ದೆಹಲಿ(ಮೇ.11): ಏರ್ ಇಂಡಿಯಾ ವಿಮಾನ ಹತ್ತಲ ತಡವಾಗಿ ಬಂದ ಮಹಿಳೆಗೆ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಕಾರಣ ಅಲ್ಲೆ ಕುಸಿದು ಬಿದ್ದ ಘಟನೆ ನಡೆದಿದೆ. ಆದರೆ ಸಿಬ್ಬಂದಿಗಳು ಮಹಿಳೆಗೆ ವೈದ್ಯಕೀಯ ನೆರವು ನೀಡುವ ಬದಲು ಭದ್ರತಾ ಸಿಬ್ಬಂದಿಗಳನ್ನು ಕರೆಯಿಸಿ ಹೊರಗಟ್ಟುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ತಪ್ಪು ಮಾಹಿತಿ ನೀಡುತ್ತಿದೆ ಎಂದು ಏರ್ ಇಂಡಿಯಾ ಹೇಳಿದೆ.
ಮಹಿಳೆ ಹಾಗೂ ಮತ್ತಿಬ್ಬರು ಏರ್ ಇಂಡಿಯಾ ವಿಮಾನ ಪ್ರಯಾಣಕ್ಕಾಗಿ ತಡವಾಗಿ ಆಗಮಿಸಿದ್ದಾರೆ. ಭದ್ರತಾ ಪರಿಶೀಲನೆ ವೇಳೆ ವಿಳಂಬವಾಗಿದೆ. ಹೀಗಾಗಿ ನಮ್ಮನ್ನು ಏರ್ ಇಂಡಿಯಾ ವಿಮಾನ ಹತ್ತಲು ಅವಕಾಶ ಮಾಡಿಕೊಡಿ ಎಂದು ಮಹಿಳೆ ಮನವಿ ಮಾಡಿದ್ದಾಳೆ. ಆದರೆ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ.
ಟಾಟಾ ಮಾಲೀಕತ್ವದಲ್ಲಿ ಲಾಭದತ್ತ ಏರ್ ಇಂಡಿಯಾ, ಏರ್ ಏಷಿಯಾದ ಶೇ.100 ಪಾಲು ಖರೀದಿಗೆ ರೆಡಿ!
ಪ್ರವೇಶ ನಿರಾಕರಿಸಿದ ಕಾರಣ ಮಹಿಳೆ ಪ್ರವೇಶ ದ್ವಾರದ ಬಳಿ ಕುಸಿದು ಬಿದ್ದಿದ್ದಾರೆ. ಇತ್ತ ಸಿಬ್ಬಂದಿಗಳು ಮಹಿಳೆಯ ಕಡೆಗೆ ಗಮನ ಕೊಟ್ಟಿಲ್ಲ. ಇಷ್ಟೇ ಅಲ್ಲ ವೈದ್ಯಕೀಯ ಸಿಬ್ಬಂದಿ ಕರೆಸುವ ಬದಲು ಭದ್ರತಾ ಸಿಬ್ಬಂದಿ ಕರೆಯಿಸಿ ಮಹಿಳೆಯನ್ನು ಹೊರಗಟ್ಟುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋ ವೈರಲ್ ಆಗಿದೆ.
ಮಹಿಳೆಯ ಜೊತೆಗಿದ್ದ ಇಬ್ಬರು ಈ ವಿಡಿಯೋ ಮಾಡಿದ್ದಾರೆ. ಸಿಬ್ಬಂದಿಗಳ ವರ್ತನಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಸಿದು ಬಿದ್ದ ಮಹಿಳೆಗೆ ವಿಮಾನ ನಿಲ್ದಾಣದಲ್ಲಿ ಇತರರು ನೀರು ನೀಡಿ ಆರೈಕೆ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕುಸಿದು ಬಿದ್ದ ಮಹಿಳೆಗೆ ವೈದ್ಯಕೀಯ ನೆರವು ನೀಡುವುದು ಆದ್ಯ ಕರ್ತವ್ಯವಾಗಿದೆ. ಆದರೆ ಸಿಬ್ಬಂದಿಗಳ ವರ್ತನೆ ಬೇಸರ ತರಿಸಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ಟಾಟಾ ಗ್ರೂಪ್ ತೆಕ್ಕೆಗೆ ಜಾರುತ್ತಿದ್ದಂತೆಯೇ ಬದಲಾಯ್ತು ಸಿಬ್ಬಂದಿಯ ಅದೃಷ್ಟ!
ಏರ್ ಇಂಡಿಯಾ ಸಿಬ್ಬಂದಿಗಳ ವಿರುದ್ದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ. ಈ ವಿಡಿಯೋದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದಿದೆ. ಏರ್ ಇಂಡಿಯಾ ಮಹಿಳೆ ಸೇರಿದಂತೆ ಮೂವರು ಪ್ರಯಾಣಿಕರು ಆದಷ್ಟು ಬೇಗ ಪ್ರವೇಶ ಪಡೆಯಬೇಕು ಎಂದು ಪರಿ ಪರಿಯಾಗಿ ಅನೌನ್ಸ್ ಮಾಡಿದೆ. ಹಲವು ಅನೌನ್ಸ್ ಬಳಿಕ ಪ್ರವೇಶ ದ್ವಾರ ಬಂದ್ ಮಾಡಲಾಗಿದೆ. ಬಳಿಕ ಬಂದ ಮಹಿಳೆ ಹಾಗೂ ಇಬ್ಬರು ಪ್ರವೇಶ ನೀಡುವಂತೆ ರಂಪಾಟ ಮಾಡಿದ್ದಾರೆ. ಆದರೆ ಸಿಬ್ಬಂದಿಗಳು ಪ್ರವೇಶ ನಿರಾಕರಿಸಿದ್ದಾರೆ
ಈ ವೇಳೆ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣವೇ ಏರ್ ಇಂಡಿಯಾ ಸಿಬ್ಬಂದಿಗಳು ವೈದ್ಯಕೀಯ ನೆರವು ಹಾಗೂ ವ್ಹೀಲ್ ಚೇರ್ ವ್ಯವಸ್ಥೆ ಮಾಡಿದೆ. ಆದರೆ ಏರ್ ಇಂಡಿಯಾ ವೈದ್ಯಕೀಯ ನೆರವು ಹಾಗೂ ವ್ಹೀಲ್ ಚೇರ್ ನೆರವು ಪಡೆಯಲು ಮಹಿಳೆ ನಿರಾಕರಿಸಿದ್ದಾರೆ. ಬಳಿಕ ಆಘಾತದ ನಾಟವಾಡಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹೇಳಿರುವುದು ನಿಜವಲ್ಲ. ಏರ್ ಇಂಡಿಯಾ ಪ್ರಯಾಣಿಕರ ಸುರಕ್ಷತೆಗೆ ಮೊದಲ ಅದ್ಯತೆ ನೀಡುತ್ತದೆ. ಸುರಕ್ಷತೆಯಲ್ಲಿ, ಆರೈಕೆಯಲ್ಲಿ ಯಾವುದೇ ರಾಜೀ ಇಲ್ಲ ಎಂದು ಏರ್ ಇಂಡಿಯಾ ಸ್ಪಷ್ಟನೆ ನೀಡಿದೆ.