Reel ಮಾಡುತ್ತಾ Real ಆಗಿ ಸತ್ತ; ನೋಡ ನೋಡುತ್ತಿದ್ದಂತೆ ರುಂಡ-ಮುಂಡ ಬೇರೆ ಬೇರೆ ಆಯ್ತು!

By Mahmad Rafik  |  First Published Oct 20, 2024, 12:17 PM IST

ರೀಲ್ ಮಾಡುವಾಗ ಯುವಕನೊಬ್ಬ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ಕೊನೆಯ ಕ್ಷಣಗಳು ಹೃದಯವಿದ್ರಾವಕವಾಗಿವೆ.


ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ರೀಲ್ ಮಾಡುತ್ತಾ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. 20 ವರ್ಷದ ಯುವಕ ಸಾವನ್ನಪ್ಪಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆಗ್ರಾದ ಸರಾಫ್ ಬಜಾರ್‌ನಲ್ಲಿರುವ ಜೊಹರಿ ಪ್ಲಾಜಾದಲ್ಲಿ ಘಟನೆ ನಡೆದಿದ್ದು, ಯುವಕನ ಕೊನೆ ಕ್ಷಣಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೀಲ್ ಮಾಡುತ್ತಿರುವ ಸಂದರ್ಭದಲ್ಲಿ ಆಯತಪ್ಪಿದ ಯುವಕ ಕಟ್ಟಡದಿಂದ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾನೆ. 

ವರದಿಗಳ ಪ್ರಕಾರ, ಸರಾಫ್ ಬಜಾರ್‌ನಲ್ಲಿ ಬೆಳ್ಳಿ ಆಭರಣಗಳ ಅಂಗಡಿಯಲ್ಲಿ ಕೆಲಸ ಮಾಡುವ ನಾಲ್ಕೈದು ಯುವಕರು ಸೇರಿ ರೀಲ್ಸ್ ಮಾಡುತ್ತಿದ್ದರು. ಜೊಹರಿ ಕಾಂಪ್ಲೆಕ್ಸ್‌ನಲ್ಲಿ ಎರಡು ಕಟ್ಟಡಗಳ ಮಧ್ಯೆ ಕಬ್ಬಿಣದ ರಾಡ್‌ ಹಾಕಿ ಜೋಡಣೆ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಯುವಕರು ರೀಲ್ಸ್ ಮಾಡುತ್ತಿದ್ದರು. 

Tap to resize

Latest Videos

ವೈರಲ್ ಆಗಿರುವ 36 ಸೆಕೆಂಡ್‌ ವಿಡಿಯೋದಲ್ಲಿನ ಇಬ್ಬರ ಯುವಕರು ಮುಂದೆ ಕುಳಿತಿರುತ್ತಾರೆ. ಮತ್ತಿಬ್ಬರು ಅಕ್ಕಪಕ್ಕ ತಿರುಗಾಡುತ್ತಿರುತ್ತಾರೆ. 20 ವರ್ಷದ ಯುವಕ ಸ್ಲೋ ಮೋಷನ್‌ ಆಗಿ ಬರುತ್ತಿರುತ್ತಾನೆ. ಈ ವೇಳೆ ಕಬ್ಬಿಣದ ರಾಡ್‌ ಮೇಲೆ ಬಂದ ಯುವಕ, ಸ್ವಲ್ಪ ಹಿಂದಕ್ಕೆ ಸರಿದು ಕಬ್ಬಿಣ ಜಾಲರಿ ಮೇಲೆತ್ತುತ್ತಾನೆ. ಅಷ್ಟರಲ್ಲಿ ಆಯತಪ್ಪಿದ ಯುವಕ ಕೆಳಗೆ ಬೀಳುತ್ತಾನೆ. ಇನ್ನುಳಿದವರು ಆತನ ರಕ್ಷಣೆಗೆ ದೌಡಾಯಿಸಿದರೂ ಯಾವುದೇ ಪ್ರಯೋಜನವಾಗಲ್ಲ. ಕಟ್ಟಡದಿಂದ ಕೆಳಗೆ ಬಿದ್ದ ಯುವಕನ ರುಂಡ-ಮುಂಡ ಬೇರೆಯಾಗಿದೆ ಎಂದು ವರದಿಯಾಗಿದೆ.

ವಧುವಿನ ಜೊತೆ ಕಾರ್‌ನಲ್ಲಿ ಶುರು ಹಚ್ಕೊಂಡು ವರ; ಮನೆ ತಲುಪೋವರೆಗಾದ್ರೂ ವೇಟ್ ಮಾಡು ಗುರು ಎಂದ ನೆಟ್ಟಿಗರು 

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಯುವಕನ ಕುಟುಂಬಸ್ಥರು ಶವ ತೆಗೆದುಕೊಂಡು ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಇತ್ತ ಪೊಲೀಸರು ಆಗಮಿಸುವಷ್ಟರಲ್ಲಿ ಕುಟುಂಬನಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ನಡೆಸದೇ ಅಂತ್ಯಕ್ರಿಯೆ ನಡೆಸಲಾಗಿದೆ. ಮತ್ತೊಂದೆಡೆ ಯುವಕನ ಕುಟುಂಬಸ್ಥರಾಗಲು ಅಥವಾ ಆತನ ಗೆಳೆಯರು ಯಾವುದೇ ದೂರು ದಾಖಲಿಸಿಲ್ಲ. 

ಕಟ್ಟಡದಿಂದ ಕೆಳಗೆ ಬಿದ್ಗದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ವೃದ್ಯರು ಯುವಕ ಮೃತಪಟ್ಟಿರೋದನ್ನು ದೃಢಪಡಿಸಿದ್ದರು. ಆಸ್ಪತ್ರೆಗೆ ಆಗಮಿಸಿದ ಯುವಕನ ಪೋಷಕರು ಶವ ತೆಗೆದುಕೊಂಡು ಹೋದರು. ಮೃತ ಯುವಕನನ್ನು 20 ವರ್ಷದ ಆಸೀಫ್ ಎಂದು ಗುರುತಿಸಲಾಗಿದೆ. ಯುವಕನ ಸಾವಿನ ಬಳಿಕ ಸರಾಫ್ ಬಜಾರ್‌ನಲ್ಲಿ ನೀರವ ಮೌನ ಆವರಿಸಿದೆ. ಮೃತ ಆಸೀಫ್ ಜೊಹರಿ ಕಾಂಪ್ಲೆಕ್ಸ್‌ನಲ್ಲಿಯೇ ಕೆಲಸ ಮಾಡಿಕೊಂಡಿದ್ದನು. ಅಂಗಡಿ ತೆರೆಯುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಮಾಲೀಕರ ಆಹಾರದಲ್ಲಿ ಮೂತ್ರ ಸೇರಸ್ತಿದ್ದು ಯಾಕೆ ಎಂಬುದರ ಸತ್ಯ ಬಿಚ್ಚಿಟ್ಟ ರೀನಾ? ಕಾರಣ ಕೇಳಿ ಎಲ್ಲರೂ ಶಾಕ್

स्लोमोशन में चली गई जान
यूपी के आगरा थाना कोतवाली सर्राफा मार्केट नमक की मंडी में रील बनाने की दौरान हादसे मैं चली गई युवक की जान. स्लोमोशन में रील बना रहा था जाल हटाने से 3 मंज़िल निचे चला गया, गर्दन धड़ से अलग. pic.twitter.com/nFGOug8AJN

— Tushar Rai (@tusharcrai)
click me!