
ನವದೆಹಲಿ(ಮೇ.31): ಉತ್ತರ ಭಾರತದಲ್ಲಿ ಉಷ್ಣಹವೆ ಮುಂದುವರೆದಿದ್ದು, ರಾಷ್ಟ್ರಾದ್ಯಂತ ಉಷ್ಣಹವೆಗೆ ಗುರುವಾರ ಒಂದೇ ದಿನ 32 ಮಂದಿ ಸಾವನ್ನಪ್ಪಿದ್ದಾರೆ. ಸಾರ್ವಕಾಲಿಕ ರಾಜಧಾನಿ ದೆಹಲಿಯಲ್ಲಿ ಬಿಸಿಲ ಧಗೆ ಮುಂದುವರೆದಿದ್ದು, ಗುರುವಾ ರವೂ ಸಹ 49.1 ಡಿಗ್ರಿ ತಾಪಮಾನ ದಾಖಲಾಗಿದೆ.
ದೆಹಲಿಯ ಸಪ್ಟರ್‌ಜಂಗ್ ಹವಾಮಾನ ಕೇಂದ್ರದಲ್ಲಿ 79 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಅಧಿಕ ತಾಪಮಾನ ದಾಖಲಾಗಿದ್ದು, 46.8 ಡಿಗ್ರಿ ತಾಪಮಾನ ದಾಖಲಾಗಿದೆ. ಇನ್ನು ಹೊರವಲಯದ ಮಂಗೇಶ್‌ಪುರ ಪ್ರದೇಶದಲ್ಲಿ 49.1 ಡಿಗ್ರಿ ತಾಪಮಾನದಲ್ಲೇ ಮುಂದುವರೆದಿದೆ. ಶುಕ್ರವಾರ ಕೊಂಚ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಡುವೆ ಬಿಹಾರದಲ್ಲಿ 15 ಮಂದಿ ಗುರುವಾರ ಬಿಸಿಲ ತಾಪದಿಂದಾಗಿ ಸಾವನ್ನಪ್ಪಿದ್ದರೆ, ಒಡಿಶಾದಲ್ಲಿ 10 ಮಂದಿ ಹೀಟ್‌ಸ್ಟೋಕ್‌ಗೆ ಬಲಿಯಾಗಿದ್ದಾರೆ. ಜಾರ್ಖಂಡ್‌ನಲ್ಲಿ 4 ಮಂದಿ ಹಾಗೂ ದೆಹಲಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ರಾಜಸ್ಥಾನದಲ್ಲಿ ಹೈಕೋರ್ಟ್‌ಬಿಸಿಲತಾಪಕ್ಕೆಬ ಲಿಯಾದವರಿಗೆಪರಿಹಾರನೀಡಲು ಆದೇಶಿಸಿದೆ.
ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ಭಾರೀ ಉಷ್ಣಹವೆ ಪ್ರವೇಶ: ಹವಾಮಾನ ಇಲಾಖೆ ಎಚ್ಚರಿಕೆ
ದೆಹಲಿ ಬಿಸಿಲು; 107 ಡಿಗ್ರಿ ಜ್ವರಕ್ಕೆ ವ್ಯಕ್ತಿ ಬಲಿ:
ರಾಜಧಾನಿಯಲ್ಲಿ ಬಿಸಿಲಿನ ಬೇಗೆಯಿಂದಾಗಿ ಬರೋಬ್ಬರಿ 107 ಡಿಗ್ರಿ ದೇಹದ ಉಷ್ಣಾಂಶದ ಜ್ವರದಿಂದ ಬಳಲುತ್ತಿದ್ದ ಕಾರ್ಮಿಕನೊಬ್ಬ ಸತ್ತಿರುವ ಘಟನೆ ಗುರುವಾರ ನಡೆದಿದೆ. ಬಿಹಾರಿ ಮೂಲದ ವ್ಯಕ್ತಿ ಸೋಮವಾರ ರಾತ್ರಿ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಮೂರು ತಿಂಗಳಲ್ಲಿ ದೇಶಾದ್ಯಂತ 16 ಸಾವಿರಕ್ಕೂ ಹೆಚ್ಚು ಉಷ್ಣಹವೆ ಸಂಬಂಧಿ ಪ್ರಕರಣಗಳು 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೇ 22ರಂದು ಒಂದೇ ದಿನ ದೇಶಾದ್ಯಂತ 486 ಮಂದಿಗೆ ಸನ್‌ಸ್ಟೋಕ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ