
ನವದೆಹಲಿ(ಮೇ.12): ದೇಶದ್ರೋಹ ಕಾಯ್ದೆಯಡಿ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಚ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಲ್ಲಿ ದಾಖಲಾದ 300ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ಸ್ಥಗಿತಗೊಳ್ಳಲಿದೆ.
2015-2020ರ ಅವಧಿಯಲ್ಲಿ ದೇಶಾದ್ಯಂತ ದೇಶದ್ರೋಹ ಕಾಯ್ದೆ ಸೆಕ್ಷನ್ 124 ಎ ಅಡಿಯಲ್ಲಿ 356 ಪ್ರಕರಣ ದಾಖಲಾಗಿದ್ದು, 548 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಇದುವರೆಗೆ 6 ಜನರ ಮೇಲಿನ ಆರೋಪ ಮಾತ್ರವೇ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ.
ದೇಶದ್ರೋಹದ ಕಾಯ್ದೆಗೆ ತಡೆ ಹೇರಿದ ಸುಪ್ರೀಂ, ಮರುಪರಿಶೀಲನೆಯವರೆಗೂ 124Aಯಡಿ FIR ದಾಖಲಿಸುವಂತಿಲ್ಲ!
ಬುಧವಾರದ ಸುಪ್ರೀಂ ಆದೇಶದಿಂದಾಗಿ ಟೂಲ್‌ಕಿಟ್ ಪ್ರಕಣದಲ್ಲಿ ಬೆಂಗಳೂರಿನ ದಿಶಾ ರವಿ, ಜೆಎನ್‌ಯುದಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ, ಕೇರಳ ಮೂಲದ ಪತ್ರಕರ್ತ ಸಿದ್ಧಿಕಿ ಕಪ್ಪನ್, ಲೇಖಕಿ ಅರುಂಧತಿ ರಾಯ್, ಹನುಮಾನ್ ಚಾಲೀಸಾ ಪ್ರಕರಣದಲ್ಲಿ ಪಕ್ಷೇತರ ಸಂಸದೆ ನವನೀತ್ ರಾಣಾ ಮೊದಲಾದವರ ವಿರುದ್ಧ ದಾಖಲಾದ ಪ್ರಕರಣಗಳ ವಿಚಾರಣೆ ಸ್ಥಗಿತಗೊಳ್ಳಲಿದೆ.
ದೇಶದ್ರೋಹ ಕಾಯ್ದೆ ಅಡಿ 326 ಕೇಸು ದಾಖಲು: 6 ಮಂದಿಗೆ ಶಿಕ್ಷೆ
2014ರಿಂದ 2019ರವರೆಗೆ ದೇಶದಲ್ಲಿ 326 ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ. ಆದರೆ ಕೇವಲ 6 ಮಂದಿಗೆ ಮಾತ್ರ ಇದರಡಿ ಶಿಕ್ಷೆ ನೀಡಲಾಗಿದೆ. ಅಸ್ಸಾಂನಲ್ಲಿ ಅತಿ ಹೆಚ್ಚು 54 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಜಾರ್ಖಂಡ್‌ನಲ್ಲಿ 40, ಹರ್ಯಾಣದಲ್ಲಿ 31 ಪ್ರಕರಣಗಳು ದಾಖಲಾಗಿವೆ.
ದೇಶದ್ರೋಹ ಕಾನೂನು, ಉಲ್ಟಾ ಹೊಡೆದ ಕೇಂದ್ರ: ಮೋದಿ ಸೂಚನೆ ಮೇಲೆ ನಿಲುವು ಬದಲಿಸಿದ ಸರ್ಕಾರ
ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ 141 ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ಸಲ್ಲಿಕೆಯಾಗಿದ್ದು, 6 ಜನರಿಗೆ ಮಾತ್ರ 6 ವರ್ಷಗಳ ಕಾಲ ಶಿಕ್ಷೆ ವಿಧಿಲಾಗಿದೆ ಎಂದು ಗೃಹ ಸಚಿವಾಲಯದ ದತ್ತಾಂಶ ತಿಳಿಸಿದೆ. ಅಸ್ಸಾಂನಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 26 ಪ್ರಕರಣಗಳಲ್ಲಿ ದೋಷಾರೋಪಣೆ ಸಲ್ಲಿಕೆಯಾಗಿದ್ದು, 25 ಪ್ರಕರಣಗಳಲ್ಲಿ ನ್ಯಾಯಾಂಗ ವಿಚಾರಣೆ ಮುಕ್ತಾಯಗೊಂಡಿದೆ. ಕರ್ನಾಟಕದಲ್ಲಿ 22 ಪ್ರಕರಣಗಳು ದಾಖಲಾಗಿದ್ದು, 17 ಪ್ರಕರಣಗಳಲ್ಲಿ ದೋಷರೋಪಣೆ ಸಲ್ಲಿಸಲಾಗಿದೆ. ಕೇವಲ 1 ಪ್ರಕರಣದಲ್ಲಿ ಮಾತ್ರ ನ್ಯಾಯಾಂಗ ವಿಚಾರಣೆ ಮುಕ್ತಾಯವಾಗಿದೆ.
ಇನ್ನು ಬಿಹಾರ್, ಜಮ್ಮು ಕಾಶ್ಮೀರ ಮತ್ತು ಕೇರಳದಲ್ಲಿ 25 ಪ್ರಕರಣಗಳು ದಾಖಲಾಗಿವೆ. ಮೇಘಾಲಯ, ಮಿಜೋರಾಂ, ತ್ರಿಪುರಾ, ಸಿಕ್ಕಿಂ, ಅಂಡಮಾನ್ ನಿಕೋಬಾರ್, ಲಕ್ಷದ್ವೀಪ, ಪುದುಚೆರಿ, ದಿಯು ದಾಮನ್ ಮತ್ತು ಚಂಡೀಗಢಗಳಲ್ಲಿ ಯಾವುದೇ ದೇಶದ್ರೋಹದ ಪ್ರಕರಣಗಳು ದಾಖಲಾಗಿಲ್ಲ.
ದೇಶದ್ರೋಹ ಕಾಯ್ದೆಗೆ ಸುಪ್ರೀಂ ಕೋರ್ಚ್ ತಡೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ರಿಟಿಷ್ ಕಾಲ ಕಾಯ್ದೆಯಾದ ‘ದೇಶದ್ರೋಹ ಕಾಯ್ದೆ’ಗೆ ಸುಪ್ರೀಂ ಕೋರ್ಚ್ ಬುಧವಾರ ತಡೆ ನೀಡಿದೆ. ‘ದೇಶಾದ್ಯಂತ ವಿವಿಧ ವ್ಯಕ್ತಿಗಳ ಮೇಲೆ ಈಗಾಗಲೇ ದಾಖಲಾಗಿರುವ ದೇಶದ್ರೋಹ ಪ್ರಕರಣದ ವಿಚಾರಣೆಗೆ ತಡೆ ನೀಡಬೇಕು ಹಾಗೂ ಮುಂದಿನ ಆದೇಶದವರೆಗೆ ದೇಶದ್ರೋಹದ ಕಾಯ್ದೆಯಡಿ ಹೊಸ ಎಫ್‌ಐಆರ್ ದಾಖಲಿಸಕೂಡದು’ ಎಂದು ಅದು ಆದೇಶ ಹೊರಡಿಸಿದೆ.
ತೀವ್ರ ಪ್ರಮಾಣದಲ್ಲಿ ದುರ್ಬಳಕೆ ಆಗುತ್ತಿದೆ ಎಂಬ ಟೀಕೆಗೆ ಗುರಿಯಾಗಿರುವ ದೇಶದ್ರೋಹ ಕಾಯ್ದೆ ಬಗ್ಗೆ ಸೂಕ್ತ ವೇದಿಕೆ ಮೂಲಕ ನಿಷ್ಕರ್ಷೆಗೆ ಸಿದ್ಧ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ ಬೆನ್ನಲ್ಲೇ ಸುಪ್ರೀಂಕೋರ್ಚ್ ಈ ನಿರ್ಧಾರ ಪ್ರಕಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ