ವಂದೇ ಭಾರತ್ ರೈಲಿಗೆ ದಿನಕ್ಕೊಂದು ವಿಘ್ನ, 3ನೇ ದಿನ ಚಕ್ರ ಜಾಮ್‌ನಿಂದ ಶತಾಬ್ದಿಗೆ ಪ್ರಯಾಣಿಕರ ಶಿಫ್ಟ್!

By Suvarna News  |  First Published Oct 8, 2022, 8:27 PM IST

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ ಅನ್ನೋ ಲೆಕ್ಕಾಚಾರಕ್ಕೆ ಪ್ರತಿ ದಿನ ಅಡ್ಡಿಯಾಗುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ವಿಘ್ನ ಎದುರಾಗುತ್ತಿದೆ. ಎಮ್ಮೆಗೆ ಡಿಕ್ಕಿ ಬಳಿಕ ಇದೀಗ ಚಕ್ರಗಳು ಜ್ಯಾಮ್ ಘಟನೆ ನಡೆದಿದೆ. ಇದರಿಂದ ಪ್ರಯಾಣಿಕರನ್ನು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಶಿಫ್ಟ್ ಮಾಡಿದ ಪ್ರಸಂಗ ನಡೆದಿದೆ.


ನವದೆಹಲಿ(ಅ.08): ದೇಶದ ರೈಲ್ವೇ ಇತಿಹಾಸದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು  ಅಧ್ಯಾಯ. ಆದರೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಒಂದೊಂದೇ ವಿಘ್ನಗಳು ಎದುರಾಗಿದೆ. ಮೊದಲೆರಡು ದಿನ ಜಾನುವಾರುಗೆ ಡಿಕ್ಕಿ ಹೊಡೆದಿತ್ತು. ಇದೀಗ ಮೂರನೇ ದಿನ ರೈಲಿನ ಚಕ್ರಗಳು ಜ್ಯಾಮ್ ಆಗಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ದೆಹಲಿಯಿಂದ ವಾರಣಸಿಗೆ ತೆರಳುತ್ತಿದ್ದ ರೈಲಿನ ಚಕ್ರ ಸಮಸ್ಯೆಯಿಂದ ಪ್ರಯಾಣಿಕರು ಸಮಸ್ಯೆ ಎದರಿಸುವಂತಾಯಿತು. ದೆಹಲಿಯಿಂದ ಹೊರಟ ರೈಲು 67 ಕಿಲೋಮೀಟರ್ ದೂರದ ಬುಲಂದ್‌ಶಹರ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ಚಕ್ರಗಳು ಜಾಮ್ ಆಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚಕ್ರಗಳು ಜಾಮ್ ಆಗಿರುವುದನ್ನು ಗಮನಿಸಿದ ಸಿಬ್ಬಂದಿಗಳು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಇದರಿಂದ ಅತೀ ದೊಡ್ಡ ಅವಘಡವೂ ತಪ್ಪಿದೆ. ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರನ್ನು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಶಿಫ್ಟ್ ಮಾಡಲಾಯಿತು.

ಆದರೆ ಈ ಎಲ್ಲಾ ಪಕ್ರಿಯೆ ಅಷ್ಟು ಸುಲಭಾಗಿರಲಿಲ್ಲ. ಕಾರಣ ದೆಹಲಿಯಿಂದ(Delhi Varanasi) ಬುಲಂದ್‌ಶಹರ್ ನಿಲ್ದಾಣ ತಲುಪುತ್ತಿದ್ದಂತೆ ರೈಲಿನ ಚಕ್ರಗಳು ಜಾಮ್(Vande Bharat Express Rail) ಆಗಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿಗಳು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ ಕಾರಣ ಬುಲಂದ್‌ಶಹರ್ ನಿಲ್ದಾಣದಲ್ಲಿ ರೈಲು ನಿಲ್ಲಿಸಲಾಯಿತು. ಬಳಿಕ ರೈಲು ಸಿಬ್ಬಂಧಿಗಳು, ಮೆಕ್ಯಾನಿಕ್ ಚಕ್ರಗಳ ಪರಿಶೀಲನೆ ನಡೆಸಿದರು. ಬಳಿಕ ನಿಗದಿತ ವೇಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 20 ಕಿಲೋಮೀಟರ್ ದೂರದಲ್ಲಿರುವ ಖುರ್ಜಾ ರೈಲು ನಿಲ್ದಾಣಕ್ಕೆ ತರಲಾಯಿತು. 

Tap to resize

Latest Videos

ಹಸುವಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ವಂದೇಭಾರತ್‌ ಎಕ್ಸ್‌ಪ್ರೆಸ್‌!

ಬೆಳಗ್ಗೆ 7.20ಕ್ಕೆ ಬುಲಂದ್‌ಶಹರ್ ನಿಲ್ದಾಣದಲ್ಲಿ ಚಕ್ರ ಸಮಸ್ಯೆಯಿಂದ(Wheel Jam) ರೈಲು ನಿಲ್ಲಿಸಲಾಯಿತು. ಬಳಿಕ ಖುರ್ಜಾ ರೈಲು ನಿಲ್ದಾಣಕ್ಕೆ ತಲುವಾಗ ಮಧ್ಯಾಹ್ನ 12.40 ಆಗಿದೆ. ಇನ್ನು ಖುರ್ಜಾ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ(shatabdi express) ಪ್ರಯಾಣಿಕರನ್ನು(Passengers) ಶಿಫ್ಟ್ ಮಾಡಲಾಯಿತು. 

ಎಮ್ಮೆ ಬಳಿ ಹಸುವಿಗೆ ವಂದೇ ಭಾರತ್‌ ಡಿಕ್ಕಿ: ಮಾಲೀಕರ ವಿರುದ್ಧ ಕೇಸ್‌
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಎಮ್ಮೆ ಹಿಂಡಿಗೆ ಡಿಕ್ಕಿ ಹೊಡೆದ ಘಟನೆಯ ಮರುದಿನವೇ, ಮತ್ತೊಂದು ಅಪಘಾತ(Vande Bharat Express Accident) ಸಂಭವಿಸಿದ್ದು, ಶುಕ್ರವಾರ ಗುಜರಾತ್‌ನ ಆನಂದ್‌ ನಿಲ್ದಾಣದ ಬಳಿ ಇದೇ ರೈಲು ಹಸುವಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ರೈಲಿನ ಮುಂಭಾಗಕ್ಕೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಬೇರೆ ಯಾವುದೇ ಹಾನಿ ಸಂಭವಿಸಿಲ್ಲ. ಈ ನಡುವೆ ಗುರುವಾರ ಇಲ್ಲಿ ಎಮ್ಮೆಗಳ ಹಿಂಡೊಂದಕ್ಕೆ ಡಿಕ್ಕಿ ಹೊಡೆದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಹಾನಿಯಾದ ಪ್ರಕರಣ ಸಂಬಂಧ, ಎಮ್ಮೆಯ ಮಾಲೀಕರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೈಲ್ವೆಗೆ ಸೇರಿದ ಆಸ್ತಿಗಳ ಮೇಲೆ ಅತಿಕ್ರಮ ಪ್ರವೇಶ ತಡೆ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.

 

ಒಂದೇ ದಿನದಲ್ಲಿ ವಂದೇ ಭಾರತ್‌ ರಿಪೇರಿ, ಎಮ್ಮೆಗಳ ಮಾಲೀಕರ ಮೇಲೆ ಎಫ್‌ಐಆರ್‌!

click me!