ಮಗಳನ್ನೇ ಹತ್ಯೆಗೈದ ಇಂದ್ರಾಣಿ ಮುಖರ್ಜಿ ಯಾರು? 5 ಮದುವೆಯ ರಹಸ್ಯ ಹೀಗಿದೆ!

Published : May 18, 2022, 04:51 PM ISTUpdated : May 18, 2022, 04:52 PM IST
ಮಗಳನ್ನೇ ಹತ್ಯೆಗೈದ ಇಂದ್ರಾಣಿ ಮುಖರ್ಜಿ ಯಾರು? 5 ಮದುವೆಯ ರಹಸ್ಯ ಹೀಗಿದೆ!

ಸಾರಾಂಶ

* ಶೀನಾ ಬೋರಾ ಹತ್ಯಾಕಾಂಡ, ಮಗಳನ್ನೇ ಕೊಲೆಗೈದ ತಾಯಿ * ಜೈಲಿನಲ್ಲಿದ್ದ ಇಂದ್ರಾಣಿಗೆ ಏಳು ವರ್ಷದ ಬಳಿಕ ಜಾಮೀನು * ಶೀನಾಳನ್ನು ಹತ್ಯೆಗೈದ ಇಂದ್ರಾಣಿ ಯಾರು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ನವದೆಹಲಿ(ಮೇ.18): 10 ವರ್ಷಗಳ ಹಿಂದೆ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಂದ್ರಾಣಿ ಮುಖರ್ಜಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಶೀನಾ ವೋರಾ ಕಳೆದ 7 ವರ್ಷಗಳಿಂದ ಮುಂಬೈ ಜೈಲಿನಲ್ಲಿದ್ದರು ಎಂಬುವುದು ಉಲ್ಲೇಖನೀಯ ವಿಚಾರ. ಇಂದ್ರಾಣಿ ಮುಖರ್ಜಿ ಅವರ ಮಗಳು ಶೀನಾ ಬೋರಾ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇಂದ್ರಾಣಿ ಮುಖರ್ಜಿ ಅವರನ್ನು 2015ರಲ್ಲಿ ಪೊಲೀಸರು ಬಂಧಿಸಿದ್ದರು.

ಇಂದ್ರಾಣಿ ಮುಖರ್ಜಿ ಯಾರು?

ಐಎನ್‌ಎಕ್ಸ್ ಮೀಡಿಯಾದ ಸಿಇಒ ಆಗಿದ್ದ ಇಂದ್ರಾಣಿ ಮುಖರ್ಜಿ ಉರ್ಫ್‌ ಅಕಾ ಪ್ಯಾರಿ ಬೋರಾ ಅವರು ಹಲವಾರು ಚಾನೆಲ್‌ಗಳನ್ನು ಪ್ರಾರಂಭಿಸಿದರು. ಅವರ ಪತಿ ಪೀಟರ್ ಮುಖರ್ಜಿ ಅವರು 2007 ರಲ್ಲಿ 9X ಚಾನೆಲ್ ಅನ್ನು ಪ್ರಾರಂಭಿಸಿದರು. ಈ ಕಂಪನಿಯಲ್ಲಿ ಅವರೇ ಅಧ್ಯಕ್ಷರಾಗಿ ಇಂದ್ರಾಣಿಯನ್ನು ಸಿಇಒ ಮಾಡಿದರು. ವರದಿಗಳ ಪ್ರಕಾರ, ಇಂದ್ರಾಣಿ ಮುಖರ್ಜಿ ಒಟ್ಟು 5 ಮದುವೆಯಾಗಿದ್ದಾರೆ.

Sheena Bora Murder Case: ಇಂದ್ರಾಣಿಗೆ ಬೇಲ್: 10 ವರ್ಷದ ಹಿಂದೆ ಕೊಲೆಗೈದ ಮಗಳು ಜೀವಂತವಾಗಿದ್ದಾಳೆಂದ ತಾಯಿ!

ಒಂದಲ್ಲ,, ಎರಡಲ್ಲ... ಐದು ಮದುವೆ!

ಇಂದ್ರಾಣಿಯ ಮೊದಲ ಮದುವೆ ಅವರಿಗಿಂತ ದುಪ್ಪಟ್ಟು ವಯಸ್ಸಿನ ವಕೀಲರ ಜೊತೆ ಆಗಿತ್ತು. ಆಗ ಇಂದ್ರಾಣಿಗೆ 16 ವರ್ಷ, ಅವರು ಸೇಂಟ್ ಮೇರಿ ಶಾಲೆಯಲ್ಲಿ ಓದುತ್ತಿದ್ದರು. ಕೆಲವು ವರ್ಷಗಳ ನಂತರ, ಇಂದ್ರಾಣಿ ಈ ಸಂಬಂಧವನ್ನು ಮುರಿದು ಶಿಲ್ಲಾಂಗ್‌ನ ಲೇಡಿ ಕ್ವೀನ್ಸ್ ಕಾಲೇಜಿನಲ್ಲಿ ಓದಲು ಹೋದರು. ಇಲ್ಲಿ ಅವರು ಸಿದ್ಧಾರ್ಥ ದಾಸ್ ಅವರನ್ನು ಎರಡನೇ ವಿವಾಹವಾದರು. ಆದರೆ ಈ ಮದುವೆ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ದಿನಗಳ ನಂತರ ಇಂದ್ರಾಣಿ ಸಾಹಿಲ್ ಎಂಬ ವ್ಯಕ್ತಿಯನ್ನು ಭೇಟಿಯಾದರು. ಆ ನಂತರ ಇಬ್ಬರೂ ಮದುವೆಯಾದರು. ಆದರೆ, ಸಾಹಿಲ್ ಜೊತೆಯೂ ಇಂದ್ರಾಣಿ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

2002 ರಲ್ಲಿ ಪೀಟರ್ ಮುಖರ್ಜಿಯನ್ನು ವಿವಾಹವಾದ ಇಂದ್ರಾಣಿ 

ಇದಾದ ನಂತರ ಇಂದ್ರಾಣಿ ಗುವಾಹಟಿಯಲ್ಲಿ ಕೆಲಸ ಬಿಟ್ಟು ಕೋಲ್ಕತ್ತಾಗೆ ತೆರಳಿದರು. ಇಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದರು. ಇಲ್ಲಿ ಅವರು ಉದ್ಯಮಿ ಸಂಜೀವ್ ಖನ್ನಾ ಅವರನ್ನು ಭೇಟಿಯಾದರು ಮತ್ತು ಕೆಲವು ದಿನಗಳ ನಂತರ ಇಬ್ಬರೂ ವಿವಾಹವಾದರು. ಕೆಲವು ದಿನಗಳ ನಂತರ ಇಂದ್ರಾಣಿಯ ಮನಸ್ಸು ಸಂಜೀವ್‌ರಿಂದ ದೂರ ಸರಿಯಿತು. ಹೀಗಾಗಿ ಅವರು ತಮ್ಮ ಕೆಲಸ ಮತ್ತು ಸಂಜೀವ್ ಎರಡನ್ನೂ ಬಿಟ್ಟು ಮುಂಬೈನ ಸ್ಟಾರ್ ಇಂಡಿಯಾದಲ್ಲಿ ಎಚ್‌ಆರ್ ಸಲಹೆಗಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇಲ್ಲಿ ಇಂದ್ರಾಣಿ ಅವರು ಸ್ಟಾರ್ ಇಂಡಿಯಾದ ಸಿಇಒ ಪೀಟರ್ ಮುಖರ್ಜಿ ಅವರನ್ನು ಭೇಟಿಯಾದರು. ನಂತರ ಇಬ್ಬರೂ 2002 ರಲ್ಲಿ ವಿವಾಹವಾದರು.

Sheena Bora Murder Case: ಮಗಳು ಬದುಕಿದ್ದಾಳೆ ಎಂದ ಇಂದ್ರಾಣಿ ಮುಖರ್ಜಿ

ಹಾಗಾದರೆ ಇಂದ್ರಾಣಿ ತನ್ನ ಮಗಳನ್ನು ಏಕೆ ಕೊಂದರು?

ವರದಿಗಳ ಪ್ರಕಾರ ಇಂದ್ರಾಣಿ ಪುತ್ರಿ ಶೀನಾ ಬೋರಾ ಮತ್ತು ಪೀಟರ್ ಮುಖರ್ಜಿ ಪುತ್ರ ರಾಹುಲ್ ನಡುವೆ ಸಂಬಂಧವಿತ್ತು. ಹುಡುಗ ಶೀನಾ ಬೋರಾ ತನ್ನ ಮಲಸಹೋದರನನ್ನು ಪ್ರೀತಿಸುತ್ತಿದ್ದರಿಂದ ಇಂದ್ರಾಣಿ ತನ್ನ ಮಗಳನ್ನು ಕೊಂದಿದ್ದಾಳೆ ಎಂದು ಹೇಳಲಾಗಿದೆ.

ಮೇ 2012ರಲ್ಲಿ ಕಾಡಿನಲ್ಲಿ ಶೀನಾ ಶವ ಪತ್ತೆ

2012ರ ಮೇ ತಿಂಗಳಲ್ಲಿ ಮಹಾರಾಷ್ಟ್ರದ ರಾಯಗಡ ಅರಣ್ಯದಲ್ಲಿ ಬಾಲಕಿಯ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಈ ಶವವು ತುಂಬಾ ಸುಟ್ಟುಹೋಗಿದ್ದು ಅದನ್ನು ಗುರುತಿಸಲು ಸಹ ಕಷ್ಟಕರವಾಗಿತ್ತು. ನಂತರ ಪೊಲೀಸರು ಮೃತದೇಹದ ಮಾದರಿಗಳನ್ನು ವಿಧಿವಿಜ್ಞಾನ ತಜ್ಞರಿಗೆ ನೀಡಿ ಶವದ ಅಂತ್ಯಕ್ರಿಯೆ ನಡೆಸಿದ್ದರು. ನಂತರ 2015 ರಲ್ಲಿ, ಚಾಲಕನ ಬಾಯ್ಬಿಟ್ಟ ಬಳಿಕ ಇಂದ್ರಾಣಿ ಮುಖರ್ಜಿ ಅವರನ್ನು ಬಂಧಿಸಲಾಯಿತು.

ಶೀನಾ ಬೋರಾ ಯಾರು?

ಶೀನಾ ಬೋರಾ ಅವರು ಐಎನ್‌ಎಕ್ಸ್ ಮೀಡಿಯಾದ ಮಾಜಿ ಸಿಇಒ ಇಂದ್ರಾಣಿ ಮುಖರ್ಜಿಯವರ ಮಗಳು ಮತ್ತು ಅವರ ಲಿಇವ್-ಇನ್-ಪಾರ್ಟ್‌ನರ್ ಕೂಡಾ ಆಗಿದ್ದರು. ಶೀನಾ ವೋರಾ 1988 ರಲ್ಲಿ ಗುವಾಹಟಿಯಲ್ಲಿ ಜನಿಸಿದರು. ಶೀನಾ ತನ್ನ ಆರಂಭಿಕ ಶಿಕ್ಷಣವನ್ನು ಗುವಾಹಟಿಯ ಶಾಲೆಯಲ್ಲಿ ಮಾಡಿದಳು. ಬಳಿಕ ತಾಯಿ ಇಂದ್ರಾಣಿ ಜತೆ ಮುಂಬೈಗೆ ಬಂದಿದ್ದಳು. ಶೀನಾ ವೋರಾ ತನ್ನ ಸಹೋದರಿ ಎಂದು ಇಂದ್ರಾಣಿ ತನ್ನ ಪತಿ ಪೀಟರ್ ಮುಖರ್ಜಿಗೆ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಯ್ನಾಡಿನ ರಕ್ಷಣೆಗೆ ಅಂಬೇಡ್ಕರರ ಪ್ರತಿಜ್ಞೆ- ದೇಶದ ರಕ್ಷಣೆ, ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದವರು
ಭಾರತ- ರಷ್ಯಾ ಸಹಕಾರದಲ್ಲಿ ಹೊಸ ಮೈಲುಗಲ್ಲು