ಕಳೆದ 9 ತಿಂಗಳ ಅವಧಿಯಲ್ಲಿ 9 ಜನರನ್ನು ತಿಂದಿದ್ದ ನರಭಕ್ಷಕ ಹುಲಿಯನ್ನು ಬಿಹಾರದ ಬಘಾದಲ್ಲಿ ಹತ್ಯೆ ಮಾಡಲಾಗಿದೆ. ಹುಲಿಗೆ ನಾಲ್ಕು ಗುಂಡಿಟ್ಟು ಅರಣ್ಯ ಅಧಿಕಾರಿಗಳು ಕೊಂದಿದ್ದಾರೆ. ಕಳೆದ 26 ದಿನಗಳಿಂದ ಈ ಹುಲಿಯ ಶೋಧ ಕಾರ್ಯ ನಡೆಯುತ್ತಿತ್ತು.
ಪಾಟ್ನಾ (ಅ.8): ಕಳೆದ 9 ತಿಂಗಳಲ್ಲಿ 9 ಜನರನ್ನು ಕೊಂದಿದ್ದ ಹುಲಿಯನ್ನು ಬಿಹಾರದ ಬಘಾದಲ್ಲಿ ಶೂಟರ್‌ಗಳು ಕೊಂದಿದ್ದಾರೆ. 26 ದಿನಗಳಿಂದ ಹುಲಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಶನಿವಾರ ಗೋವರ್ಧನ ಪೊಲೀಸ್ ಠಾಣಾ ವ್ಯಾಪ್ತಿಯ ಬಲುವಾ ಗ್ರಾಮದ ಗದ್ದೆಯಲ್ಲಿ ಹುಲಿಯನ್ನು ಸುತ್ತುವರಿದಿದ್ದರು. ಇದಾದ ನಂತರ ಶೂಟರ್‌ಗಳು ಹುಲಿಗೆ 4 ಗುಂಡುಗಳನ್ನು ಹೊಡೆದಿದ್ದಾರೆ, ಹುಲಿಯ ಘರ್ಜನೆ ಕೇಳಿದ ಬಳಿಕ, ಹುಲಿಗೆ ಗುಂಡು ತಗುಲುದ್ದು ಸ್ಪಷ್ಟವಾಗಿತ್ತು. ಇದಾದ ಬಳಿಕ ತಂಡ 3 ಕಡೆಯಿಂದ ಗದ್ದೆಗೆ ನುಗ್ಗಿ ಹುಲಿಯ ಮೃತದೇಹವನ್ನು ಹೊರತೆಗೆಯಲಾಗಿದೆ. ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ (ವಿಟಿಆರ್) ಈ ಹುಲಿ ಶುಕ್ರವಾರವೂ ತಾಯಿ ಮತ್ತು ಒಂದು ಮಗುವನ್ನು ಕೊಂದಿತ್ತು. ಕಳೆದ 3 ದಿನಗಳಲ್ಲಿ ಈ ಹುಲಿ ದಾಳಿಗೆ 4 ಮಂದಿ ಸಾವು ಕಂಡಿದ್ದರು.ಹುಲಿಯ ಹೆಜ್ಜೆ ಗುರುತು ಪತ್ತೆಯಾದ ಬಳಿಕ ಅದು ಕಬ್ಬಿನ ಗದ್ದೆಯಲ್ಲಿ ಅಡಗಿರುವುದು ತಜ್ಞರ ತಂಡಕ್ಕೆ ಮನವರಿಕೆಯಾಗಿದೆ. ಇದಾದ ಬಳಿಕ ಮೈದಾನವನ್ನು ಎಲ್ಲಾ ಕಡೆಯಿಂದ ಬಲೆಯಿಂದ ಸುತ್ತುವರಿಯಲಾಗಿತ್ತು. ಇದಾದ ಬಳಿಕ ಬಂದೂಕು ಹಿಡಿದ ತಂಡ ಆನೆಯ ಮೇಲೆ ಸವಾರಿ ಮಾಡುತ್ತಾ ಕಬ್ಬಿನ ಗದ್ದೆಯೊಳಗೆ ತೆರಳಿತು. ಅಲ್ಲಿಗೆ ಬಂದ ತಕ್ಷಣ ತಂಡದ ಕಣ್ಣು ಹುಲಿಯತ್ತ ನೆಟ್ಟಿದ್ದು, ಗುಂಡಿನ ದಾಳಿ ನಡೆಸಲಾಗಿದೆ.
Tiger that killed nine people in Bihar was killed. pic.twitter.com/nQI8CijfzW
— Akshay Pandey (@akshay019)
ಎಸ್‌ಟಿಎಫ್ ತಂಡವು ಹುಲಿಗೆ ನಾಲ್ಕು ಬಾರಿ ಶೂಟ್ ಮಾಡಿದೆ. ಎರಡು ಗುಂಡುಗಳು ಹುಲಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಹುಲಿ 3 ಅಡಿ ಎತ್ತರ ಮತ್ತು 5 ಅಡಿ ಉದ್ದವಿದೆ. ಅದನ್ನು ಎತ್ತಲು 8 ಮಂದಿ ಬೇಕಾಯಿತು. ಕಳೆದ 9 ತಿಂಗಳಲ್ಲಿ ಹುಲಿ ಒಟ್ಟು 10 ಮಂದಿಯ ಮೇಲೆ ದಾಳಿ ನಡೆಸಿದ್ದು, 9 ಜನರ ಸಾವಿಗೆ ಕಾರಣವಾಗಿದೆ. ಶುಕ್ರವಾರ ಈ ಹುಲಿಯು ತಾಯಿ ಮತ್ತು ಮಗುವಿನ ಮೇಲೆ ದಾಳಿ ಮಾಡಿದ್ದು, ಇಬ್ಬರೂ ಸ್ಥಳದಲ್ಲಿಯೇ ಸಾವು ಕಂಡಿದ್ದರು. ಕಳೆದ 3 ದಿನಗಳಲ್ಲಿ ನಾಲ್ಕು ಮಂದಿಯ ಸಾವಿಗೆ ಕಾರಣವಾಗಿದ್ದ ಹುಲಿಯನ್ನು ಸಾಯಿಸುವಂತೆ ಸರ್ಕಾರದಿಂದ ಶುಕ್ರವಾರ ಆದೇಶ ಬಂದಿತ್ತು.
ಬಿಹಾರ ಪೊಲೀಸ್ ಇಲಾಖೆ (Bihar Police) ಹಾಗೂ ಅರಣ್ಯ ಇಲಾಖೆಯ 10 ಮಂದಿ ಶೂಟರ್‌ಗಳನ್ನು ಹುಲಿ ಇರುವ ಪ್ರದೇಶಕ್ಕೆ ಗನ್‌ಗಳೊಂದಿಗೆ ಕಳಿಸಲಾಗಿತ್ತು. ಹುಲಿ ಇದೆ ಎಂದು ಹೇಳಲಾಗಿದ್ದ ಕಬ್ಬಿನ ಗದ್ದೆಗೆ (Sugarcane Field)ಸಂಪೂರ್ಣ ಬಲೆಯನ್ನು ಹಾಕು ಸುತ್ತುವರಿಯಲಾಗಿತ್ತು. ಬಲುವಾ (Baluva)ಗ್ರಾಮದ ಹಳ್ಳಿಯ ಗದ್ದೆಯಲ್ಲಿ ಅಂದಾಜು 200ಕ್ಕೂ ಅಧಿಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.
ವಾಲ್ಮೀಕಿ ಹುಲಿ ಸಂರಕ್ಷಿತ (Valmiki Tiger Reserve ) ಪ್ರದೇಶದ ಹಡ್ನಾಟಂಡ್ ಅರಣ್ಯ ಪ್ರದೇಶದಲ್ಲಿ ಕೊಲ್ಲಲ್ಪಟ್ಟ ಹುಲಿಯ ತಂದೆ ಟಿ -5 ಹೆಣ್ಣು ಹುಲಿ ಟಿ -34 ಜೊತೆ ಸಂತಾನೋತ್ಪತ್ತಿ ನಡೆಸಿತ್ತು ಎಂದು ಹೇಳಲಾಗುತ್ತದೆ. ಇದರಿಂದಾಗಿ ಟಿ -34 ಹುಲಿ ತಾಯಿಯಾಗಿತ್ತು. ಆದ್ದರಿಂದ ಈ ಹುಲಿಗೆ ಟಿ-105 ಎಂದು ಹೆಸರು ಇಡಲಾಗಿತ್ತು.
ಕೊಡಗಿನಲ್ಲಿ ಇನ್ನೂ ಸೆರೆಯಾಗದ ನರಭಕ್ಷಕ ಹುಲಿ, ಗ್ರಾಮಸ್ಥರಿಂದ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ತಂದೆಗೆ ಹೆದರಿ ಕಾಡಿಗೆ ಹೋಗದ ಟಿ-105: ತಂದೆಯ ಹೆದರಿಕೆಯಿಂದಾಗಿ ಟಿ-105 ಹುಲಿ, ಹಡ್ನಾತಂಡ್ ಹಾಗೂ ಗೋಬರ್ಧನ ಅರಣ್ಯ ವ್ಯಾಪ್ತಿಯಲ್ಲಿ ಕಬ್ಬಿನ ಗದ್ದೆಗಳನ್ನೇ ತನ್ನ ವಲಯವನ್ನಾಗಿ ಮಾಡಿಕೊಂಡಿತ್ತು. ಕೆಲವೊಮ್ಮೆ ಆಹಾರ ಹುಡುಕಿಕೊಂಡು ಕಾಡಿಗ ಹೋಗುತ್ತಿದ್ದ ಹುಲಿ (Tiger) ಕ್ರಮೇಣವಾಗಿ, ಮನುಷ್ಯರನ್ನೇ ತಿನ್ನಲು ಆರಂಭ ಮಾಡಿತ್ತು. 9 ತಿಂಗಳ ಹಿಂದೆ ಮೊದಲ ಬಾರಿಗೆ ಮನುಷ್ಯನನ್ನು ತಿಂದಿದ್ದ ಹುಲಿ ಆ ಬಳಿಕ ಕ್ರಮೇಣ ಇದನ್ನು ಅಭ್ಯಾಸ ಮಾಡಿಕೊಂಡಿತ್ತು.
ಕೊಡಗಿನ ನರಭಕ್ಷಕ ಹುಲಿ ಗುಂಡೇಟಿಗೆ ಬಲಿ: ನಿಟ್ಟುಸಿರು ಬಿಟ್ಟ ಜನತೆ
ಕಳೆದ ಒಂದು ತಿಂಗಳಿನಿಂದ ಬಾಘಾದಲ್ಲಿ ಈ ಹುಲಿ ಭೀತಿ ಸೃಷ್ಟಿಸಿತ್ತು. ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಹುಲಿಯನ್ನು ಹಿಡಿಯಲು ಸೆ.13ರಂದು ಹಿಡಿಯಲು ಆದೇಶ ಹೊರಡಿಸಲಾಗಿತ್ತು. ಅಕ್ಟೋಬರ್ 5-6 ರಂದು, ಹುಲಿ ಎರಡು ದಿನಗಳಲ್ಲಿ ಇಬ್ಬರನ್ನು ಕೊಂದಿತ್ತು, ನಂತರ ಅದನ್ನು ಕೊಲ್ಲಲು ಅಕ್ಟೋಬರ್ 7 ರಂದು ಆದೇಶ ಹೊರಡಿಸಲಾಯಿತು. ಇಂದು 7 ಗಂಟೆಗಳ ಕಾರ್ಯಾಚರಣೆಯ ನಂತರ ನರ ಭಕ್ಷಕ ಹುಲಿಯನ್ನು ಕೊಲ್ಲಲಾಗಿದೆ.