
ನವದೆಹಲಿ(ಡಿ.24): ಕೇಂದ್ರ ಆರೋಗ್ಯ ಸಚಿವ ಮನ್ಶುಕ್ ಮಾಂಡವಿಯಾ (Manshukh Mandaviya) ಅವರು ಟ್ವಿಟರ್‌ನಲ್ಲಿ ಅತ್ಯಂತ ಹೃದಯಸ್ಪರ್ಶಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯೊಬ್ಬರು ಒಂಟೆ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಈ ಆರೋಗ್ಯ ಕಾರ್ಯಕರ್ತೆ ಹಳ್ಳಿ ಹಳ್ಳಿಗೂ ಕೋವಿಡ್ ಲಸಿಕೆ ತಲುಪುವ ನಿಟ್ಟಿನಲ್ಲಿ ದೂರದ ಹಳ್ಳಿಗಳ ಜನರನ್ನು ತಲುಪುವ ಸಲುವಾಗಿ ತಾವೇ ಒಂಟೆ ಸವಾರಿ ಮಾಡುತ್ತಿರುವ ದೃಶ್ಯವಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ಲಸಿಕೆ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆಯಾಗಿದೆ.
ಆದರೆ ಈ ಆರೋಗ್ಯ ಕಾರ್ಯಕರ್ತೆ ಯಾರು ಎಂಬ ಉಲ್ಲೇಖ ಈ ಪೋಸ್ಟ್‌ನಲ್ಲಿ ಇಲ್ಲ. ' ಇದೊಂದು ಸಂಕಲ್ಪ ಹಾಗೂ ಕರ್ತವ್ಯ ನಿಷ್ಠೆಯ ಸಂಗಮ' ರಾಜಸ್ತಾನದ ಬಡಮೇರ್ ಜಿಲ್ಲೆಯ ಕೋವಿಡ್ ಲಸಿಕಾಕರಣದ ಫೋಟೋ ಇದು ಎಂದು ಬರೆದು ಕೇಂದ್ರ ಆರೋಗ್ಯ ಸಚಿವ ಮನ್ಶುಕ್ ಮಾಂಡವಿಯಾ ಅವರು ಟ್ವಿಟರ್‌ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ಒಡಿಶಾದ ಆರೋಗ್ಯ ಕಾರ್ಯಕರ್ತೆಯೊಬ್ಬರು ತಮ್ಮ ಕರ್ತವ್ಯ ನಿಷ್ಠೆಯಿಂದಾಗಿ ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ತಿಂಗಳಿಗೆ ಕೇವಲ 4,500 ರೂ ಸಂಬಳ ಪಡೆಯುವ ಒಡಿಶಾ ಮೂಲದ ಆದಿವಾಸಿ ಸಮುದಾಯದ ಆಶಾ ಕಾರ್ಯಕರ್ತೆ ಮತಿಲ್ದಾ ಕುಲ್ಲು ಒಡಿಶಾದ ಸುಂದರ್‌ಗರ್(Sundargarh) ಜಿಲ್ಲೆಯವರು. ಇವರು ಒಡಿಶಾದ ತೆಹ್ಸಿಲ್‌ನ 964 ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಇವರು ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕೆಲಸಗಳಿಂದ ಗುರುತಿಸಲ್ಪಟ್ಟಿದ್ದಾರೆ.
ಪ್ರತಿದಿನ ತನ್ನ ಸೈಕಲ್‌ನಲ್ಲಿ ತೆರಳುವ ಮತಿಲ್ದಾ ಗ್ರಾಮದಲ್ಲಿ ಪ್ರತಿ ಮನೆ ಬಾಗಿಲುಗಳಿಗೆ ಹೋಗಿ ಜನರ ಆರೋಗ್ಯದ ಕುರಿತಾದ ಮಾಹಿತಿಯನ್ನು ಪಡೆಯುತ್ತಿದ್ದರು. ಅದರ ಜೊತೆ ನವಜಾತ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕುವುದು, ಪ್ರಸವಪೂರ್ವ ತಪಾಸಣೆ ನಡೆಸುವ ಬಗ್ಗೆ, ಹೆರಿಗೆಗೆ ಸಿದ್ಧತೆ ನಡೆಸುವ ಬಗ್ಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೇರಿದಂತೆ ಹೀಗೆ ಹಲವಾರು ಸಲಹೆಗಳನ್ನು ಗ್ರಾಮಸ್ಥರಿಗೆ ಇವರು ನೀಡುತ್ತಾರೆ. ಮಧ್ಯರಾತ್ರಿ ಹೆರಿಗೆ ನೋವು ಅನುಭವಿಸುವ ಮಹಿಳೆಯರಿಗೆ ಚಿಕಿತ್ಸೆಯನ್ನು ಇವರು ನೀಡಿದ್ದಾರೆ. ಈ ಹಿನ್ನೆಲೆ ಫೋರ್ಬ್ಸ್‌ನ 2021ರ ಭಾರತದ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಮತಿಲ್ದಾ ಕುಲ್ಲು ಸ್ಥಾನ ಪಡೆದಿದ್ದಾರೆ
ಈ ನಡುವೆ ಭಾರತದ COVID-19 ವ್ಯಾಕ್ಸಿನೇಷನ್ ಕವರೇಜ್ 140.24 ಕೋಟಿ ಜನರನ್ನು ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ತಿಳಿಸಿದೆ. ಭಾರತದ COVID-19 ವ್ಯಾಕ್ಸಿನೇಷನ್ ಕವರೇಜ್ ಇಂದು 140.24 ಕೋಟಿ (1,40,24,47,922) ಗಡಿ ದಾಟಿದೆ. ಕೇವಲ ಒಂದೇ ದಿನ 51 ಲಕ್ಷಕ್ಕೂ ಹೆಚ್ಚು (51,73,933) ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ನೆಟ್‌ವರ್ಕ್ ಇಲ್ಲ: ಒಂಟೆ ಹತ್ತಿ ಬಂದು ಪಾಠ ಹೇಳ್ತಾರೆ ಈ ಶಿಕ್ಷಕರು
ಇದರೊಂದಿಗೆ ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಒಮಿಕ್ರಾನ್‌ನ 122 ಪ್ರಕರಣ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು, ಇದರೊಂದಿಗೆ ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 358ಕ್ಕೆ ಏರಿಕೆ ಆಗಿದೆ. ಒಮಿಕ್ರಾನ್ ಬಂದವರಲ್ಲಿ 114 ಜನರು ಚೇತರಿಸಿಕೊಂಡಿದ್ದಾರೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಲ್ಲವೂ ಸೇರಿ ದೇಶದಲ್ಲಿ ಒಟ್ಟು 358 ಒಮಿಕ್ರಾನ್ ಕೋವಿಡ್ ರೂಪಾಂತರಿ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
women empowerment: ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಒಡಿಶಾದ ಆಶಾ ಕಾರ್ಯಕರ್ತೆ
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 88 ಒಮಿಕ್ರಾನ್ ವೇರಿಯಂಟ್ ಪ್ರಕರಣಗಳು ದಾಖಲಾಗಿದ್ದು, ದೆಹಲಿ (Delhi) ಯಲ್ಲಿ 67, ತೆಲಂಗಾಣ (Telangana) 38, ತಮಿಳುನಾಡು (Tamil Nadu) 34, ಕರ್ನಾಟಕ (Karnataka) 31 ಮತ್ತು ಗುಜರಾತ್ (Gujarat) ನಲ್ಲಿ 30 ಪ್ರಕರಣಗಳು ದಾಖಲಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ