Bus Accident ಎರಡು ಬಸ್ ಮುಖಾಮುಖಿ ಡಿಕ್ಕಿ, 30 ಮಂದಿಗೆ ಗಾಯ, ಭೀಕರ ದೃಶ್ಯ ಸೆರೆ!

Published : May 18, 2022, 05:20 PM IST
Bus Accident ಎರಡು ಬಸ್ ಮುಖಾಮುಖಿ ಡಿಕ್ಕಿ, 30 ಮಂದಿಗೆ ಗಾಯ, ಭೀಕರ ದೃಶ್ಯ ಸೆರೆ!

ಸಾರಾಂಶ

ಬಸ್ ಒಳಗಿದ್ದ ಸಿಸಿಟಿಯಲ್ಲಿ ಮುಖಾಮುಖಿ ಡಿಕ್ಕಿ ದೃಶ್ಯ ಸೆರೆ ಎರಡು ಖಾಸಗಿ ಬಸ್‌ಗಳ ಅಪಘಾತ, 30 ಮಂದಿಗೆ ಗಾಯ ಬಸ್ ಸಂಪೂರ್ಣ ನಜ್ಜುಗುಜ್ಜು, ಅಪಘಾತದ ವಿಡಿಯೋ ವೈರಲ್  

ಸೇಲಂ(ಮೇ.18): ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ 30 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಎರಡು ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಭೀಕರ ಅಪಘಾತ ಬಸ್ ಒಳಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.  

ಮೇ.17ರ ಸಂಜೆ 30 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್  ಎಡಪ್ಪಾಡಿಯಿಂದ ತೆರಳುತ್ತಿತ್ತು. ಚಿರುಂಚಗೋಡೆಯಿಂದ ಬರುತ್ತಿದ್ದ ಬಸ್ ಓವರ್ ಟೇಕ್ ಮಾಡುವ ಬರದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಬಸ್ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾಗಿದೆ.

ಬಾಗಲಕೋಟೆ: ಲಾರಿ -ಬೈಕ್ ಡಿಕ್ಕಿ, ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆಯ ಸಾವು

ಡಿಕ್ಕಿಯಾದ ರಭಸಕ್ಕೆ ಬಸ್ ಡ್ರೈವರ್ ಸೀಟಿನಿಂದ ಎಗರಿ ಹೋಗಿದ್ದಾರೆ. ಇತ್ತ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಳಿಸಲಾಗಿದೆ. ಬಸ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಸಿಸಿಟಿವಿ ದೃಶ್ಯ ಇದೀಗ ವೈರಲ್ ಆಗಿದೆ.

 

 

ಕಾರು ಡಿಕ್ಕಿ: 6 ಎಮ್ಮೆ, 1 ಕೋಣ ಸ್ಥಳದಲ್ಲೆ ಸಾವು
ನಗರದ ಗಾಡಿಕೊಪ್ಪದ ತುಂಗಾ ನಾಲೆ ಬಳಿ ಕಾರು ಡಿಕ್ಕಿಯಾಗಿ 6 ಎಮ್ಮೆ, 1 ಕೋಣ ಸ್ಥಳದಲ್ಲೇ ಸಾವನ್ನಪಿರುವ ದಾರುಣ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಕಾರು ಚಾಲಕ ಸ್ಥಳದಲ್ಲೆ ಕಾರು ಬಿಟ್ಟು ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಮೃತಪಟ್ಟಎಮ್ಮೆಗಳು ಗಾಡಿಕೊಪ್ಪದ ಮಂಜುನಾಥ್‌ ಎಂಬವರಿಗೆ ಸೇರಿದ್ದಾಗಿವೆ. ಶಿವಮೊಗ್ಗದಿಂದ ಆಯನೂರು ಕಡೆಗೆ ತೆರಳುತ್ತಿದ್ದ ಕಾರು ರಸ್ತೆ ಮಧ್ಯೆ ಸಾಗುತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ.

ಮೇಯಲು ಹೋಗಿದ್ದ ಎಮ್ಮೆಗಳು ರಾತ್ರಿ ಆದರೂ ಬಂದಿರಲಿಲ್ಲ. ಇದರಿಂದಾಗಿ ಎಮ್ಮೆಗಳನ್ನು ಹುಡುಕಿಕೊಂಡು ವಾಪಸ್‌ ಮನೆಗೆ ಕರೆತರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಬ್ರೇಜಾ ಕಾರು ಚಾಲಕನ ನಿಯಂತ್ರಣ ತಪ್ಪಿ ಎಮ್ಮೆಗಳಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಎಮ್ಮೆಗಳು ರಸ್ತೆಯಲ್ಲೆ ಒದ್ದಾಡಿ ಪ್ರಾಣಬಿಟ್ಟಿವೆ. ಅಪಘಾತದಲ್ಲಿ 6 ಎಮ್ಮೆ, 1 ಕೋಣ ಸಾವನ್ನಪ್ಪಿದೆ. ಕಾರ್‌ ಬಲೂನ್‌ ತೆರೆದುಕೊಂಡದ್ದರಿಂದ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ನದಿಗೆ ಕಾರು ಬಿದ್ದು ಐವರು ಸಾವು: ಮದುವೆ ಮುಗಿಸಿ ಮನೆಗೆ ಹೊರಟವರು ಮಸಣ ಸೇರಿದರು

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಮೃತ ಎಮ್ಮೆಗಳ ಮಾಲೀಕ ಮಂಜುನಾಥ್‌ ಅವರಿಗೆ ಸಾಂತ್ವನ ಹೇಳಿ, ಪರಿಹಾರದ ಭರವಸೆ ನೀಡಿದರು.

ಅಪಘಾತ: ಕಾರ್‌ ಚಾಲಕ ಸಾವು
ಜೇವರ್ಗಿ ತಾಲೂಕಿನ ಹರವಾಳ ಕ್ರಾಸ್‌ ಹತ್ತಿರ ಭಾನುವಾರ ಸಂಜೆ 4 ಗಂಟೆಗೆ ಸುಮಾರಿಗೆ ಬಸ್‌ ಮತ್ತು ಕಾರ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಕಾರು ನುಜ್ಜು ಗುಜ್ಜಾಗಿರುವುದು.

ಅಪಘಾತದಲ್ಲಿ ಕಾರಿನ ಚಾಲಕ ಮೈಲಾರಿ ಹಂಗರಗಿ (40) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೈಲಾರಿ ಮೂಲತಃ ಶಹಾಬಾದ ತಾಲೂಕಿನ ಮಾಲಗತ್ತಿ ಗ್ರಾಮದ ನಿವಾಸಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೊಸಪೇಟದಿಂದ-ಕಲಬುರಗಿಗೆ ಹೊರಟಿದ್ದ ಕಾರಿಗೆ ಕಲಬುರಗಿಯಿಂದ ಮುಧೋಳ ಕಡೆಗೆ ಹೊರಟಿದ್ದ ಬಸ್‌ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆದರೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ನೆಲೋಗಿ ಠಾಣೆಯ ಪೊಲೀಸ್‌ ಸಬ್‌ ಇನ್ಸಪೆಕ್ಟರ್‌ ಗೌತಮ ಗುತ್ತೇದಾರ, ಎ.ಎಸ್‌.ಐ. ಗುರುಬಸ್ಸು ಕೊಣ್ಣೂರ ಹಾಗೂ ಪೊಲೀಸ್‌ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಘಟನೆ ಕುರಿತು ನೆಲೋಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌