'ಬಾಲ್ಯದಿಂದಲೂ ದೇವಸ್ಥಾನಗಳಿಗೆ ಹೋಗುತ್ತಿದ್ದೆ': ಇಸ್ಲಾಂ ತೊರೆದು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ವ್ಯಕ್ತಿ

Published : May 27, 2022, 07:17 PM ISTUpdated : May 27, 2022, 07:19 PM IST
'ಬಾಲ್ಯದಿಂದಲೂ ದೇವಸ್ಥಾನಗಳಿಗೆ ಹೋಗುತ್ತಿದ್ದೆ': ಇಸ್ಲಾಂ ತೊರೆದು ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ವ್ಯಕ್ತಿ

ಸಾರಾಂಶ

ಮಧ್ಯಪ್ರದೇಶ ಮಂದಸೌರ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾನೆ. ಮಂದಸೌರ್‌ನ ಪಶುಪತಿನಾಥ ದೇವಸ್ಥಾನದಲ್ಲಿ ಕಾನೂನಿನ ಮೂಲಕ ಧಾರ್ಮಿಕ ಮತಾಂತರ ಮಾಡಲಾಗಿದೆ. ಈ ವೇಳೆ ಬಿಜೆಪಿ ಸಂಸದರು, ಶಾಸಕರು ಕೂಡ ಹಾಜರಿದ್ದರು.

ಮಂದಸೌರ್‌ (ಮೇ 27):  ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು  ಹಿಂದೂವಾಗಿ ಮತಾಂತರಗೊಂಡಿದ್ದಾರೆ. ಗೋಮೂತ್ರ ಮತ್ತು ಸಗಣಿಯಿಂದ ಸ್ನಾನ ಮಾಡಿದ ಬಳಿಕ, ಪಶುಪತಿನಾಥ ದೇವಾಲಯದಲ್ಲಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಗುಲಾಮ್ ಮೊಯಿನುದ್ದೀನ್ ಶೇಖ್ ಅವರ ಮಗ ಶೇಖ್ ಜಾಫರ್ (Jaffar Shiekh) ಅವರನ್ನು ಈಗ ಚೈತನ್ಯ ಸಿಂಗ್ ರಜಪೂತ್ ಎಂದು ಮರುನಾಮಕರಣ ಮಾಡಲಾಗಿದೆ. 

ಶುಕ್ರವಾರ ಪಶುಪತಿನಾಥ ದೇವಾಲಯದ ಆವರಣದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ 46 ವರ್ಷದ ಶೇಖ್ ಅವರಿಗೆ ಮಹಾಮಂಡಲೇಶ್ವರ ಸ್ವಾಮಿ ಚಿದಂಬರಾನಂದ ಸರಸ್ವತಿ ಅವರು ಧಾರ್ಮಿಕ ಪೂಜೆ ಮಾಡುವ ಮೂಲಕ ಹಿಂದೂ ಧರ್ಮಕ್ಕೆ ದೀಕ್ಷೆ ನೀಡಿದ್ದಾರೆ. 

ಇದು ಘರ್‌ ವಾಪಸಿ: ಈ ವೇಳೆ ದೇವಸ್ಥಾನದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಹಸುವಿನ ಸಗಣಿ ಮತ್ತು ಮೂತ್ರದಿಂದ ಸ್ನಾನದ ಬಳಿಕ ಹಿಂದೂ ಧರ್ಮವನ್ನು (Hindu)  ಸ್ವೀಕರಿಸಿದ ಶೇಖ್ ಜಾಫರ್ "ಇದು ಘರ್‌ ವಾಪಸಿ, ಬಾಲ್ಯದಿಂದಲೂ ನಾನು ಹಿಂದೂ ಧರ್ಮದತ್ತ ಒಲವು ಹೊಂದಿದ್ದೆ, ಅದಕ್ಕಾಗಿಯೇ ನಾನು ಹಿಂದೂ ಹುಡುಗಿಯನ್ನು ಮದುವೆಯಾದೆ. ಇಲ್ಲಿಯವರೆಗೆ ನಾನು ಅಪೂರ್ಣ ಎಂದು ಭಾವಿಸುತ್ತಿದ್ದೆ ಆದರೆ ಈಗ ಹಿಂದೂ ಧರ್ಮಕ್ಕೆ ಮತಾಂತರಗೊಂಡ (Conversion) ನಂತರ ನಾನು ಸಂಪೂರ್ಣ ಹಿಂದೂ ಆಗಿದ್ದೇನೆ. ಇದರಿಂದ ನನಗೆ ಸಮಾಧಾನವಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪರ ಧರ್ಮ ಸಹಿಷ್ಣುತೆ ಅವಶ್ಯ: ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ!

ಈ ಸಂದರ್ಭದಲ್ಲಿ ಸಂಸದ ಸುಧೀರ್ ಗುಪ್ತಾ ಮತ್ತು ಶಾಸಕ ಯಶ್ಪಾಲ್ ಸಿಂಗ್ ಸಿಸೋಡಿಯಾ ಕೂಡ ದೇವಸ್ಥಾನಕ್ಕೆ ಆಗಮಿಸಿ  ಹಾರೈಸಿದ್ದಾರೆ. ಇಡೀ ಪ್ರಕ್ರಿಯೆಯಲ್ಲಿ ಶಾಸಕ ಸಿಸೋಡಿಯಾ ದೇವಸ್ಥಾನದಲ್ಲಿಯೇ ಇದ್ದರು. ಈಗ ಮುಸ್ಲಿಂ ವ್ಯಕ್ತಿಯ ಮತಾಂತರದ ಘಟನೆಯು ಮಧ್ಯ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಚೇತನ್ ಸಿಂಗ್ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿವೆ. ಚೇತನ್ ಸಿಂಗ್ 10 ವರ್ಷಗಳ ಹಿಂದೆ ಹಿಂದೂ ಯುವತಿಯೊಂದಿಗೆ ಪ್ರೇಮ ವಿವಾಹವಾಗಿದ್ದರು.

ಕುಟುಂಬದ ಸದಸ್ಯರು ವಿರೋಧವಿಲ್ಲ:  ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್ ಸಿಂಗ್, "ನಾನು ಈಗಾಗಲೇ ಹಿಂದೂ ಧರ್ಮವನ್ನು ಅನುಸರಿಸುತ್ತೇನೆ. ನಾನು ಮತಾಂಧ ಜನರನ್ನು ಇಷ್ಟಪಡುವುದಿಲ್ಲ. ನನ್ನ ಹೆಂಡತಿಯ ಹೆಸರು ಶಾರದಾ. ನಾನು ಲವ್ ಮ್ಯಾರೇಜ್ ಮಾಡಿದ್ದೇನೆ. ನನ್ನ ಮನೆಯಲ್ಲೂ ದೇವಸ್ಥಾನವಿದೆ. ಯಾವುದೇ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಲಿಲ್ಲ" ಎಂದು ಹೇಳಿದ್ದಾರೆ

ರಜಪೂತ ಹೆಸರನ್ನು ಆರಿಸಿದ್ದರೆ ಬಗ್ಗೆ ಕೇಳಿದಾಗ "ಮುಸ್ಲಿಮರ (Muslim) ಪೂರ್ವಜರು ರಜಪೂತರು. ಅದಕ್ಕಾಗಿಯೇ ನಾನು ರಜಪೂತ ಎಂಬ ಹೆಸರನ್ನು ಸಹ ಆರಿಸಿಕೊಂಡಿದ್ದೇನೆ. ನಾನು ಈಗಾಗಲೇ ಶಿವಭಕ್ತ. ನಾನು ಬಾಲ್ಯದಿಂದಲೂ ಸನಾತನ ಧರ್ಮಕ್ಕೆ ಆಕರ್ಷಿತನಾಗಿದ್ದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣರು ಜಾತಿಗೆ ಸೀಮಿತರಲ್ಲ: ಅಶೋಕ್ ಹಾರನಹಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ