Covid Crisis: ಏಷ್ಯಾ ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚಳ, ಕಳವಳ

Kannadaprabha News   | Asianet News
Published : Mar 14, 2022, 05:55 AM IST
Covid Crisis: ಏಷ್ಯಾ ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚಳ, ಕಳವಳ

ಸಾರಾಂಶ

ಚೀನಾ, ವಿಯೆಟ್ನಾಂ, ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ಕೆಲ ದೇಶಗಳಲ್ಲಿ ಮತ್ತೆ ಕೋವಿಡ್‌-19 ವೈರಸ್‌ ಅಬ್ಬರ ಹೆಚ್ಚುತ್ತಿದ್ದು, ದೈನಂದಿನ ಸೋಂಕಿನ ಪ್ರಮಾಣವು ಆತಂಕಕ್ಕೆ ಕಾರಣವಾಗಿದೆ.

ನವದೆಹಲಿ (ಮಾ.14): ಚೀನಾ (China), ವಿಯೆಟ್ನಾಂ, ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ (South Korea) ಸೇರಿದಂತೆ ಏಷ್ಯಾದ ಕೆಲ ದೇಶಗಳಲ್ಲಿ ಮತ್ತೆ ಕೋವಿಡ್‌-19 (Covid19) ವೈರಸ್‌ ಅಬ್ಬರ ಹೆಚ್ಚುತ್ತಿದ್ದು, ದೈನಂದಿನ ಸೋಂಕಿನ ಪ್ರಮಾಣವು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಏಷ್ಯಾದ ಹಲವು ದೇಶಗಳಲ್ಲಿ (Asia Countries) ಮತ್ತೊಮ್ಮೆ ವೈರಸ್‌ ವಿರುದ್ಧ ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ದಕ್ಷಿಣ ಕೊರಿಯಾದಲ್ಲಿ ಸೋಂಕು ಭಾರೀ ವೇಗವಾಗಿ ಹಬ್ಬುತ್ತಿದ್ದು, ಶನಿವಾರ ಒಂದೇ ದಿನ ದಾಖಲೆಯ 3.83 ಲಕ್ಷ ಹೊಸ ಕೇಸ್‌ (New Cases) ದೃಢಪಟ್ಟಿವೆ, 229 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ವಿಯೆಟ್ನಾಂನಲ್ಲಿಯೂ ಒಮಿಕ್ರೋನ್‌ (Omicron) ಕೊರೋನಾ ಸೋಂಕಿನ ಸುನಾಮಿಯೇ ಆರಂಭವಾಗಿದ್ದು, ಮಾ.9ರಂದು ಒಂದೇ ದಿನ 2.65 ಲಕ್ಷ ಕೇಸ್‌ ದೃಢಪಟ್ಟಿವೆ. ಕಳೆದ ವಾರದಲ್ಲಿ ದೇಶದಲ್ಲಿ 14 ಲಕ್ಷ ಕೇಸ್‌ ಪತ್ತೆಯಾಗಿವೆ.

ಚೀನಾದಲ್ಲೂ ಕೊರೋನಾ (Coronavirus) ವೇಗವಾಗಿ ಹರಡುತ್ತಿದ್ದು, ದೈನಂದಿನ ಪ್ರಕರಣಗಳು 2 ವರ್ಷದ ಗರಿಷ್ಠ ಮಟ್ಟವನ್ನು ತಲುಪಿವೆ. ಶನಿವಾರ 1,807 ಸ್ಥಳೀಯ ಕೋವಿಡ್‌ ಕೇಸುಗಳು (Covid Cases) ದಾಖಲಾಗಿವೆ. ಅಲ್ಲದೆ ಚೀನಾ ಬಂದಿಳಿದ ವಿದೇಶಿಯರಲ್ಲಿ 131 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಬೆನ್ನಲ್ಲೇ ಸಾರ್ವಜನಿಕ ಕಾರ‍್ಯಕ್ರಮ, ಭೌತಿಕ ಶಾಲಾ ತರಗತಿ ನಡೆಸದಂತೆ ನಿರ್ಬಂಧ ಹೇರಿದೆ. ಜಿಲಿನ್‌, ಚಾಂಗ್‌ಚುನ್‌, ಯುಚೆಂಗ್‌ ಪ್ರಾಂತ್ಯದಲ್ಲಿ ಲಾಕ್‌ಡೌನ್‌ ಹೇರಲಾಗಿದೆ. ಇನ್ನು ಹಾಂಗ್‌ಕಾಂಗ್‌ನಲ್ಲೂ ಶುಕ್ರವಾರ ಒಂದೇ ದಿನ 19000 ಹೊಸ ಪ್ರಕರಣಗಳು ದೃಢಪಟ್ಟಿವೆ. ಅದಕ್ಕೂ ಮುನ್ನಾ ದಿನ 24,000 ಕೇಸ್‌ ಪತ್ತೆಯಾಗಿದ್ದವು.

Covid Crisis: ದೇಶದಲ್ಲಿ ಬರೀ 3614 ಜನಕ್ಕೆ ಕೊರೋನಾ: ಸಾರ್ವಕಾಲಿಕ ಕನಿಷ್ಠ

ಚೀನಾದಲ್ಲಿ ಶಾಲೆ ಬಂದ್, ಲಾಕ್‌ಡೌನ್ ಜಾರಿ: ಚೀನಾದಲ್ಲಿ, ಕೊರೋನಾ ವೈರಸ್ ಸೋಂಕು ಮತ್ತೊಮ್ಮೆ ವೇಗವಾಗಿ ಹರಡುತ್ತಿದೆ. ಎರಡು ವರ್ಷಗಳ ವಿನಾಶದ ನಂತರ, ಚೀನಾದಲ್ಲಿ ಮತ್ತೊಮ್ಮೆ ಕರೋನಾ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಭಾನುವಾರ, ಚೀನಾದಲ್ಲಿ 3,393 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ವರ್ಷಗಳಲ್ಲಿ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಸೋಂಕು ಪ್ರಕರಣ ಇದಾಗಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಫೆಬ್ರವರಿ 2020 ರಿಂದ ಕೊರೋನಾ ಪ್ರಕರಣಗಳ ಅತಿ ಹೆಚ್ಚು ದೈನಂದಿನ ಅಂಕಿ ಅಂಶವಾಗಿದೆ ಎಂದು ಹೇಳಿದೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ದೃಷ್ಟಿಯಿಂದ, ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಶಾಂಘೈನಲ್ಲಿ ಶಾಲೆಗಳನ್ನು ಮುಚ್ಚಿದ್ದಾರೆ ಮತ್ತು ಅನೇಕ ಈಶಾನ್ಯ ನಗರಗಳಲ್ಲಿ ಲಾಕ್‌ಡೌನ್ ವಿಧಿಸಿದ್ದಾರೆ.

ವಿಶ್ವಾದ್ಯಂತ ಕೊರೋನಾ ಪ್ರಕರಣಗಳು 44.66 ಕೋಟಿ ದಾಟಿದ್ದು, ಸತ್ತವರ ಸಂಖ್ಯೆ ಸುಮಾರು 60 ಲಕ್ಷ ತಲುಪಿದೆ. ಕಳೆದ ಒಂದು ತಿಂಗಳಲ್ಲಿ ವಿಶ್ವದಾದ್ಯಂತ 5.22 ಕೋಟಿಗೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗಿದ್ದು, ಈ ಅಪಾಯಕಾರಿ ವೈರಸ್‌ನಿಂದ ಎರಡು ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

Covid Crisis: ಕೋವಿಡ್‌ಗೆ ಕರ್ನಾಟಕದಲ್ಲಿ 2 ಸಾವು: 2 ತಿಂಗಳಲ್ಲೇ ಕನಿಷ್ಠ

80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೋನಾ ವೈರಸ್‌ನ ನಾಲ್ಕನೇ ಡೋಸ್ ನೀಡಲು ಫ್ರಾನ್ಸ್ ಸಿದ್ಧತೆಗಳನ್ನು ಪ್ರಾರಂಭಿಸಿದೆ. 80 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಅನ್ನು ಫ್ರಾನ್ಸ್ ನೀಡಲಿದೆ ಎಂದು ಫ್ರಾನ್ಸ್ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಹೇಳಿದ್ದಾರೆ. ಮೂರು ತಿಂಗಳಿಗಿಂತ ಹೆಚ್ಚು ಕಾಲ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿರುವ ಜನರಿಗೆ ಈ ಡೋಸ್ ನೀಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು