LPG Cylinder ವರ್ಷಕ್ಕೆ 15 ಸಿಲಿಂಡರ್ ಮಾತ್ರ, ಸಬ್ಸಿಡಿ ಸಂಖ್ಯೆ ಏರಿಕೆ, ಹೊಸ ನಿಯಮ ಜಾರಿ!

By Suvarna News  |  First Published Oct 8, 2022, 7:03 PM IST

ಎಲ್‌ಪಿಜಿ ಸಿಲಿಂಡರ್‌ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಗ್ರಾಹಕರು ಎಷ್ಟು ಬೇಕಾದರು ಸಿಲಿಂಡರ್ ಬುಕ್ ಮಾಡುವಂತಿಲ್ಲ. ವರ್ಷಕ್ಕೆ 15 ಮಾತ್ರ, ಇನ್ನು ತಿಂಗಳಿಗೆ ಎರಡಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡುವಂತಿಲ್ಲ. ಇಷ್ಟೇ ಅಲ್ಲ ಇನ್ನೂ ಕೆಲ ನಿಯಮ ಬದಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ಅ.08): ಎಲ್‌ಪಿಜಿ ಸಿಲಿಂಡರ್ ನಿಯಮ ಬದಲಾಗಿದೆ. ಈ ಹಿಂದಿಂತೆ ಸಿಲಿಂಡರ್ ಬುಕ್ ಮಾಡಲು ಅಥವಾ ಬಳಸಲು ಹೋದರೆ ಸಂಕಷ್ಟ ಅನುಭವಿಸುವುದು ಖಚಿತ. ಕಾರಣ ಸರ್ಕಾರ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ವರ್ಷದಲ್ಲಿ ಎಷ್ಟು ಸಿಲಿಂಡರ್ ಬುಕ್ ಮಾಡಬೇಕು ಅನ್ನೋದನ್ನು ನಿಯಮದಲ್ಲಿ ಹೇಳಲಾಗಿದೆ. ಹೊ ನಿಯಮದಲ್ಲಿ ಹಲವು ನಿರ್ಬಂಧಗಳಿವೆ. ಇದೀಗ ಗ್ರಾಹಕರು ವರ್ಷಕ್ಕೆ 15 ಗ್ಯಾಸ್ ಸಿಲಿಂಡರ್ ಮಾತ್ರ ಬುಕ್ ಮಾಡಿಕೊಳ್ಳಲು ಅವಕಾಶವಿದೆ. ಒಂದು ವರ್ಷದಲ್ಲಿ 15ಕ್ಕಿಂತ ಹೆಚ್ಚಿನ ಸಿಲಿಂಡರ್ ಬುಕ್ ಮಾಡಲು ಅಥವಾ ಬಳಕೆ ಮಾಡಲು ಗ್ರಾಹಕರಿಗೆ ಅವಕಾಶವಿಲ್ಲ. ಹಾಗಂತ ಒಂದೇ ತಿಂಗಳಲ್ಲಿ 3 ರಿಂದ ನಾಲ್ಕು ಸಿಲಿಂಡರ್ ಬುಕ್ ಮಾಡಲು ಅವಕಾಶವಿಲ್ಲ. ಕಾರಣ ಒಂದು ತಿಂಗಳಲ್ಲಿ 2 ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅಥವಾ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಎರಡಕ್ಕಿಂತ ಹೆಚ್ಚು ಸಿಲಿಂಡರ್ ಒಂದೇ ತಿಂಗಳಲ್ಲಿ ಬುಕ್ ಮಾಡಲು ಸಾಧ್ಯವಿಲ್ಲ.

ಸಬ್ಸಿಡಿ ಸಿಲಿಂಡರ್(Subsidy Cylinder) ಸಂಖ್ಯೆ ಎಷ್ಟು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ವರ್ಷದಲ್ಲಿ ಸಬ್ಸಡಿ ಸಿಲಿಂಡರ್ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಹೇಳಿದೆ. ಹೊಸ ನಿಯಮದ ಪ್ರಕಾರ ವರ್ಷದಲ್ಲಿನ ಗರಿಷ್ಠ 15 ಸಿಲಿಂಡರ್ ಪೈಕಿ 12 ಸಿಲಿಂಡರ್‌ಗೆ ಸಬ್ಸಡಿ ಸಿಗಲಿದೆ. 

Tap to resize

Latest Videos

ದಸರಾ ಹಬ್ಬಕ್ಕೆ ಗುಡ್‌ನ್ಯೂಸ್: commercial cylinder ದರದಲ್ಲಿ ಇಳಿಕೆ

ವಾಣಿಜ್ಯ ಸಿಲಿಂಡರ್‌ ದರ 25 ರು. ಇಳಿಕೆ
ಬೆಲೆ ಏರಿಕೆ ತಾಪದ ನಡುವೆ ವಾಣಿಜ್ಯಿಕ ಅಡುಗೆ ಅನಿಲ ಸಿಲಿಂಡರ್‌ ದರವನ್ನು ತೈಲ ಕಂಪನಿಗಳು 25 ರು.ನಷ್ಟುಇಳಿಸಿವೆ. ಇದೇ ವೇಳೆ ವೈಮಾನಿಕ ಇಂಧನ ದರವೂ ಕಿಲೋಲೀಟರ್‌ಗೆ 5,521 ರು. ಇಳಿಕೆ ಆಗಿದೆ. ಹೋಟೆಲ್‌ಗಳು ಹೆಚ್ಚಾಗಿ ಬಳಸುವ 19 ಕೆ.ಜಿ ವಾಣಿಜ್ಯ ಸಿಲಿಂಡರ್‌ನ ದರ ಶನಿವಾರ 25.50 ರು. ಇಳಿಕೆ ಕಂಡಿದೆ. ಇದರಿಂದ ರು. 1,885 ಇದ್ದ ಸಿಲಿಂಡರ್‌ ದರ 1859.5 ರು.ಗೆ ಇಳಿದಿದೆ. ಆದರೆ ಗೃಹ ಬಳಕೆಯ 14.2 ಕೆ.ಜಿ ಸಿಲಿಂಡರ್‌ ಬೆಲೆ 1,053 ರು. ಇದು, ಬದಲಾವಣೆ ಆಗಿಲ್ಲ. ಜೂನ್‌ನಿಂದ ಈವರೆಗೆ ವಾಣಿಜ್ಯ ಸಿಲಿಂಡರ್‌ ದರ 494.5 ರು. ಇಳಿಕೆಯಾಗಿದೆ. ಹಾಗೆಯೇ ಪೆಟ್ರೋಲ್‌, ಡೀಸೆಲ್‌ ದರ ಕೂಡ 6 ತಿಂಗಳಿಂದ ಪರಿಷ್ಕರಣೆ ಆಗಿಲ್ಲ.

ಬೆಲೆ ಹೆಚ್ಚಿರುವ LPG Cylinder, ಎಣ್ಣೆ, ಬೇಳೆ ಪ್ಯಾಕೆಟ್‌ ಮೇಲೆ ಮೋದಿ ಫೋಟೋ ಹಾಕುತ್ತೇವೆ: ತೆಲಂಗಾಣ ಸಿಎಂ ಪುತ್ರಿ

ಗುಜರಾತ್‌ನಲ್ಲಿ ರೈತ ಸಾಲ ಮನ್ನಾ, 500 ರು.ಗೆ ಸಿಲಿಂಡರ್‌: ರಾಹುಲ್‌ ಭರವಸೆ
ಮುಂಬರುವ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ 3 ಲಕ್ಷ ರು.ಗಳವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಪಕ್ಷದ ನಾಯಕ ರಾಹುಲ್‌ ಗಾಂಧಿ  ಘೋಷಿಸಿದ್ದಾರೆ. ಅಹಮದಾಬಾದ್‌ನಲ್ಲಿ ಆಯೋಜಿಸಿದ ‘ಪರಿವರ್ತನ್‌ ಸಂಕಲ್ಪ ರಾರ‍ಯಲಿ’ಯಲ್ಲಿ ಮಾತನಾಡಿದ ರಾಹುಲ್‌, ‘ರೈತರ 3 ಲಕ್ಷ ರು.ವರೆಗಿನ ಸಾಲ ಪೂರ್ಣ ಮನ್ನಾ, ಕೃಷಿಕರಿಗೆ 300 ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್‌ ಒದಗಿಸಲಾಗುವುದು. ಜೊತೆಗೆ ಜನಸಾಮಾನ್ಯರಿಗೆ ಪ್ರಸ್ತುತ 1000 ರು.ಗೆ ಸಿಗುವ ಗ್ಯಾಸ್‌ ಸಿಲಿಂಡರ್‌ ಅನ್ನು ಕೇವಲ 500 ರು.ಗೆ ಒದಗಿಸಲಾಗುವುದು. ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 5 ರು. ಸಹಾಯಧನ ನೀಡಲಾಗುವುದು ಹಾಗೂ 3000 ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ಒದಗಿಸುವ ಭರವಸೆ ನೀಡಿದ್ದಾರೆ.

click me!