Blast In Chemical Factory: ಗುಜರಾತ್‌ನ ವಡೋದರಾದಲ್ಲಿ ಸ್ಫೋಟ : ನಾಲ್ವರ ದಾರುಣ ಸಾವು

By Suvarna NewsFirst Published Dec 24, 2021, 4:40 PM IST
Highlights
  • ಗುಜರಾತ್‌ನ ವಡೋದರಾದಲ್ಲಿ ಸ್ಫೋಟ
  • ರಾಸಾಯನಿಕ ಫ್ಯಾಕ್ಟರಿಯಲ್ಲಿ ದುರಂತ
  • ನಾಲ್ವರ ದಾರುಣ ಸಾವು

ವಡೋದರಾ(ಡಿ.24): ಗುಜರಾತ್‌ನ ವಡೋದರಾದಲ್ಲಿ ರಾಸಾಯನಿಕ ಫ್ಯಾಕ್ಟರಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಗುಜರಾತ್‌ನ ವಡೋದರಾದ ಜಿಐಡಿಸಿ ಪ್ರದೇಶದಲ್ಲಿ ಶುಕ್ರವಾರ ರಾಸಾಯನಿಕ ಕಾರ್ಖಾನೆಯ ಬಾಯ್ಲರ್‌ನ ಪ್ರಬಲ ಸ್ಫೋಟ ಸಂಭವಿಸಿದೆ. ದುರಂತದಲ್ಲಿ  ನಾಲ್ಕು ವರ್ಷದ ಬಾಲಕಿ ಸೇರಿದಂತೆ ಇತರ ಮೂವರು ಸಾವನ್ನಪ್ಪಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ 65 ವರ್ಷದ ಪುರುಷ, ಹದಿಹರೆಯದವರು ಮತ್ತು 30 ವರ್ಷದ ಮಹಿಳೆ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಳಗ್ಗೆ 9.30 ರ ಸುಮಾರಿಗೆ ಪ್ರಬಲವಾದ ಸ್ಫೋಟ ಸಂಭವಿಸಿದೆ. ಪ್ರಾರಂಭದಲ್ಲಿ ಈ ದುರಂತದಲ್ಲಿ ಹದಿನೈದು ಜನರು ಗಾಯಗೊಂಡಿದ್ದರು. ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಅವರಲ್ಲಿ ನಾಲ್ವರು ಚಿಕಿತ್ಸೆ ನೀಡುತ್ತಿದ್ದ ವೇಳೆ ಸಾವನ್ನಪ್ಪಿರುವುದಾಗಿ  ಘೋಷಿಸಲಾಯಿತು ಎಂದು ಮಕರಪುರ ಪೊಲೀಸ್ ಠಾಣೆಯ (Makarpura police station) ಇನ್ಸ್‌ಪೆಕ್ಟರ್ ಸಾಜಿದ್ ಬಲೋಚ್ (Sajid Baloch) ಹೇಳಿದ್ದಾರೆ.

ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ : ಇಬ್ಬರ ದುರ್ಮರಣ

ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರಲ್ಲಿ ಕಾರ್ಮಿಕರು ಮತ್ತು ಸ್ಫೋಟ ಸಂಭವಿಸಿದಾಗ ಆ ಪ್ರದೇಶದಿಂದ ಹಾದು ಹೋಗುತ್ತಿದ್ದ ಜನರು ಸೇರಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸಾಜಿದ್ ಬಲೋಚ್ ಹೇಳಿದರು. ದುರಂತದಲ್ಲಿ  ಮೃತಪಟ್ಟ ನಾಲ್ವರು ಸ್ಫೋಟದ ವೇಳೆ ದೂರಕ್ಕೆ ಹಾರಲ್ಪಟ್ಟ ವಸ್ತುಗಳು ಸಾಗಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ನೀಡಿದ್ದು,  ಸ್ಫೋಟದ ಕಾರಣ ಪತ್ತೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Viral News: 30 ಕೆಜಿ ಡೈನಾಮೇಟ್ ಇಟ್ಟು ತನ್ನ ಕಾರನ್ನೇ ಸ್ಫೋಟಿಸಿದ ಭೂಪ!  

ನಿನ್ನೆಯಷ್ಟೇ ಪಂಜಾಬ್‌ನ ಲೂಧಿಯಾನದ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿ ದುರಂತದಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಮಧ್ಯಾಹ್ನ 12:22 ರ ಸುಮಾರಿಗೆ ಪಂಜಾಬ್‌ನ ಲೂಧಿಯಾನದ ನ್ಯಾಯಾಲಯದ ಸಂಕೀರ್ಣದಲ್ಲಿ ಹಠಾತ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿ ನಾಲ್ವರು ಗಾಯಗೊಂಡಿದ್ದರು.  ಸ್ಫೋಟದ ತೀವ್ರತೆಗೆ ಬಾತ್‌ರೂಮ್‌ನ ಗೋಡೆಗೆ ಹಾನಿಯಾಗಿದ್ದು, ಹತ್ತಿರದ ಕಿಟಕಿಗಳ ಗಾಜುಗಳು ಛಿದ್ರಗೊಂಡಿದ್ದವು. 

ಘಟನೆ ಬಗ್ಗೆ ಪ್ರತಿಕ್ರಿಯಿಸಿದರುವ ಪಂಜಾಬ್ ಮುಖ್ಯ ಮಂತ್ರಿ ಚರಂಜಿತ್ ಸಿಂಗ್ ಚನ್ನಿ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೆಲವು ದೇಶ ವಿರೋಧಿಗಳು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಅಲರ್ಟ್ ಆಗಿದೆ. ತಪ್ಪಿತಸ್ಥರೆಂದು ಕಂಡುಬಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು.  

ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಪೋಟದ ಬಗ್ಗೆ ದೆಹಲಿ ಸಿಎಂ (Delhi Chief Minister) ಅರವಿಂದ್‌ ಕೇಜ್ರಿವಾಲ್‌(Arvind Kejriwal) ಪ್ರತಿಕ್ರಿಯಿಸಿದ್ದು, ಸ್ಫೋಟದಲ್ಲಿ ಸಾವನ್ನಪ್ಪಿದ ಇಬ್ಬರಿಗೆ ಪರಿಹಾರ ನೀಡಬೇಕು. ನ್ಯಾಯಾಲಯದ ಕಟ್ಟಡದ ಎರಡನೇ ಮಹಡಿಯಲ್ಲಿ ಕೋರ್ಟ್‌ನ ಸ್ನಾನಗೃಹದೊಳಗೆ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ನಾಲ್ವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್‌ ಮಾಡಿ ಹಾರೈಸಿದ್ದರು. ಕೆಲವರು ಪಂಜಾಬ್‌ನಲ್ಲಿ ಶಾಂತಿ ಕದಡಲು ಬಯಸುತ್ತಾರೆ. ಪಂಜಾಬ್‌ನ ಮೂರು ಕೋಟಿ ಜನರು ದುರುಳರ ಈ ಯೋಜನೆಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ. ನಾವು ಪರಸ್ಪರರ ಕೈಗಳನ್ನು ಹಿಡಿಯಬೇಕು. ಮೃತರ ಕುಟುಂಬಗಳಿಗೆ ನನ್ನ ಸಂತಾಪ ಮತ್ತು ಗಾಯಗೊಂಡ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಅರವಿಂದ್‌ ಕೇಜ್ರಿವಾಲ್‌ ಟ್ವಿಟ್‌ನಲ್ಲಿ ಹೇಳಿದ್ದರು

click me!