಸಿಕೊಂಡವು. ಮಣಿಪುರ ಹಿಂಸಾಚಾರ ಖಂಡಿಸಿ ವಿಪಕ್ಷಗಳ ‘ಇಂಡಿಯಾ’ ಕೂಟದ ಸಂಸದರು ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸಂಸದರು, ಕಾಂಗ್ರೆಸ್ ಆಡಳಿತದ ರಾಜಸ್ಥಾನ ಮಹಿಳಾ ದೌರ್ಜನ್ಯದಲ್ಲಿ ನಂ.1 ರಾಜ್ಯ. ಈ ಬಗ್ಗೆ ಚರ್ಚೆ ನಡೆಯಲಿ’ ಎಂದು ಆಗ್ರಹಿಸಿದವು.
ಚರ್ಚೆ ನಡೆಯಲಿ, ಸತ್ಯ ಹೊರಬರಲಿ: ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಾತನಾಡಿ, ವಿಪಕ್ಷಗಳು ಚರ್ಚೆಗೆ ಅವಕಾಶ ನೀಡಬೇಕು. ಆಗ ದೇಶದ ಮುಂದೆ ಮಣಿಪುರ ಘಟನೆಗಳ ಸತ್ಯ ಹೊರಬರಲಿದೆ. ನಾನು ಚರ್ಚೆಗೆ ಸಿದ್ಧನಿದ್ದೇನೆ. ವಿಪಕ್ಷಗಳು ಏಕೆ ಪ್ರತಿಭಟನೆ ಮಾಡುತ್ತಿವೆಯೋ ಗೊತ್ತಿಲ್ಲ ಎಂದರು.
ಮಣಿಪುರ ಕ್ರೌರ್ಯದ ಮತ್ತಷ್ಟು ಕತೆ ವ್ಯಥೆ: ಯುವ ಪೀಳಿಗೆಗೆ ಪಾರಾಗುವಂತೆ ಹೇಳಿ ಪ್ರಾಣ ಬಿಟ್ಟ ಯೋಧನ ಪತ್ನಿ