
ರಾಜಸ್ತಾನ: ಪುಷ್ಕರ್ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ 21 ಕೋಟಿ ಮೌಲ್ಯದ ಕೋಣವೊಂದು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಬಗ್ಗೆ ಈಗ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೋಣವೊಂದು ನೆಲದ ಮೇಲೆ ಸತ್ತು ಬಿದ್ದಿರುವ ವೀಡಿಯೋ ವೈರಲ್ ಆಗಿದ್ದು, ಪ್ರಾಣಿಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲ್ಷಕ್ಷ್ಯದ ಆರೋಪ ಕೇಳಿ ಬಂದಿದೆ. ಶುಕ್ರವಾರ ಈ ಕೋಣದ ಆರೋಗ್ಯ ಹದಗೆಟ್ಟಿತ್ತು ನಂತರ ಅದು ಸಾವನ್ನಪ್ಪಿದೆ. ಈ ಕೋಣವು ಈ ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿದ್ದು ಇಲ್ಲಿಗೆ ಬರುತ್ತಿದ್ದ ಸಾವಿರಾರು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು.
ಪಶುವೈದ್ಯರು ಚಿಕಿತ್ಸೆ ನೀಡಿದರು ಫಲ ಕೊಡಲಿಲ್ಲ:
ವರದಿಯ ಪ್ರಕಾರ, ಎಮ್ಮೆಯ ಬೆಲೆ ಹೆಚ್ಚಿರುವುದರಿಂದ ವಿಶೇಷ ವ್ಯವಸ್ಥೆಗಳೊಂದಿಗೆ ಇದನ್ನು ಪುಷ್ಕರ್‌ಗೆ ಕರೆದೊಯ್ಯಲಾಗಿತ್ತು ಈ ಕೋಣದ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪಶುವೈದ್ಯರ ತಂಡ ಸ್ಥಳಕ್ಕೆ ಧಾವಿಸಿತ್ತೆಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿರುವಂತೆ ಈ ಕೋಣ ಕುಸಿದು ಬಿದ್ದಾಗ ಯಾವುದೇ ಪಶುವೈದ್ಯರು ಕೃಷಿ ಮೇಳದಲ್ಲಿ ಇರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ತಕ್ಷಣ ಚಿಕಿತ್ಸೆ ನೀಡಲು ವೈದ್ಯರು ಎಷ್ಟೇ ಪ್ರಯತ್ನಿಸಿದರೂ, ಅದರ ದೇಹದ ತೂಕ ಮತ್ತು ಆರೋಗ್ಯ ವೇಗವಾಗಿ ಹದಗೆಡುತ್ತಿದ್ದ ಕಾರಣ ಅದನ್ನು ಉಳಿಸಲು ವಿಫಲವಾಗಿದೆ ಎಂದು ವರದಿ ತಿಳಿಸಿದೆ. ಈ ಪುಷ್ಕರ ಮೇಳದ ವೀಡಿಯೊವೊಂದು ವೈರಲ್ ಆಗಿದ್ದು, ಸ್ಥಳದಲ್ಲಿ ಹಲವಾರು ಸಂದರ್ಶಕರು ಮತ್ತು ಆರೈಕೆದಾರರು ಸತ್ತ ಕೋಣವನ್ನು ಸುತ್ತುವರೆದಿರುವುದನ್ನು ಕಾಣಬಹುದು.
ವಿಮೆಗಾಗಿ ಕೊಂದರೆ? ನೆಟ್ಟಿಗರರಿಂದ ಹಲವು ಆರೋಪ
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಲವು ಆರೋಪಗಳನ್ನು ಮಾಡಿದ್ದಾರೆ. ಆರೈಕೆದಾರರೇ ಗುಪ್ತ ಉದ್ದೇಶಕ್ಕೆ ಎಮ್ಮೆಗಳಿಗೆ ವಿಷ ಹಾಕಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಹೆಚ್ಚಿನ ರೋಗನಿರೋಧಕಗಳು, ಆಂಟಿ ಬಯೋಟಿಕ್ಸ್‌ಗಳು, ಬೆಳವಣಿಗೆಯ ಹಾರ್ಮೋನ್‌ಗಳನ್ನು ನೀಡಿದ್ದರಿಂದ ಹೀಗಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ ಹಾಗೆಯೇ ವ್ಯವಹಾರದ ಹೆಸರಿನಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂದು ಒಬ್ಬರು ಆರೋಪಿಸಿದ್ದಾರೆ.
ಇದು ಹಠಾತ್ ಸಾವು ಅಲ್ಲ, ಅವರು ವಿಮೆಗಾಗಿ ಅದನ್ನು ಸಾಯಿಸಿದರು ಎಂದು ಮತ್ತೊಬ್ಬರು ಆರೋಪಿಸಿದ್ದಾರೆ. 21 ಕೋಟಿ ಮೌಲ್ಯದ್ದೇ ಆದರೂ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಪುಷ್ಕರ್ ಮೇಳ ಎಂದೂ ಕರೆಯಲ್ಪಡುವ ಕೃಷಿ ಮೇಳವು ರಾಜಸ್ಥಾನದ ಪುಷ್ಕರ್‌ನಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದು ವಿಶ್ವದ ಅತಿದೊಡ್ಡ ಒಂಟೆ ಮತ್ತು ಜಾನುವಾರು ಮೇಳಗಳಲ್ಲಿ ಒಂದಾಗಿದೆ. ವಾರಪೂರ್ತಿ ನಡೆಯುವ ಈ ಆಚರಣೆಯನ್ನು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಆಯೋಜಿಸಲಾಗುತ್ತದೆ ಮತ್ತು ಭಾರತ ಮತ್ತು ಇತರ ದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಈ ಮೇಳವು ಜಾನುವಾರು ವ್ಯಾಪಾರದ ಪ್ರಮುಖ ಕೇಂದ್ರವಾಗಿದ್ದು, ಒಂಟೆಗಳು, ಕುದುರೆಗಳು ಮತ್ತು ದನಗಳು ಈ ಮೇಳದಲ್ಲಿರುತ್ತದೆ. ಜೊತೆಗೆ ಒಂಟೆ ಓಟಗಳು, ಜಾನಪದ ಪ್ರದರ್ಶನಗಳು ಮತ್ತು ಕರಕುಶಲ ವಸ್ತುಗಳು, ಜವಳಿ ಮತ್ತು ಸ್ಥಳೀಯ ಭಕ್ಷ್ಯಗಳನ್ನು ಮಾರಾಟ ಮಾಡುವ ವಿವಿಧ ಮಳಿಗೆಗಳ ಮೂಲಕ ರಾಜಸ್ಥಾನದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಈ ಪುಷ್ಕರ್ ಮೇಳ ಪ್ರದರ್ಶಿಸುತ್ತದೆ.
ಇದನ್ನೂ ಓದಿ: ಟ್ಯೂಷನ್‌ಗೆ ಬರ್ತಿದ್ದ ಪುಟ್ಟ ಮಕ್ಕಳಿಗೆ ಲೈಂ*ಗಿಕ ಕಿರುಕುಳ: ಟ್ಯೂಷನ್ ಶಿಕ್ಷಕನಿಗೆ ಜೈಲು
ಇದನ್ನೂ ಓದಿ: ಜೀವ ಉಳಿಸಬೇಕಾದ ಆಂಬುಲೆನ್ಸ್ ಜೀವ ತೆಗಿತು: ಸಿಗ್ನಲ್ ಜಂಪ್ ಮಾಡಿ ಹಲವು ವಾಹನಗಳಿಗೆ ಡಿಕ್ಕಿ ದಂಪತಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ