ಮತ್ತೆ ಮಹಾ ಕೊರೋನಾ ಸ್ಫೋಟ: ದೇಶಾದ್ಯಂತ ಒಟ್ಟು 3018 ಹೊಸ ಕೇಸು!

By Kannadaprabha NewsFirst Published May 7, 2020, 9:13 AM IST
Highlights

ಮತ್ತೆ ಮಹಾ ಕೊರೋನಾ ಸ್ಫೋಟ| ದೇಶಾದ್ಯಂತ ಒಟ್ಟು 3018 ಹೊಸ ಕೇಸು, 88 ಸಾವು, 52354ಕ್ಕೇರಿದ ಸೋಂಕಿತರ ಸಂಖ್ಯೆ| ಮಹಾರಾಷ್ಟ್ರದಲ್ಲಿ ದಾಖಲೆಯ 1233 ಕೇಸು, ಮುಂಬೈನಲ್ಲಿ 10000 ದಾಟಿದ ಪೀಡಿತರು

ನವದೆಹಲಿ(ಮೇ.07): ಬುಧವಾರ ದೇಶಾದ್ಯಂತ 3018 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 88 ಜನ ಸಾವನ್ನಪ್ಪಿದ್ದಾರೆ. ಇದು ಈವರೆಗೆ ದಾಖಲಾದ 2ನೇ ಗರಿಷ್ಠ ದೈನಂದಿನ ಸೋಂಕಿನ ಪ್ರಮಾಣವಾಗಿದೆ. ಇರೊಂದಿಗೆ ದೇಶದಲ್ಲಿ ಒಟ್ಟು ಪೀಡಿತರ ಸಂಖ್ಯೆ 52354ಕ್ಕೆ ತಲುಪಿದೆ. ಜೊತೆಗೆ ಈವರೆಗೆ ಒಟ್ಟಾರೆ 14525 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಲ್ಲದೆ ಈವರೆಗೆ 1702 ಜನ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ ಬುಧವಾರ ರಾತ್ರಿ ವೇಳೆಗೆ ದೇಶದಲ್ಲಿ 49391 ಸೋಂಕಿತ ಪ್ರಕರಣಗಳಿದ್ದು, 1693 ಜನ ಸಾವನ್ನಪ್ಪಿದ್ದಾರೆ.

ಭಾರೀ ಏರಿಕೆ:

ಬುಧವಾರವೂ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 1233 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16758ಕ್ಕೆ ತಲುಪಿದೆ. ಜೊತೆಗೆ ಮತ್ತೆ 34 ಮಂದಿ ಸಾವನ್ನಪ್ಪಿದ್ದು, ಒಟ್ಟು ಬಲಿಯಾದವರ ಸಂಖ್ಯೆ 651ಕ್ಕೆ ತಲುಪಿದೆ. ಈ ಪೈಕಿ ಮುಂಬೈ ಒಂದರಲ್ಲೇ 769 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,527ಕ್ಕೆ ಏರಿಕೆಯಾಗಿದೆ. ಜೊತೆಗೆ ನಗರದಲ್ಲಿ ಈವರೆಗೆ 412 ಮಂದಿ ಸಾವನ್ನಪ್ಪಿದ್ದಾರೆ.

ಉಳಿದಂತೆ ತಮಿಳುನಾಡಿನಲ್ಲಿ 771, ಗುಜರಾತ್‌ನಲ್ಲಿ 380, ರಾಜಸ್ಥಾನದಲ್ಲಿ 113, ದೆಹಲಿಯಲ್ಲಿ ಪಂಜಾಬ್‌ನಲ್ಲಿ 75 ಹೊಸ ಪ್ರಕರಣಗಳು ದಾಖಲಾಗಿವೆ.

click me!