ಸಿಎಂ ಸ್ಥಾನಕ್ಕೆ ಬಿ. ಎಲ್. ಸಂತೋಷ್ ಹೆಸರು, ನಾಲ್ವರಿಗೆ ಡಿಸಿಎಂ ಸ್ಥಾನ?

By Suvarna News  |  First Published Jul 26, 2021, 10:39 AM IST

* ಬಿ. ಎಲ್. ಯಡಿಯೂರಪ್ಪ ಬದಲಾವಣೆ ಪಕ್ಕಾನಾ?

* ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿದೆ ಬಿ. ಎಲ್. ಸಂತೋಷ್ ಹೆಸರು

* ಜಾತಿ ಸಮೀಕರಣ ಗಮನಿಸಿ ನಾಲ್ವರಿಗೆ ಡಿಸಿಎಂ ಸ್ಥಾನ?


ಬೆಂಗಳೂರು(ಜು.26): ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಉದ್ಭವಿಸಿದ್ದ ಕುತೂಹಲಕ್ಕೆ ಸೋಮವಾರ ತೆರೆ ಬೀಳುವ ನಿರೀಕ್ಷೆ ಇದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವರೊ ಅಥವಾ ಮುಂದುವರೆಯುವರೊ ಎಂಬುದರ ಕ್ಲೈಮ್ಯಾಕ್ಸ್‌ ಗೊತ್ತಾಗಲಿದೆ. ಈ ನಡುವೆ ಯಡಿಯೂರಪ್ಪ ಅವರು ತಾವು ಹೈಕಮಾಂಡ್‌ ಸಂದೇಶಕ್ಕಾಗಿ ಕಾಯುತ್ತಿರುವೆ ಎಂಬ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್‌ ಯಾವ ಸಂದೇಶ ನೀಡುತ್ತೋ ಅದನ್ನು ಪಾಲಿಸುವೆ ಎಂದೂ ಅವರು ಪುನರುಚ್ಚರಿಸಿದ್ದಾರೆ. ಹೀಗಾಗಿ, ಇದೀಗ ಪಕ್ಷದ ಹೈಕಮಾಂಡ್‌ ಮುಂದಿನ ನಿರ್ಧಾರವನ್ನು ತಿಳಿಸಬೇಕಾಗಿದೆ.

ಬಿಎಸ್‌ವೈ ಪದತ್ಯಾಗವೋ? ಮುಂದುವರಿಕೆಯೋ? ಕುತೂಹಲಕ್ಕಿಂದು ತೆರೆ!

Tap to resize

Latest Videos

ಆದರೀಗ ಈ ಬೆಳವಣಿಗೆಗಳ ಬೆನ್ನಲ್ಲೇ ಸದ್ಯ ಬಿ. ಎಲ್. ಸಂತೋಷ್‌ರವರಿಗೆ ಸಿಎಂ ಸ್ಥಾನ ಸಿಗಬಹುದೆಂಬ ವದಂತಿಗಳು ಜೋರಾಗಿವೆ. ದೆಹಲಿಯ ಉನ್ನತ ಮಟ್ಟದ ಬಿಜೆಪಿ ಕಾರ್ಯಕರ್ತರ ಪ್ರಕಾರ, ಸಂತೋಷ್ ಅವರ ಹೊರತಾಗಿ, ಲಿಂಗಾಯತ ಸಮುದಾಯಕ್ಕೆ ಸೇರಿದ ಲಕ್ಷ್ಮಣ ಸವದಿ ಅವರನ್ನು ಮುಂದುವರೆಸಲಾಗುತ್ತದೆ, ಅಲ್ಲದೇ ನಾಲ್ವರನ್ನು ಡಿಸಿಎಂಗಳಾಗಿ ನೇಮಕ ಮಾಡಲಾಗುತ್ತದೆ ಎನ್ನಲಾಗಿದೆ.

ಬಿಜೆಪಿ ಶಾಸಕರ ಸಭೆಯಲ್ಲಿ ಯಡಿಯೂರಪ್ಪ ಅವರ ಅನಾರೋಗ್ಯಕ್ಕೆ ಕಾರಣ ಎಂದು ಉಲ್ಲೇಖಿಸಿ ಸೋಮವಾರ ರಾಜೀನಾಮೆ ನೀಡಲಿದ್ದಾರೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಬಿ. ಎಲ್ ಸಂತೋಷ್‌ರವರು ಕರ್ನಾಟಕದ ರಾಜ್ಯದ ಜನಸಂಖ್ಯೆಯ ಶೇಕಡಾ 2 ರಷ್ಟಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸುವ ಸಲುವಾಗಿ, ನಾಲ್ವರು ಡಿಸಿಎಂ ನೇಮಕಗೊಳಿಸುವ ನಿರ್ಧಾರಕ್ಕೂ ಬಂದಿದೆ. ಲಿಂಗಾಯತ, ಒಕ್ಕಲಿಗ, ಒಬಿಸಿ ಮತ್ತು ಎಸ್‌ಸಿ / ಎಸ್ಟಿ ಹೀಗೆ ರಾಜ್ಯದ ಎಲ್ಲಾ ಪ್ರಮುಖ ಸಮುದಾಯಗಳನ್ನು ಸಮಾಧಾನಪಡಿಸಲು ಇಂತಹುದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಉನ್ನತ ಮೂಲಗಳು ಹೇಳಿವೆ.

ಬೆಳಗಾವಿಗೆ ಸಿಎಂ ಬಂದ್ರೂ ಭೇಟಿಗೆ ಬಾರದ ಜಾರಕಿಹೊಳಿ, ಜೊಲ್ಲೆ..!

ಇನ್ನು ಈಗಿರುವ ಈಗಿರುವ ಮೂವರು ಡಿಸಿಎಂಗಳಲ್ಲಿ, ಲಕ್ಷ್ಮಣ ಸವದಿಯನ್ನು ಮುಂದುವರೆಸುವ ಸಾಧ್ಯತೆಯಿದೆ. ಆದರೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಿ ಎನ್ ಅಶ್ವತ್ ನಾರಾಯಣ್ ಅವರ ಬದಲು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕೈಬಿಟ್ಟ 12 ಕೇಂದ್ರ ಸಚಿವರಲ್ಲಿ ಒಬ್ಬರಾದ ಸದಾನಂದ ಗೌಡ ಅವರನ್ನು ನೇಮಿಸುವ ಸಾಧ್ಯತೆ ಇದೆ.

ಇದನ್ನು ಹೊರತುಪಡಿಸಿ ಮೊದಲ ಬಾರಿ ಶಾಸಕರಾಗಿರುವ, ಒಬಿಸಿ ಮರಾಠಾ ಸಮುದಾಯಕ್ಕೆ ಸೇರಿದ ಕಾರವಾರ ಮೂಲದ ರೂಪಾಲಿ ನಾಯಕ್, ಒಬಿಸಿ ವರ್ಗದಡಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ. 
 

click me!