ಶೇ.32ರಷ್ಟು ಮಳೆ ಕೊರತೆ: ಈ ವರ್ಷದ ಆಗಸ್ಟ್‌ನದ್ದು 122 ವರ್ಷಗಳಲ್ಲೇ ಭೀಕರವೆನಿಸಿದ ಬರ!

By Kannadaprabha News  |  First Published Aug 30, 2023, 7:05 AM IST

 ಎಲ್‌ನಿನೋದ ಪರಿಣಾಮವಾಗಿ ಆಗಸ್ಟ್‌ನಲ್ಲಿ ಈವರೆಗೂ ಶೇ.32ರಷ್ಟುಮಳೆ ಕೊರತೆ ಉಂಟಾಗಿದ್ದು, ಇದು 122 ವರ್ಷಗಳಲ್ಲೇ ಆಗಸ್ಟ್‌ ತಿಂಗಳಿನಲ್ಲಿ ದಾಖಲಾದ ಗರಿಷ್ಠ ಬರ ಎನಿಸಿಕೊಂಡಿದೆ.


ನವದೆಹಲಿ: ಎಲ್‌ನಿನೋದ ಪರಿಣಾಮವಾಗಿ ಆಗಸ್ಟ್‌ನಲ್ಲಿ ಈವರೆಗೂ ಶೇ.32ರಷ್ಟುಮಳೆ ಕೊರತೆ ಉಂಟಾಗಿದ್ದು, ಇದು 122 ವರ್ಷಗಳಲ್ಲೇ ಆಗಸ್ಟ್‌ ತಿಂಗಳಿನಲ್ಲಿ ದಾಖಲಾದ ಗರಿಷ್ಠ ಬರ ಎನಿಸಿಕೊಂಡಿದೆ. 1901ರಲ್ಲಿ ಇದಕ್ಕಿಂತ ಹೆಚ್ಚು ಮಳೆ ಕೊರತೆ ಉಂಟಾಗಿತ್ತು ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಆಗಸ್ಟ್‌ನಲ್ಲಿ ಒಟ್ಟಾರೆ 25.9 ಸೆಂ.ಮೀ. ಮಳೆಯಾಗಿದೆ. ಇದು ನಿಗದಿತ ಪ್ರಮಾಣಕ್ಕಿಂತ ಶೇ.30ರಷ್ಟು ಕಡಿಮೆಯಾಗಿದೆ. 2005ರಲ್ಲಿ ಶೇ.25, 1965ರಲ್ಲಿ ಶೇ.24.6, 1920ರಲ್ಲಿ ಶೇ.24.4, 1913ರಲ್ಲಿ ಶೇ.24ರಷ್ಟು ಮಳೆ ಕೊರತೆ ಉಂಟಾಗಿತ್ತು ಎಂದು ವರದಿ ತಿಳಿಸಿದೆ.

ಪೆಸಿಫಿಕ್‌ ಸಾಗರದಲ್ಲಿ (Pacific Ocean) ಉಂಟಾಗಿರುವ ಎಲ್‌ನಿನೋ (El Nino) ಪರಿಣಾಮವಾಗಿ ಈ ಬಾರಿ ಮುಂಗಾರು ಮಳೆ ಕುಂಠಿತಗೊಂಡಿದೆ. ಪೆಸಿಫಿಕ್‌ ಸಾಗರದ ನೀರಿದ ಉಷ್ಣತೆ ಹೆಚ್ಚಾದಾಗ ಅಲ್ಲಿ ಉಂಟಾಗುವ ಮಾರುತಗಳು ಮಾನ್ಸೂನ್‌ ಮಾರುತಗಳ ವೇಗವನ್ನು ತಗ್ಗಿಸುತ್ತವೆ. ಹೀಗಾಗಿ ಮುಂಗಾರು ಕೊರತೆ ತಲೆದೋರುತ್ತದೆ. ಜೊತೆಗೆ ಈ ಬಾರಿ ದಕ್ಷಿಣ ಚೀನಾ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವುದು ಸಹ ಮುಂಗಾರು ಕೊರತೆಗೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tap to resize

Latest Videos

ಕರ್ನಾಟಕಕ್ಕೆ ಮತ್ತೆ ಕಾವೇರಿ ಕಂಟಕ: ತಮಿಳುನಾಡಿಗೆ ನಿತ್ಯ ನೀರು ಬಿಡುಗಡೆಗೆ ಆದೇಶ

ಮುಂಗಾರು ಕೊರತೆ:

ಜೊತೆಗೆ ಈ ಬಾರಿ ಒಟ್ಟಾರೆ ಮುಂಗಾರು ಅವಧಿಯಲ್ಲಿ ಶೇ.13ರಷ್ಟು ಕೊರತೆ ಉಂಟಾಗಿದ್ದು, ಇದು 2015ರ ಬಳಿಕ ದಾಖಲಾದ ಕಡಿಮೆ ಮಳೆ ಪ್ರಮಾಣವಾಗಿದೆ ಎಂದು ಐಎಂಡಿ ಹೇಳಿದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಘೋಷಣೆ ತೀರ್ಮಾನ: ಕೃಷಿ ಸಚಿವ ಚಲುವರಾಯಸ್ವಾಮಿ

click me!