ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ 282 ಭಾರತೀಯ ಸೈನಿಕರ ಅಸ್ಥಿಪಂಜರ ಪತ್ತೆ!

By Santosh NaikFirst Published May 11, 2022, 10:32 PM IST
Highlights

ಈ 282 ಭಾರತೀಯ ಸೈನಿಕರು 1857 ರಲ್ಲಿ ಹಂದಿಮಾಂಸ ಮತ್ತು ಗೋಮಾಂಸದ ಗ್ರೀಸ್ ಅನ್ನು ಕಾರ್ಟ್ರಿಡ್ಜ್ ನಲ್ಲಿ ಬಳಕೆ ಮಾಡುವುದರ ವಿರುದ್ಧ ದಂಗೆ ಎದ್ದಿದ್ದರು.
 

ಚಂಡೀಗಢ (ಮೇ.11): 1857 ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ (First War of Independence) ಭಾಗವಹಿಸಿದ 282 ಭಾರತೀಯ ಸೈನಿಕರ (Indian soldiers) ಅಸ್ಥಿಪಂಜರಗಳು (skeletons) ಅಮೃತಸರ (Amritsar) ಬಳಿ ಉತ್ಖನನದ (Excavation) ಸಮಯದಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ. ಉತ್ಖನನದ ಸಂಶೋಧನೆಗಳನ್ನು ಪಂಜಾಬ್ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಎಸ್.ಸೆಹ್ರಾವತ್ (Dr JS Sehrawat) ಅವರು ದೃಢಪಡಿಸಿದ್ದಾರೆ.

ಈ 282 ಭಾರತೀಯ ಸೈನಿಕರು 1857 ರಲ್ಲಿ ಹಂದಿಮಾಂಸ ಮತ್ತು ಗೋಮಾಂಸದ ಗ್ರೀಸ್ ಅನ್ನು ಕಾರ್ಟ್ರಿಡ್ಜ್ ನಲ್ಲಿ ಬಳಕೆ ಮಾಡುವುದರ ವಿರುದ್ಧ ದಂಗೆ ಎದ್ದಿದ್ದರು. "ಈ ಅಸ್ಥಿಪಂಜರಗಳು 1857 ರಲ್ಲಿ ಬ್ರಿಟಿಷರ ವಿರುದ್ಧದ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕೊಲ್ಲಲ್ಪಟ್ಟ 282 ಭಾರತೀಯ ಸೈನಿಕರಿಗೆ ಸೇರಿವೆ. ಇವುಗಳನ್ನು ಪಂಜಾಬ್‌ನ ಅಮೃತಸರ ಬಳಿಯ ಅಜ್ನಾಲಾದಲ್ಲಿ ಧಾರ್ಮಿಕ ರಚನೆಯ ಕೆಳಗಿರುವ ಬಾವಿಯಿಂದ ಉತ್ಖನನ ಮಾಡಲಾಗಿದೆ" ಎಂದು ಸಹಾಯಕ ಪ್ರೊಫೆಸರ್ ಹೇಳಿದರು.

"ಈ ಸೈನಿಕರು ಹಂದಿಮಾಂಸ ಮತ್ತು ದನದ ಮಾಂಸದಿಂದ ಮಾಡಿದ ಗ್ರೀಸ್ ಅನ್ನು ಕಾರ್ಟ್ರಿಡ್ಜ್‌ಗಳಲ್ಲಿ ಬಳಕೆ ಮಾಡುವುದರ ವಿರುದ್ಧ ದಂಗೆ ಎದ್ದಿದ್ದರು  ಎಂದು ಅಧ್ಯಯನವೊಂದು ಸೂಚಿಸಿದೆ. ನಾಣ್ಯಗಳು, ಪದಕಗಳು, ಡಿಎನ್‌ಎ ಅಧ್ಯಯನ, ಧಾತುರೂಪದ ವಿಶ್ಲೇಷಣೆ, ಮಾನವಶಾಸ್ತ್ರ, ರೇಡಿಯೊ-ಕಾರ್ಬನ್ ಡೇಟಿಂಗ್, ಇವೆಲ್ಲವೂ ಕೂಡ ಇದನ್ನು ಖಚಿತಪಡಿಸಿವೆ" ಎಂದು ಸೆಹ್ರಾವತ್ ಹೇಳಿದ್ದಾರೆ.

ಶುಕ್ರಯಾನಕ್ಕೆ ಇಸ್ರೋ ತಯಾರಿ, ನಗ್ನ ಚಿತ್ರ ಕಳಿಸೋಕೆ ನಾಸಾ ರೆಡಿ: ಗೆಲ್ಲೋದು ಯಾರು?

1857 ರ ದಂಗೆಯನ್ನು ಕೆಲವು ಇತಿಹಾಸಕಾರರು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೂ ಕರೆದಿದ್ದಾರೆ. ಬ್ರಿಟಿಷ್ ಭಾರತೀಯ ಸೇನೆಯಲ್ಲಿ ನೇಮಕಗೊಂಡ ಕೆಲವು ಭಾರತೀಯ ಸಿಪಾಯಿಗಳು ಧಾರ್ಮಿಕ ನಂಬಿಕೆಗಳನ್ನು ಉಲ್ಲೇಖಿಸಿ ಹಂದಿಮಾಂಸ ಮತ್ತು ದನದ ಗ್ರೀಸ್ ಕಾಟ್ರಿಡ್ಜ್‌ಗಳ ಬಳಕೆಯ ವಿರುದ್ಧ ದಂಗೆ ಎದ್ದಿದ್ದರು.

ಸಂಪುಟ ಸರ್ಜರಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ರೆ ಯಾರಿಗೆ ಜಾಕ್‌ಪಾಟ್?

ಈ ಸ್ವಾತಂತ್ರ್ಯ ಹೋರಾಟವನ್ನು ಮಂಗಲ್ ಪಾಂಡೆ ನೇತೃತ್ವ ವಹಿಸಿದ್ದರು. ಅವರು ಕಲ್ಕತ್ತಾ ಬಳಿಯ ಬ್ಯಾರಕ್‌ಪುರದಲ್ಲಿ ದಂಗೆಯನ್ನು ಪ್ರಾರಂಭಿಸಿದರು. 1857ರ ಮಾರ್ಚ್ 21 ರಂದು, ಮಂಗಲ್ ಪಾಂಡೆ ಬ್ರಿಟಿಷ್ ಸರ್ಕಾರದ ವಿರುದ್ಧ ಬಂಡಾಯದ ಕಹಳೆಯನ್ನು ಊದಿದಾಗ, 34 ನೇ ಬಂಗಾಳ ಸ್ಥಳೀಯ ಪದಾತಿ ದಳದ ಸೈನಿಕರ ಪರೇಡ್ ಬ್ಯಾರಕ್‌ಪುರದಲ್ಲಿ ನಡೆಯುತ್ತಿತ್ತು. ಮಂಗಲ್ ಪಾಂಡೆ ಬ್ಯಾರಕ್‌ಪುರದಲ್ಲಿರುವ ತನ್ನ ಒಡನಾಡಿಗಳಿಗೆ ಪ್ರತಿಭಟಿಸುವಂತೆ ಒತ್ತಾಯ ಮಾಡಿದ್ದ. ಇತಿಹಾಸಕಾರರ ಪ್ರಕಾರ ತನ್ನ ಕಡೆಗೆ ಕುದುರೆಯ ಮೇಲೆ ಬರುತ್ತಿದ್ದ ಬ್ರಿಟಿಷ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದ ಎಂದು ಹೇಳಲಾಗುತ್ತದೆ.

click me!