ಭಾರತವನ್ನ ಕೆಣಕುವವರ ಪಾಲಿಗೆ ಫಿಯರ್​ಲೆಸ್ ಫಾರಿನ್ ಮಿನಿಸ್ಟರ್ ಎಸ್‌ ಜೈ ಶಂಕರ್!

By Suvarna News  |  First Published Apr 28, 2022, 3:40 PM IST

ನೋಟ ತೀಕ್ಷ್ಣ..ಮಾತು ಬಾಣ ಅಮೆರಿಕಾದಲ್ಲೇ ನಿಂತು ಅಮೆರಿಕಾಗೆ  ಕೌಂಟರ್ ಶಾಟ್..! ಭಾರತ ರಷ್ಯಾ ತೈಲ ವ್ಯವಹಾರ ಕುರಿತು ಪತ್ರಕರ್ತೆಯ ಬಾಯಿಗೆ ಬೀಗ ಹಾಕಿದ..ಜೈ ಶಂಕರ್..! ಭಾರತವನ್ನ ಕೆಣಕುವವರ ಪಾಲಿಗೆ..ಫಿಯರ್​ಲೆಸ್ ಫಾರಿನ್ ಮಿನಿಸ್ಟರ್..! ಶಂಕರ್ ‘ಗುರು’
 


ಬೆಂಗಳೂರು (ಏ.28): ಭಾರತವೀಗ (India) ವಿಶ್ವ ಮಟ್ಟದಲ್ಲಿ ತುಂಬಾ ಪ್ರಭಾವಿ ರಾಷ್ಟ್ರ. ತೈಲ ವ್ಯವಹಾರದಿಂದ ಹಿಡಿದು ರಷ್ಯಾ ಉಕ್ರೇನ್ ಸಂಘರ್ಷದ (Russia Ukraine Conflict) ವರೆಗೆ ಎಲ್ಲಾ ವಿಚಾರದಲ್ಲೂ ಭಾರತದ ನಡೆ ಹಾಗೂ ನುಡಿ ಬಗ್ಗೆ ಭಾರಿ ಕುತೂಹಲ ಉಳಿದ ದೇಶಗಳಿಗೆ ಇದೆ. ನಾವೇ ದೊಡ್ಡವರು ಅಂತ ಇಷ್ಟು ದಿನ ಮೆರಿತ ಇದ್ದ ದೇಶಗಳು ಭಾರತದ ಬಗ್ಗೆ ಆಲೋಚಿಸೋ ಹಾಗೇ ಬೆಳೆದಿದೆ. ಇದಕ್ಕೆಲ್ಲಾ ಬೇಕಾಗಿರೋದು ಸಮರ್ಥ ವಿದೇಶಾಂಗ ವ್ಯವಹಾರ  ಆ ಕೆಲಸವನ್ನ ತುಂಬಾ ಪ್ರಭಾವಶಾಲಿಯಾಗಿ ಮಾಡ್ತಾ ಇರೋದು ಫಾರಿನ್ ಮಿನಿಸ್ಟರ್ ಜೈ ಶಂಕರ್ (External Affairs Minister Dr S Jaishankar). 

ತಿರುಗೇಟು..ತಿರುಗೇಟು ತಿರುಗೇಟು..ಐ ಅವಾಯ್ಡ್ ತಿರುಗೇಟು..ಬಟ್ ತಿರುಗೇಟು ಲೈಕ್ಸ್ ಮಿ..ಐ ಕಾಂಟ್ ಅವಾಯ್ಡ್.. ಎಲ್ಲಾ ಕಡೆ ಹವಾ ಸೃಷ್ಟಿಸಿರೋ ಕೆಜಿಎಫ್ 2 ಡೈಲಾಗಿನ ಜೈ ಶಂಕರ್ ವರ್ಷನ್ ಇದು.ಸುಬ್ರಹ್ಮಣ್ಯಂ ಜೈ ಶಂಕರ್. ಭಾರತದ ವಿದೇಶಾಂಗ ಸಚಿವ. ಫಿಯರ್​ಲೆಸ್ ಫಾರಿನ್ ಮಿನಿಸ್ಟರ್ ಅನ್ನೋದಿಕ್ಕೆ ಯಾವ ಫಿಯರ್ ಕೂಡ ಇಲ್ಲಾ. ಈ ಸಚಿವ ಅದೆಷ್ಟು ಪ್ರಬುದ್ಧತೆಯಿಂದ ಮಾತನಾಡ್ತಾರೆ ಅಂದ್ರೆ ಅವರ ಮಾತುಗಳಲ್ಲೇ ಅನುಭವ ಎಷ್ಟಿದೆ ಅನ್ನೋದು ಗೊತ್ತಾಗಿ ಬಿಡುತ್ತೆ. ಯಾವ ದೇಶದಲ್ಲಿ ನಿಂತಿದ್ದೀನಿ ಎದುರು ಯಾರು ಇದ್ದಾರೆ ಅನ್ನೋ ಲೆಕ್ಕವೇ ಇಲ್ಲಾ.. ಭಾರತವನ್ನ ಕೆಣಕಿ ಪ್ರಶ್ನೆ ಹಾಕಿದ್ರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ.. ರಿಮೆಂಬರ್ ದ ನೇಮ್ ಡಾ. ಸುಬ್ರಹ್ಮಣ್ಯಂ ಜೈ ಶಂಕರ್.

Tap to resize

Latest Videos

ಸಾಮಾನ್ಯವಾಗಿ ಅಮೆರಿಕಾ (USA) ಅಂದ್ರೆ ಎಲ್ಲಾ ದೇಶಗಳು ಒಂದು ಭಯಯುಕ್ತ ಗೌರವವನ್ನ ಇಟ್ಕೊಂಡಿದ್ದಾವೆ. ದೊಡ್ಡಣ್ಣ ಅನ್ನೋ ಹಣೆ ಪಟ್ಟಿ ಇದೆ. ವಿಶ್ವದ ಅತ್ಯಂತ ಬಲಾಢ್ಯ ದೇಶ ಅಂತ ಬೀಗುತ್ತೆ ಆದ್ರೆ ಅದೇ ಅಮೆರಿಕಾದಲ್ಲಿ ನಿಂತು ಭಾರತದ ಸ್ಥಿತಿಗತಿ ಬಗ್ಗೆ ಮಾತನ್ನಾಡಿದವರ ಬೆವರಿಳಿಸಿದ್ದಾರೆ. ಇನ್ನು ಮುಂದೆ ಪ್ರಶ್ನೆ ಕೇಳೊದಕ್ಕೂ ಮೊದಲು ನೂರು ಸಲ ಆಲೋಚಿಸಬೇಕು ಅನ್ನೋ ಪಾಠ ಮಾಡಿದ್ದಾರೆ ಈ ಶಂಕರ್ ಗುರೂ..

ಅಮೆರಿಕ, ಭಾರತ ಮಧ್ಯೆ ನಡೆದ ಸಭೆಯ ನಂತರ ಜಂಟಿ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ (United States Secretary of State Antony Blinken), ಭಾರತದಲ್ಲಿನ ಕೆಲವು ರಾಜ್ಯಗಳಲ್ಲಿ ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗ್ತಾ ಇದೆ, ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ನಡೀತಾ ಇದೆ. ಭಾರತದಲ್ಲಿ ಆಗ್ತಾ ಇರೋ ಕೆಲವು ಘಟನೆಗಳನ್ನು ನಾವು ಗಮನಿಸುತ್ತಿದ್ದೇವೆ ಅಂತ ಹೇಳಿದ್ದರು. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್ ಸಂಬಂಧವಿಲ್ಲದ ಪ್ರಶ್ನೆ ಕೇಳಿದ್ದರು.. ಯಾಕೆಂದ್ರೆ ಒಂದು ಮೀಟಿಂಗ್ ಅಂದ್ರೆ ಅಲ್ಲಿ ಪೂರ್ವನಿಗದಿಯಾದ ವಿಚಾರಗಳು ಮಾತ್ರ ಚರ್ಚೆ ಆಗಬೇಕು..ಭಾರತ ಹಾಗೂ ಅಮೆರಿಕಾ ನಡುವೆ ಬೇರೆಯದೇ ಚರ್ಚೆ ಇತ್ತು. ಈ ನಡುವೆ ಅಮೆರಿಕಾ ಕಡೆಯಿಂದ ಬಂದ ಪ್ರಶ್ನೆ ಅಂದ್ರೆ ಭಾರತದಲ್ಲಿ ಮಾನವ ಹಕ್ಕುಗಳನ್ನ ದಮನ ಮಾಡಲಾಗುತ್ತಿದೆ ಹಾಗೂ ಅದನ್ನ ಅಮೆರಿಕಾ ನೋಡ್ತಾ ಇದೆ ಅನ್ನೋದು. 

ನಾವು ಈ ಸಭೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಚರ್ಚಿಸೋಕೆ ಬಂದಿಲ್ಲ. ಆದರೂ ನಾನು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡುತ್ತೇನೆ. ಜನರು ಭಾರತದ ಬಗ್ಗೆ ಬೇರೆ ಬೇರೆ ದೃಷ್ಟಿಕೋನಗಳನ್ನ ಹೊಂದಿರಬಹುದು. ನಮಗೂ ಕೂಡ ಅವರ ಅಭಿಪ್ರಾಯಗಳ ಬಗ್ಗೆ ಅರಿವಿದೆ. ಭಾರತದ ಬಗ್ಗೆ ಲಾಬಿ ಹಾಗೂ ವೋಟ್ ಬ್ಯಾಂಕ್ (Vote Bank) ಇಂತ ವಿಚಾರಗಳನ್ನ ಮುಂದಿಡುತ್ತಾರೆ. ಈ ವಿಚಾರದ ಬಗ್ಗೆ ಚರ್ಚೆ ಆದಲ್ಲಿ ಭಾರತ ಎಂದಿಗೂ ಉತ್ತರಿಸೋಕೆ ಹಿಂದೇಟು ಹಾಕೋದಿಲ್ಲಾ. ಇದೇ ವಿಚಾರದ ಬಗ್ಗೆ ನಾನು ಹೇಳೊದಾದ್ರೆ ನಮ್ಮ ಅಭಿಪ್ರಾಯ ನಿಮ್ಮ ಗಮನ ಇತರ ದೇಶಗಳ ಮಾನವ ಹಕ್ಕುಗಳ (Human Rights) ಮೇಲೆಯೂ ಇರ್ಬೇಕು ಅನ್ನೋದು. ಅಮೆರಿಕಾವನ್ನೂ ಸೇರಿ ಮಾನವ ಹಕ್ಕುಗಳ ಬಗ್ಗೆ ಗಮನ ಇರಲಿ. ಈ ದೇಶದಲ್ಲಿ ಭಾರತದ ಮಾನವ ಹಕ್ಕುಗಳ ವಿಚಾರ ಬಂದಿದೆ. ಅಮೆರಿಕಾದ ಮಾನವ ಹಕ್ಕುಗಳ ಬಗ್ಗೆ ಭಾರತವೂ ಕಣ್ಣಿಟ್ಟಿದೆ.

ಇದಲ್ಲವೇ ಉತ್ತರ..? ಇದಲ್ಲವೇ ಪ್ರಬುದ್ಧತೆ..? ಇದಲ್ಲವೇ ನೈಪುಣ್ಯತೆ..? ಸಂಬಂಧವಿಲ್ಲದ ಸಭೆಯಲ್ಲಿ ಅಪ್ರಸ್ತುತ ವಿಚಾರವನ್ನ ಎತ್ತಿ ಭಾರತವನ್ನ ಇಕ್ಕಟ್ಟಿಗೆ ಸಿಲುಕಿಸೋಕೆ ಹೋಗಿ ಬಾಯಿಗೆ ಬೀಗ ಜಡಿಸಿಕೊಂಡಿದ್ದು ಅಮೆರಿಕಾ. ಅವರದ್ದೇ ನೆಲದಲ್ಲಿ ನಿಂತು ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳೋ ಅಮೆರಿಕಾಗೆ ಮುಖಭಂಗ ಮಾಡೋದು ಸಾಮಾನ್ಯ ಮನುಷ್ಯನ ಕೈಲಿ ಆಗೋದಿಲ್ಲಾ. ಇನ್ನೊಂದು ಮಾತು ಹೆಚ್ಚು ಬಂದಿದರೂ ಕೂಡ ಕಪ್ಪು ವರ್ಣದವರ ಮೇಲೆ ನಡೆಯೋ ದೌರ್ಜನ್ಯದಿಂದ ಹಿಡಿದು ಅಮೆರಿಕಾವನ್ನ ತಲ್ಲಣ ಗೊಳಿಸಿದ್ದ ಪ್ರತಿಭಟನೆ ವಿಚಾರ ತೆಗೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾದ ಬಟ್ಟೆ ಬಿಚ್ಚಿಸುತ್ತಿದ್ದರೇನೋ.

ದೊಡ್ಡಣ್ಣಗೆ ಜೈಶಂಕರ್ ತಿರುಗೇಟು: ಅಮೆರಿಕದ ಮಾನವ ಹಕ್ಕು ಸಮಸ್ಯೆಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ!

ಭಾರತ ಅಂದ್ರೆ ಎಲ್ಲಾ ದೇಶಗಳಿಗೂ ಒಂದು ರೀತಿಯ ಹತಾಷೆ ಶುರುವಾದಂತಿದೆ. ಜಾಗತಿಕ ಸಮಸ್ಯೆಗಳ ನಡುವೆಯೂ ಕೂಡ ಭಾರತ ಆರಾಮಗಿ ಇರೋದನ್ನ ಕಂಡು ತುತ್ತಿನ ಚೀಲದಲ್ಲಿ ಕೆಂಡದ ತುಂಡು ಬಿದ್ದಂತಿದೆ. ಹೀಗಾಗಿ ವೇದಿಕೆ ಸಿಕ್ಕಿದ್ರೆ ಸಾಕು ಭಾರತದ ಬಗ್ಗೆಯೇ ಹೊಟ್ಟೆಯುರಿಯ ಮಾತನ್ನ ಆಡೋಕೆ ನೋಡ್ತಾರೆ. ಭಾರತ ಹಾಗೂ ರಷ್ಯಾ ನಡುವೆ ಆಗ್ತಾ ಇರೋ ತೈಲ ವ್ಯವಹಾರದ ವಿಚಾರವಾಗಿ ಒಬ್ಬ ಪತ್ರಕರ್ತ, ಜೈ ಶಂಕರ್ ಅವರನ್ನ ಒಂದು ಪ್ರಶ್ನೆ ಕೇಳುತ್ತಾರೆ.  ಅವಶ್ಯಕತೆಗೂ ಮೀರಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ತಾ ಇದ್ದೀರಿ ಅನ್ನೋ ಮಾತನ್ನಾಡ್ತಾರೆ. ತೈಲದ ಸಲುವಾಗಿ ಹಣಕಾಸಿನ ವಿನಿಮಯದ ವಿಚಾರ ಪ್ರಸ್ತಾಪ ಮಾಡ್ತಾರೆ.  ಆಗ ಉತ್ತರಿಸೋಕೆ ಸಿದ್ಧರಾಗಿದ್ದು ಫಿಯರ್ಲೆಸ್ ಫಾರಿನ್ ಮಿನಿಸ್ಟರ್ ಜೈ ಶಂಕರ್. ಭಾರತವು ರಷ್ಯಾದಿಂದ ತೈಲ ಖರೀದಿಯ ಬಗ್ಗೆ ನೀವು ನೋಡ್ತಾ ಇದ್ದೀರಿ ಅಂದ್ರೆ ನಾನು ನಿಮಗೆ ಮಾರ್ಗದರ್ಶನ ಮಾಡ್ತೀನಿ, ನಿಮ್ಮ ನೋಟ ಇರಬೇಕಾಗಿರೋದು ಭಾರತದ ಮೇಲಲ್ಲ. ಯುರೋಪ್ ಮೇಲೆ. ನಾವು ತೈಲವನ್ನ ರಷ್ಯಾದಿಂದ ಖರೀದಿ ಮಾಡಿದ್ದೇವೆ ಅದು ಭಾರತದ ಎನರ್ಜಿ ಸೆಕ್ಯುರಿಟಿಗೆ ಅವಶ್ಯವಾಗಿದೆ. ಆದ್ರೆ ಅಂಕಿ ಅಂಶಗಳನ್ನ ನೋಡಿದಾಗ ನನಗೆ ಅನಿಸಿದ್ದು ನಮ್ಮ ಒಂದು ತಿಂಗಳ ಒಟ್ಟೂ ಖರೀದಿ ಏನಿದೆ ಅದು ಯುರೋಪಿನ ಒಂದು ಒಪ್ಪತ್ತಿನ ಅವಶ್ಯಕತೆಗಿಂತಲೂ ಕಡಿಮೆ. ಹಾಗಾಗಿ ನೀವು  ಆ ಬಗ್ಗೆ ಆಲೋಚಿಸೋದು ಉತ್ತಮ.

ತಮಿಳುನಾಡಿನ 13 ಮೀನುಗಾರರ ಜಾಮೀನಿಗೆ 13 ಕೋಟಿ ನೀಡಿ ಎಂದ ಶ್ರೀಲಂಕಾ ಕೋರ್ಟ್!

ಕೊಟ್ರೆ ಕೊಡಬೇಕು ಇವರಂಗ.. ಇನ್ನೊಂದು ಮಾತು ಬರದಂಗ.. ಖಂಡಿತಾ ಭಾರತವನ್ನ ಮುಜುಗರ ಮಾಡೋಕೆ ಬರೋರು ಇನ್ನು ಅಲರ್ಟ್ ಆಗಿರಿ. ಯಾರ ಜೊತೆಗೆ ಮಾತಾಡ್ತಾ ಇದ್ದೀನಿ ಅನ್ನೊದು ಗೊತ್ತಿರಲಿ..ಭಾರತದ ವಿಚಾರಕ್ಕೆ ಕಿರಿಕ್ ಮಾಡೋ ಮಾತುಗಳನ್ನ ಆಡೋರಿಗೆ ಅಲ್ಲಲ್ಲೇ ಬೆವರಿಳಿಸೋ ನಿರ್ಭೀತ ಮಂತ್ರಿ ಇದ್ದಾರೆ. ಅಮೆರಿಕಾದಂತ ಅಮೆರಿಕಾಗೇ ಬಿಟ್ಟಿಲ್ಲಾ. ಇನ್ನು ಉಳಿದವರು ಯಾವ ಲೆಕ್ಕ ಅಲ್ವಾ..?  ಜೈ ಶಂಕರ್ ಅವರು ನಿನ್ನೆ ಮೊನ್ನೆ ಬಂದು ವಿದೇಶಾಂಗ ಸಚಿವಾಲಯ ಸೇರಿಕೊಂಡವರಲ್ಲಾ|. ವಿದೇಶಾಂಗ ಕ್ಷೇತ್ರದಲ್ಲಿ ಆಳ ಅಗಲ ತಿಳಿದಿದೆ. ಈಗ ಮಾತಾಡ್ತಾ ಇರೋದು ಅವರಲ್ಲಾ. ಅವರ ಅನುಭವ. ಸುಷ್ಮಾ ಸ್ವರಾಜ್ ಅವರ ನಂತರ ಭಾರತಕ್ಕೆ ಸಿಕ್ಕ ಮೋಸ್ಟ್ ಪವರ್ ಫುಲ್ ಫಾರಿನ್ ಮಿನಿಸ್ಟರ್ ಅಂದ್ರೂ ತಪ್ಪಾಗೋದಿಲ್ಲ. ಭಾರತ ವಿದೇಶಿ ನೆಲದಲ್ಲಿ ಎಲ್ಲೂ ಅವಮಾನಕ್ಕೆ ಒಳಗಾಗಬಾರ್ದು ಅನ್ನೋ ಉದ್ದೇಶವೇ ಇಂದು ನಮ್ಮ ಬಗ್ಗೆ ವಿದೇಶಿಗರಿಗೆ ಒಂದು ಭಯ ಹುಟ್ಟಿಸಿದೆ.

click me!