Covid Crisis: ಕೇವಲ 3116 ಪ್ರಕರಣ, ಸಾರ್ವಕಾಲಿಕ ಕನಿಷ್ಠ: 47 ಸೋಂಕಿತರ ಸಾವು

By Kannadaprabha News  |  First Published Mar 14, 2022, 6:15 AM IST

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಇಳಿಕೆಯ ಹಾದಿಯಲ್ಲಿದ್ದು, ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 3,116 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಇದು 676 ದಿನಗಳ ಕನಿಷ್ಠವಾಗಿದೆ.


ನವದೆಹಲಿ (ಮಾ.14): ದೇಶದಲ್ಲಿ (India) ಕೋವಿಡ್‌ ಪ್ರಕರಣಗಳು (Covid Cases) ಇಳಿಕೆಯ ಹಾದಿಯಲ್ಲಿದ್ದು, ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 3,116 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಇದು 676 ದಿನಗಳ ಕನಿಷ್ಠವಾಗಿದೆ. ಜೊತೆಗೆ ಕೋವಿಡ್‌ (Covid19) ಮೊದಲ ಅಲೆ ತುತ್ತತುದಿಗೆ ಹೋದ ಬಳಿಕ ದಾಖಲಾದ ಕನಿಷ್ಠ ಪ್ರಮಾಣವೂ ಹೌದು. ಇನ್ನು ಇದೇ ಅವಧಿಯಲ್ಲಿ 47 ಸೋಂಕಿತರು ಸಾವಿಗೀಡಾಗಿದ್ದು (Death), ಒಟ್ಟು ಪ್ರಕರಣ 4.29 ಕೋಟಿಗೆ, ಒಟ್ಟು ಸಾವು 5.15 ಲಕ್ಷಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 2,490 ಸೋಂಕಿತರು ಗುಣಮುಖರಾಗುವ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳು 38,069ಕ್ಕೆ ಇಳಿಕೆಯಾಗಿದೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ 0.09ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.0.41ಕ್ಕೆ ಮತ್ತು ವಾರದ ಪಾಸಿಟಿವಿಟಿ ದರ (Positivity Rate) ಶೇ.05ಗೆ ಇಳಿಕೆ ಕಂಡಿದೆ. ದೇಶದಲ್ಲಿ ಈವರೆಗೆ 180.13 ಕೋಟಿ ಡೋಸ್‌ ಲಸಿಕೆ (Corona Vaccine) ವಿತರಿಸಲಾಗಿದೆ.

Latest Videos

Covid Crisis: ಏಷ್ಯಾ ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚಳ, ಕಳವಳ

ದೇಶದಲ್ಲಿ ಬರೀ 3614 ಜನಕ್ಕೆ ಕೊರೋನಾ: ದೇಶದಲ್ಲಿ (India) ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟುಕಡಿಮೆಯಾಗಿದ್ದು, ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 3,614 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಮೇ 12, 2020ರ ನಂತರ ದಾಖಲಾದ ಕನಿಷ್ಠ ಪ್ರಮಾಣವಾಗಿದೆ. 

ಮೇ 12, 2020ರಲ್ಲಿ 3,604 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಇದೇ ಅವಧಿಯಲ್ಲಿ 89 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 40,559ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.44 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.52 ರಷ್ಟಿದೆ. ಕೋವಿಡ್‌ ಸೋಂಕಿತರ ಚೇತರಿಕೆ ದರವು 98.71ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 179.91 ಕೋಟಿ ಲಸಿಕೆಯ ಡೋಸುಗಳನ್ನು ವಿತರಿಸಲಾಗಿದೆ.

136 ಹೊಸ ಕೋವಿಡ್‌ ಕೇಸ್‌: 22 ತಿಂಗಳ ಕನಿಷ್ಠ: ರಾಜ್ಯದಲ್ಲಿ (Karnataka) ಶನಿವಾರ ಕೋವಿಡ್‌ 136 ಪ್ರಕರಣಗಳಷ್ಟೇ ಪತ್ತೆಯಾಗಿದ್ದು, ಇಬ್ಬರು ಮರಣವನ್ನಪ್ಪಿದ್ದಾರೆ. ಇದು 22 ತಿಂಗಳಲ್ಲೇ ಕನಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. 47,476 ಕೋವಿಡ್‌ ಪರೀಕ್ಷೆ ನಡೆದಿದ್ದು ಶೇ.0.29 ಪಾಸಿಟಿವಿಟಿ ದರ (Positivity Rate) ದಾಖಲಾಗಿದೆ. ಮೂರನೇ ಅಲೆಯ ಇಳಿಕೆ ಆರಂಭದ ಬಳಿಕ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ. 0.30ಕ್ಕಿಂತ ಕಡಿಮೆ ಆಗಿದೆ. ಬೆಳಗಾವಿ ಮತ್ತು ಉತ್ತರ ಕನ್ನಡಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಶನಿವಾರ 48,090 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

Covid Crisis: ಕೋವಿಡ್‌ ನಿರ್ಬಂಧ ಸಡಿಲಕ್ಕೆ ರಾಜ್ಯಗಳಿಗೆ ಕೇಂದ್ರ ಸೂಚನೆ

ವಾರದಲ್ಲಿ 2ನೇ ಬಾರಿ 100ಕ್ಕಿಂತ ಕಡಿಮೆ ಕೇಸ್‌: ನಗರದಲ್ಲಿ ಶನಿವಾರ 87 ಮಂದಿಯಲ್ಲಿ ಕೋವಿಡ್‌-19(Covid-19) ದೃಢಪಟ್ಟಿದೆ. 218 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಯಾರೊಬ್ಬರು ಮೃತಪಟ್ಟಿಲ್ಲ. ಕಳೆದ ಐದು ದಿನದಲ್ಲಿ ಎರಡನೇ ಬಾರಿ ನಗರದಲ್ಲಿ ಕೋವಿಡ್‌ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿ ಒಟ್ಟು 40,018 ಮಂದಿ ಮೃತಪಟ್ಟಿದ್ದು, ಈ ಪೈಕಿ ಬೆಂಗಳೂರು ನಗರದಲ್ಲೇ 16,943 ಸಾವು ಸಂಭವಿಸಿದೆ. ಆದರೆ ಈಗ ನಗರದಲ್ಲಿಯೂ ಸಾವು ಕಡಿಮೆ ಆಗಿದೆ. ಕೋವಿಡ್‌ ದೈನಂದಿನ ಪ್ರಕರಣ ಕೂಡ ವಾರದಲ್ಲಿ ಎರಡನೇ ಬಾರಿ ನೂರಕ್ಕಿಂತ ಕಡಿಮೆ ವರದಿಯಾಗಿದೆ. 

ಸುಮಾರು 21 ತಿಂಗಳ ಬಳಿಕ ಇಷ್ಟೊಂದು ಕಡಿಮೆ ಹೊಸ ಪ್ರಕರಣಗಳು ನಗರದಲ್ಲಿ ವರದಿಯಾಗಿದೆ. 14,376 ಮಂದಿ ಕೋವಿಡ್‌ ಪರೀಕ್ಷೆಗೆ(Covid Test) ಒಳಗಾಗಿದ್ದು ಪಾಸಿಟಿವಿಟಿ ದರ ಶೇ. 0.83ಕ್ಕೆ ಕುಸಿದಿದೆ. ಸದ್ಯ 2,097 ಸಕ್ರಿಯ ಪ್ರಕರಣಗಳಿವೆ. 65 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ನಾಲ್ಕು ಕಂಟೈನ್ಮೆಂಟ್‌ ವಲಯಗಳಿವೆ. ಶನಿವಾರ 18,572 ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದಿದ್ದಾರೆ. 1,071 ಮಂದಿ ಮೊದಲ ಡೋಸ್‌, 16,019 ಮಂದಿ ಎರಡನೇ ಡೋಸ್‌ ಮತ್ತು 1,482 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ.

click me!