ಅಮೆರಿಕದ ಕೆಲಸಕ್ಕೆ ಗುಡ್‌ಬೈ ಹೇಳಿ, ಜೈನ ಸಂನ್ಯಾಸಿಯಾದ 28ರ ಹುಡುಗ!

By Santosh NaikFirst Published Dec 18, 2022, 7:08 PM IST
Highlights

ಬಿಇ ಮುಗಿಸಿದ ಬಳಿಕ ಅಮೆರಿಕಕ್ಕೆ ತೆರಳಿದ್ದ ಪ್ರಾಂಶುಕ್‌ ಕಾಂತೆಡ್‌, ಅಲ್ಲಿ ಒಂದೂವರೆ ವರ್ಷ ಅಭ್ಯಾಸ ಮಾಡಿದ್ದರು. ಮೂರು ವರ್ಷಗಳ ಕಾಲ ಡೇಟಾ ಸೈಂಟಿಸ್ಟ್‌ ಆಗಿ ಅವರು ಕೆಲಸ ಮಾಡಿದ್ದರು. ತಿಂಗಳಿಗೆ ಅಂದಾಜು ವರ್ಷಕ್ಕೆ 1.25 ಕೋಟಿ ರೂಪಾಯಿ ಸಂಬಲ ಪಡೆಯುತ್ತಿದ್ದ. ಈ ವೇಳೆ  ಜೈನಧರ್ಮದ ಕುರಿತಾದ ಪುಸ್ತಕ, ಭಾಷಣಗಳು, ಉಪನ್ಯಾಸ ಮಾಲಿಕೆಯನ್ನು ಅಂತರ್ಜಾಲದಲ್ಲಿ ಕೇಳುತ್ತಿದ್ದರು. ಕೆಲಸದಲ್ಲಿ ನಿರಾಸಕ್ತಿ ತಾಳಿದ ಬಳಿಕ, ಅಮೆರಿಕದ ಕೆಲಸಕ್ಕೆ ರಾಜೀನಾಮೆ ನೀಡಿ ಜೈನ ಮುನಿಯಾಗುವ ನಿರ್ಧಾರ ಮಾಡಿದ್ದಾರೆ.

ಭೋಪಾಲ್‌ (ಡಿ.18): ತಿಂಗಳಿಗೆ ಅಂದಾಜು 10.75 ಲಕ್ಷ ರೂಪಾಯಿಯ ಸಂಬಳ. ವರ್ಷಕ್ಕೆ 1.25 ಕೋಟಿ ರೂಪಾಯಿಯ ವೇತನ. ಅಮೆರಿಕದ ಜೀವನ. ಇನ್ನೂ 28ರ ವಯಸ್ಸು. ಎಲ್ಲವೂ ಇದ್ದರೂ ಬದುಕಿನಲ್ಲಿ ಆಸಕ್ತಿಯೇ ಇಲ್ಲ ಎಂದು ತೀರ್ಮಾಸಿದ ಮಧ್ಯಪ್ರದೇಶದ ದೇವಾಸ್‌ನ ಯುವಕ ಪ್ರಾಂಶುಕ್‌ ಕಾಂತೇಡ್‌, ಅಮೆರಿಕದ ಕೆಲಸಕ್ಕೆ ರಾಜೀನಾಮೆ ನೀಡಿದ ಜೈನ ಮುನಿಯಾಗಿ ದೀಕ್ಷೆ ಪಡೆದುಕೊಳ್ಳಲಿದ್ದಾರೆ. ಡಿಸೆಂಬರ್‌ 26 ರಂದು ಪ್ರಾಂಶುಕ್‌ ಕಾಂತೇಡ್‌, ಸಂನ್ಯಾಸಿಯಾಗಿರುವ ಆಚಾರ್ಯ ಉಮೇಶ ಮುನಿ ಅವರ ಶಿಷ್ಯರಾಗಿರುವ ಜಿನೇಂದ್ರ ಮುನಿ ಅವರಿಂದ ಸಂನ್ಯಾಸ ದೀಕ್ಷೆ ಪಡೆಯಲಿದ್ದಾರೆ. 2021ರ ಜನವರಿಯಲ್ಲಿ ಅಮೆರಿಕದಲ್ಲಿ 1.25 ಕೋಟಿ ರೂಪಾಯಿ ಸಂಬಳ ನೀಡುವ ಕೆಲಸವನ್ನು ತೊರೆದಿದ್ದ ಪ್ರಾಂಶುಕ್‌ಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದವು. ಆದರೆ, ದೀಕ್ಷೆ ನಮ್ಮ ಮುಂದಿನ ಜೀವನ ಎಂದು ತೀರ್ಮಾನ ಮಾಡಿದ್ದ ಪ್ರಾಂಶುಕ್‌, ಇತ್ತೀಚೆಗೆ ಕುಟುಂಬದ ಜೊತೆ ದೀಕ್ಷೆ ಪಡೆದುಕೊಳ್ಳುವ ಧಾರ್ಮಿಕ ವಿಧಿ ವಿಧಾನದಲ್ಲಿ ಭಾಗಿಯಾಗಿದ್ದಾರೆ.

28 ವರ್ಷದ ಪ್ರಾಂಶುಕ್ ತನ್ನ ಬಾಲ್ಯದಿಂದಲೂ ಸಂತನಾಗಬೇಕು ಎಂದು ಬಯಸಿದ್ದ. ಈಗ ಜೈನ ಸನ್ಯಾಸಿಯಾಗಲು ದೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. 28 ವರ್ಷದ ಪ್ರಾಂಶುಕ್ 2016 ರಿಂದ ಜನವರಿ 2021 ರವರೆಗೆ ಸುಮಾರು 4.5 ವರ್ಷಗಳ ಕಾಲ ಅಮೆರಿಕದಲ್ಲಿ ಇದ್ದರು. ಪ್ರಾಂಶುಕ್ ಅವರು ತಮ್ಮ ಅಧ್ಯಯನದ ನಂತರ ಸುಮಾರು ಮೂರು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕದಲ್ಲಿ ಡೇಟಾ ಸೈಂಟಿಸ್ಟ್‌ ಆಗಿ ಪ್ರಾಂಶುಕ್‌ ಅವರು ಕೆಲಸ ಮಾಡಿದ್ದರು.

15 ನೇ ವಯಸ್ಸಿನಲ್ಲಿ, ಪ್ರಾಂಶುಕ್ ಶ್ವೇತಾಂಬರ ಜೈನ ಸನ್ಯಾಸಿಯಾಗಲು ಬಯಸಿದ್ದರು. ಆ ಮೂಲಕ ಅವರು ತಮ್ಮ ತಂದೆ, ತಾಯಿ ಹಾಗೂ ಕಿರಿಯ ಸಹಹೋದರ ಸಖ್ಯವನ್ನು ತೊರೆಯಲಿದ್ದಾರೆ. ಪ್ರಾಂಶುಕ್ ಅವರ ಚಿಕ್ಕಪ್ಪನ ಮಗ ಎಂಬಿಎ ಪದವೀಧರ ಪ್ರಿಯಾಂಶು  ಮತ್ತು ರತ್ಲಂ ಕೂಡ ದೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ.  ದೇಶದ ವಿವಿಧ ಮೂಲೆಗಳಿಂದ ಸುಮಾರು 53 ಜೈನ ಸಂತರು ಆಗಮಿಸಲಿದ್ದು, ಅವರ ಸಮ್ಮುಖದಲ್ಲಿ ಡಿಸೆಂಬರ್ 26 ರಂದು ದೀಕ್ಷಾ ಕಾರ್ಯ ಪೂರ್ಣಗೊಳ್ಳಲಿದೆ.ಇದಕ್ಕಾಗಿ ಸುಮಾರು ಒಂದೂವರೆ ವರ್ಷಗಳ ಕಾಲ ಜೈನ ಸಂತರ ನಡುವೆ ವಾಸಿಸುವ ಮೂಲಕ ತಮ್ಮ ಆಸೆಗಳನ್ನು ಪರೀಕ್ಷೆ ಮಾಡಿದ್ದಾರೆ. ಇದರಲ್ಲಿ ಯಶಸ್ಸು ಕಂಡ ಬಳಿಕ ದೀಕ್ಷೆ ತೆಗೆದುಕೊಂಡು ಸಂತರ ಜೀವನ ನಡೆಸಲಿದ್ದಾರೆ. ತಮ್ಮ ಮಗ ಜೈನ ಸಂತನಾಗಿ ದೀಕ್ಷೆ ತೆಗೆದುಕೊಳ್ಳುತ್ತಿರುವುದಕ್ಕೆ ಮನೆಯವರೂ ಖುಷಿಯಾಗಿದ್ದಾರೆ.

ಧರ್ಮಸ್ಥಳದಲ್ಲಿ ಇಬ್ಬರು ಮಹಿಳೆಯರು ಸೇರಿ ಐವರಿಗೆ ಜೈನಮುನಿ ದೀಕ್ಷೆ!

ಮಧ್ಯಪ್ರದೇಶದಲ್ಲಿ ಬಿಇ ವ್ಯಾಸಂಗ ಮುಗಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ದೃಷ್ಟಿಯಿಂದ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಒಂದೂವರೆ ವರ್ಷಗಳ ಕಾಲ ಅಭ್ಯಾಸ ಮಾಡಿದ್ದ ಪ್ರಾಂಶುಕ್‌, ಡೇಟಾ ಸೈಂಟಿಸ್ಟ್‌ ಆಗಿ ಮೂರು ವರ್ಷ ದುಡಿದಿದ್ದರು. ವರ್ಷಕ್ಕೆ 1.25 ಕೋಟಿ ರೂಪಾಯಿಯ ಸಂಬಳ ಅವರಿಗ ಈ ವೇಳೆ ಬರುತ್ತಿತ್ತು. ಈ ವೇಳೆ ಜೈನ ಧರ್ಮ ಪುಸ್ತಕಗಳು, ಉಪನ್ಯಾಸಗಳನ್ನು ಅಂತರ್ಜಾಲದಲ್ಲಿ ಕೇಳುತ್ತಿದ್ದ ಪ್ರಾಂಶುಕ್‌, ಕೆಲಸ ಬಿಟ್ಟು ಜೈನ ಸಂನ್ಯಾಸಿಯಾಗಿ ದೀಕ್ಷೆ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಮಾಡಿದ್ದರು. 

ಸಂನ್ಯಾಸಿಯ ಬಟ್ಟೆ ಬಿಚ್ಚಿಸಿ ಅವಮಾನ ಮಾಡಿದ್ದ ಪೊಲೀಸ್ ಅಧಿಕಾರಿ ಸಸ್ಪೆಂಡ್!

ಆದರೆ, ಮೊದಲು ಇದಕ್ಕೆ ಕುಟುಂಬದವರು ಒಪ್ಪಿರಲಿಲ್ಲ. ಅವರನ್ನು ಒಪ್ಪಿಸಿದ ಬಳಿಕ 2021ರ ಜನವರಿಯಲ್ಲಿ ಅಮೆರಿಕದ ಕೆಲಸಕ್ಕೆ ರಾಜೀನಾಮೆ ಕೊಟ್ಟು ತವರಿಗೆ ಬಂದಿದ್ದಾರೆ. ಪ್ರಾಂಶುಕ್‌ ಹೇಳುವ ಪ್ರಕಾರ, ಜನರು ಸಂತೋಷವನ್ನು ನೋಡಿದರೆ ನನಗೆ ಬೇಸರವಾಗುತ್ತದೆ. ಯಾಕೆಂದರೆ, ಸಂತೋಷ ಎನ್ನುವುದು ತಾತ್ಕಾಲಿಕ. ಸಂತೋಷವೇ ನಮ್ಮ ಆಸೆಗಳನ್ನು ಹೆಚ್ಚು ಮಾಡುತ್ತದೆ. ಶಾಶ್ವತ ಸುಖಕ್ಕಾಗಿ ನಾನು ಜೈನ ಸಂತನಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

click me!