24 ವರ್ಷದ ಹಿಂದಿನ ಮಾನಹಾನಿ ಕೇಸ್‌ನಲ್ಲಿ Activist ಮೇಧಾ ಪಾಟ್ಕರ್‌ಗೆ 5 ತಿಂಗಳು ಜೈಲು ಶಿಕ್ಷೆ!

By Santosh NaikFirst Published Jul 1, 2024, 9:36 PM IST
Highlights

ಈಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿಕೆ ಸಕ್ಸೇನಾ ಅವರ ವಿರುದ್ಧ  2000 ರಿಂದಲೂ ಮೇಧಾ ಪಾಟ್ಕರ್‌ ಕಾನೂನು ಹೋರಾಟದಲ್ಲಿ ಮುಳುಗಿದ್ದರು.

ನವದೆಹಲಿ (ಜು.1): ಇದೀಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿಕೆ ಸಕ್ಸೇನಾ ಅವರು 24 ವರ್ಷದ ಹಿಂದೆ ಸಲ್ಲಿಕೆ ಮಾಡಿದ್ದ ಮಾನಹಾನಿ ಕೇಸ್‌ನಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ದೆಹಲಿ ನ್ಯಾಯಾಲಯವು ಸೋಮವಾರ ಐದು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಸಕ್ಸೇನಾಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪಾಟ್ಕರ್‌ಗೆ ನ್ಯಾಯಾಲಯ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಮೇಧಾ ಪಾಟ್ಕರ್ ದೋಷಿ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಅವರು ಈ ವರ್ಷದ ಮೇ ತಿಂಗಳಲ್ಲಿ ತೀರ್ಪು ನೀಡಿದ್ದರು. ತನ್ನ ಮತ್ತು ನರ್ಮದಾ ಬಚಾವೋ ಆಂದೋಲನ (NBA) ವಿರುದ್ಧ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಸಕ್ಸೇನಾ ವಿರುದ್ಧ ಕೇಸ್‌ ಹೂಡಿದ ನಂತರ 2000 ರಿಂದ ಅವಳು ಸಕ್ಸೇನಾ ಅವರೊಂದಿಗೆ ಕಾನೂನು ಹೋರಾಟದಲ್ಲಿ ಲಾಕ್ ಆಗಿದ್ದರು.

ಸಕ್ಸೇನಾ ಆಗ ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು. ಟಿವಿ ಚಾನೆಲ್‌ನಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಮಾನಹಾನಿ ಮಾಡಿದ್ದ ಕಾರಣಕ್ಕೆ ಸಕ್ಸೇನಾ ಕೂಡ ಮೇಧಾ ಪಾಟ್ಕರ್‌ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದರು. ಪ್ರಕರಣದಲ್ಲಿ ಪಾಟ್ಕರ್ ಅವರನ್ನು ದೋಷಿ ಎಂದು ಘೋಷಿಸುವ ಸಂದರ್ಭದಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಕ್ಸೇನಾ ವಿರುದ್ಧ ಅವರ ಹೇಳಿಕೆಗಳು "ಮಾನಹಾನಿಕರ ಮಾತ್ರವಲ್ಲದೆ ನಕಾರಾತ್ಮಕ ಗ್ರಹಿಕೆಗಳನ್ನು ಪ್ರಚೋದಿಸಲು ರಚಿಸಲಾಗಿದೆ" ಎಂದು ಹೇಳಿದ್ದಾರೆ.

ಮಾನನಷ್ಟ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ

ಸೋಮವಾರ ಆದೇಶವನ್ನು ಪ್ರಕಟಿಸಿದ ನ್ಯಾಯಾಲಯ, 69 ವರ್ಷದ ಪಾಟ್ಕರ್ ಅವರ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ಕಠಿಣ ಜೈಲು ಶಿಕ್ಷೆಯನ್ನು ನೀಡಲಾಗಿಲ್ಲ ಎಂದು ಹೇಳಿದೆ. ಪಾಟ್ಕರ್ ಅವರು ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ನಡೆಯುವವರೆಗೆ 30 ದಿನಗಳ ಕಾಲ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.

 

ಇಂಡಿ ಒಕ್ಕೂಟದ ಮುಂಬೈ ಸಭೆಗೆ ಮೇಧಾ ಪಾಟ್ಕರ್‌, ತೀಸ್ತಾ ಸೆತಲ್ವಾಡ್‌ ಉಪಸ್ಥಿತಿ?

click me!