
ಮುಜಾಫರ್‌ನಗರ(ಮಾ.12): ಆಕರ್ಷಣ ಬಣ್ಣ, 26 ವರ್ಷ ವಯಸ್ಸು. ಆದರೆ ಎತ್ತರ ಕೇವಲ 2 ಅಡಿ. ಹೆಸರು ಅಝೀಮ್ ಮನ್ಸೂರಿ. ಉತ್ತರ ಪ್ರದೇಶದ ಮುಜಾಫರ್ ನಗರದ ನಿವಾಸಿಯಾಗಿರುವ ಅಝೀಮ್, ಕಳೆದ 5 ವರ್ಷದಿಂದ ಹುಡುಗಿ ಹುಡುಕಿದರೂ ಯಾರು ಮನ್ಸೂರಿಯನ್ನು ಒಪ್ಪುತ್ತಿಲ್ಲ. ದಿಕ್ಕು ತೋಚದೆ ಇದೀಗ ಮನ್ಸೂರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮದುವೆಗೂ ಮೊದಲು ಕಾಡುವ ಆತಂಕ ನಿವಾರಿಸಿಕೊಳ್ಳಲು ಇಲ್ಲಿವೆ ಸಲಹೆ.
ಫ್ಯಾನ್ಸಿ ಸ್ಟೋರ್ ನಡೆಸುತ್ತಿರುವ ಮನ್ಸೂರಿ 21 ವರ್ಷ ವಯಸ್ಸು ಆಗುತ್ತಿದ್ದಂತೆ ಮನ್ಸೂರಿ ಕುಟುಂಬ ಹುಡುಗಿ ಹುಡುಕಲು ಆರಂಭಿಸಿದೆ. ಆದರೆ ಕೇವಲ 2 ಅಡಿ ಎತ್ತರ ಕಾರಣ ಯಾವ ಹುಡುಗಿಯೂ ಒಪ್ಪುತ್ತಿಲ್ಲ. ಹೀಗಾಗಿ ಇದೀ ಗ ಪೊಲೀಸ್ ಠಾಣೆಗೆ ತೆರಳಿ ಸಾರ್ವಜಿಕ ಸೇವೆಯ ಅಡಿಯಲ್ಲಿ ತನಗೆ ಹುಡುಗಿ ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾನೆ.
ಸರಳ ವಿವಾಹವಾಗುವ ವಧೂ ವರರಿಗೆ ಸರ್ಕಾರದಿಂದ ಸಹಾಯಧನ
ಅಝೀಮ್ ಮನ್ಸೂರಿ ಕತೆ ಇಷ್ಟೆ ಅಲ್ಲ, 2 ಅಡಿ ಎತ್ತರ ಕಾರಣ ಶಾಲೆಯಲ್ಲಿ ಎಲ್ಲರೂ ತಮಾಷೆ ಮಾಡುತ್ತಿದ್ದರು. ಹೀಗಾಗಿ 5ನೇ ತರಗತಿಯಿಂದ ಶಾಲೆ ಬಿಟ್ಟ ಮನ್ಸೂರಿ, ಸಹೋದರನ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಕುಟುಂಬಸ್ಥರು ಹಲವು ಪ್ರಪೋಸಲ್ ತಂದಿದ್ದಾರೆ. ಆದರೆ ಎತ್ತರ ಕಾರಣ ಎಲ್ಲವೂ ಮುರಿದು ಬಿದ್ದಿದೆ. ಹೀಗಾಗಿ ಮನೆಯವರು ಏನೂ ಮಾಡದ ಪರಿಸ್ಥಿತಿಯಲ್ಲಿದ್ದಾರೆ.
2019ರಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಭೇಟಿಯಾದ ಮನ್ಸೂರಿ, ತನಗೆ ಹುಡುಕಿ ಹುಡುಕಿ ಕೊಡಲು ಕೈಮುಗಿದು ಮನವಿ ಮಾಡಿದ್ದಾನೆ. ಬಳಿಕ ಪೊಲೀಸ್ ಒಬ್ಬರು ಮನ್ಸೂರಿ ಮದುವೆ ಕುರಿತು ವಿಡಿಯೋ ಒಂದು ಮಾಡಿದ್ದರು. ಇದು ವೈರಲ್ ಆಗಿತ್ತು.
ಎಲ್ಲಾ ಪ್ರಯತ್ನಗಳು ವ್ಯರ್ಥವಾದಾಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದಿದ್ದಾನೆ. ಆದರೆ ಯಾರಿಂದಲೂ ಉತ್ತರ ಸಿಕ್ಕಿಲ್ಲ. ಇದೀಗ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿ ಹುಡುಕಿ ಹುಡುಕಿ ಕೊಡಲು ಮನವಿ ಮಾಡಿದ್ದಾನೆ. ಈ ಕುರಿತು ಪೊಲೀಸ್ ಠಾಣಾ ಅಧಿಕಾರಿಗಳು ಈ ವಿಚಾರದಲ್ಲಿ ನಾವು ಏನು ಮಾಡಬೇಕು ಅನ್ನೋದು ಅರ್ಥವಾಗುತ್ತಿಲ್ಲ. ಆದರೆ ಏನು ಮಾಡಲು ಸಾಧ್ಯ ಅನ್ನೋ ಕುರಿತು ಚರ್ಚಿಸಲಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ