PMLA Cases : ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಯಿಂದ ಈವರೆಗೂ 18 ಸಾವಿರ ಕೋಟಿ ವಸೂಲಿ!

Suvarna News   | Asianet News
Published : Feb 23, 2022, 08:31 PM ISTUpdated : Feb 23, 2022, 08:40 PM IST
PMLA Cases : ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಯಿಂದ ಈವರೆಗೂ 18 ಸಾವಿರ ಕೋಟಿ ವಸೂಲಿ!

ಸಾರಾಂಶ

ಮಲ್ಯ, ಚೋಕ್ಸಿ ನೀರವ್ ಮೋದಿಯಿಂದ 18 ಸಾವಿರ ಕೋಟಿ ಮರುಪಾವತಿ ದೇಶದಲ್ಲಿ ಈವರೆಗೂ 4700 ಪಿಎಂಎಲ್ಎ ಕೇಸ್ ಗಳು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ (ಫೆ. 23): ದೇಶದ ಬ್ಯಾಂಕ್ ಗಳಿಗೆ ವಂಚನೆ ಮಾಡಿ ಪರಾರಿಯಾಗಿರುವ ಉದ್ಯಮಿಗಳಾದ ವಿಜಯ್ ಮಲ್ಯ (Vijay Mallya), ನೀರವ್ ಮೋದಿ (Nirav Modi) ಹಾಗೂ ಮೇಹುಲ್ ಚೋಕ್ಸಿಯಿಂದ (Mehul Choksi) ಈವರೆಗೂ 18 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಬ್ಯಾಂಕ್ ಗಳಿಗೆ ಮರುಪಾವತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ ಗೆ (Supreme Court) ತಿಳಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ (nforcement Directorate) ನೀಡಿರುವ ವ್ಯಾಪಕ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದ್ದು ಇದರ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ನೀಡಿದೆ.

ಭಾರತದಲ್ಲಿ, 4,700 ಪಿಎಂಎಲ್‌ಎ (ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆಕ್ಟ್) (PMLA) ಪ್ರಕರಣಗಳನ್ನು ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ ಮತ್ತು ನ್ಯಾಯಾಲಯದ ಮುಂದೆ ಬಾಕಿ ಇರುವ ಅಪರಾಧಗಳ ಒಟ್ಟು ಆದಾಯವು ₹ 67,000 ಕೋಟಿಗಳಷ್ಟಿದೆ ಎಂದು ಕೇಂದ್ರ ತಿಳಿಸಿದೆ. ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General Tushar Mehta) ಅವರು ನ್ಯಾಯಾಲಯಗಳು ನೀಡುತ್ತಿರುವ ರಕ್ಷಣೆಯಿಂದಾಗಿ ದೊಡ್ಡ ಮೊತ್ತದ ಹಣ ಇನ್ನೂ ಹೇಗೆ ಈ ಉದ್ಯಮಿಗಳಲ್ಲಿ ಸಿಲುಕಿಕೊಂಡಿದೆ ಮತ್ತು ಚೇತರಿಕೆಯ ಹಂತವನ್ನು ದಾಟಿಲ್ಲ ಎನ್ನುವುದನ್ನು ವಿವರಿಸಲು ಈ ಅಂಕಿಅಂಶಗಳನ್ನು ಹೇಳಿದರು.
"ಸಾವಿರಾರು ಕೋಟಿ ವಂಚನೆ ಮಾಡಿ ದೇಶ ತೊರೆದಿರುವ ಕೆಲವರು ನ್ಯಾಯಾಲಯಗಳ ರಕ್ಷಣೆಯನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ಬಲವಂತ ರಹಿತ ಕ್ರಮಗಳನ್ನು ನೀಡುವ ಮೂಲಕ ನ್ಯಾಯಾಲಯಗಳು ₹ 67000 ಕೋಟಿಗಳನ್ನು ಹಿಡಿದಿಟ್ಟುಕೊಂಡಿವೆ" ಎಂದು ಅವರು ಹೇಳಿದರು.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಥವಾ PMLA ಗೆ ಇತ್ತೀಚಿನ ತಿದ್ದುಪಡಿಗಳ ಸಂಭಾವ್ಯ ದುರುಪಯೋಗವನ್ನು ಜಾರಿ ನಿರ್ದೇಶನಾಲಯ ಮಾಡುತ್ತಿದೆ ಎಂದು ಆರೋಪಿಸಿ ಕಳೆದ ಕೆಲವು ವಾರಗಳಲ್ಲಿ ಕಪಿಲ್ ಸಿಬಲ್, ಅಭಿಷೇಕ್ ಮುನು ಸಿಂಗ್ವಿ ಹಾಗೂ ಮುಕುಲ್ ರೋಹಟಗಿ ಸೇರಿದಂತೆ ಇನ್ನೂ ಹಲವರು ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ.


ಹಲವಾರು ವಿಷಯಗಳ ಮೇಲೆ ಈ ಕಾನೂನನ್ನು ಟೀಕಿಸಲಾಗಿದೆ. ಕಟ್ಟುನಿಟ್ಟಾದ ಜಾಮೀನು ಷರತ್ತುಗಳು, ಬಂಧನದ ಕಾರಣಗಳನ್ನು ತಿಳಿಸದಿರುವುದು, ECIR (ಪೊಲೀಸರು ಸಲ್ಲಿಸಿದ ಪ್ರಥಮ ಮಾಹಿತಿ ವರದಿಗೆ ಸಮಾನಾಂತರವಾಗಿ) ಅಪರಾಧದ ಆದಾಯ ಮತ್ತು ತನಿಖೆಯ ಸಮಯದಲ್ಲಿ ಆರೋಪಿಗಳು ನೀಡಿದ ಹೇಳಿಕೆಗಳನ್ನು ವಿಚಾರಣೆಯ ಸಮಯದಲ್ಲಿ ಸಾಕ್ಷಿಯಾಗಿ ಒಪ್ಪಿಕೊಳ್ಳುವುದು ಇವುಗಳು ಪ್ರಮುಖವಾದವಾಗಿವೆ. ವಿದೇಶಗಳಲ್ಲಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತದಲ್ಲಿ ಪಿಎಂಎಲ್‌ಎ ಅಡಿಯಲ್ಲಿ ತನಿಖೆಗೆ ಬಹಳ ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರವು ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿಟಿ ರವಿಕುಮಾರ್ ಅವರ ಪೀಠಕ್ಕೆ ತಿಳಿಸಿದೆ.

Nawab Malik Arrest : ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನ!
ಉದಾಹರಣೆಯಾಗಿ ಕೇಂದ್ರವು ಇಂಗ್ಲೆಂಡ್ ನ ಸ್ಥಿತಿಯನ್ನು ಉಲ್ಲೇಖಿಸಿದೆ. ಮನಿ ಲಾಂಡರಿಂಗ್ ಕಾಯ್ದೆಯ ಅಡಿಯಲ್ಲಿ ಇಂಗ್ಲೆಂಡ್ ನಲ್ಲಿ 7900 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಮೆರಿಕದಲ್ಲಿ 1532, ಚೀನಾದಲ್ಲಿ 4691, ಆಸ್ಟ್ರಿಯಾದಲ್ಲಿ 1036, ಹಾಂಕಾಂಗ್ ನಲ್ಲಿ 1823, ಬೆಲ್ಜಿಯಂನಲ್ಲಿ 1862 ಮತ್ತು ರಷ್ಯಾದಲ್ಲಿ 2764 ಪ್ರಕರಣಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಂದು ಗುಜರಿ ವ್ಯಾಪಾರಿ, ಇಂದು ಕೋಟ್ಯಾಧಿಪತಿ, ಹೀಗಿದೆ ನವಾಬ್ ಮಲಿಕ್ ರಾಜಕೀಯ ಪಯಣ!
ಭಾರತದಲ್ಲಿ, ಕಳೆದ 5 ವರ್ಷಗಳಲ್ಲಿ ಪ್ರತಿ ವರ್ಷ ತನಿಖೆಗೆ ತೆಗೆದುಕೊಂಡ ಪ್ರಕರಣಗಳ ಸಂಖ್ಯೆಯು 2015-16 ರಲ್ಲಿ 111 ಪ್ರಕರಣಗಳಿಂದ 2020-21 ರಲ್ಲಿ 981 ಕ್ಕೆ ಬದಲಾಗಿದೆ ಎಂದು ಕೇಂದ್ರ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ (2016-17 ರಿಂದ 2020-21) ಇಂತಹ ಅಪರಾಧಗಳಿಗಾಗಿ 33 ಲಕ್ಷ ಎಫ್‌ಐಆರ್‌ಗಳು ದಾಖಲಾಗಿವೆ. ಆದರೆ 2,086 ಪ್ರಕರಣಗಳನ್ನು ಮಾತ್ರ ತನಿಖೆಗೆ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು