
ಹೈದರಾಬಾದ್ (ಫೆ.23): ಕೋವಿಡ್ (Covid) ಸಮಯದಲ್ಲಿ ಜನರು ಎದುರಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡ ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ (Hyderabad, Cyberabad & Rachakonda) ಟ್ರಾಫಿಕ್ ಪೊಲೀಸ್ (Traffic police) ಸಾರ್ವಜನಿಕರಿಗೆ ದೊಡ್ಡ "ಡಿಸ್ಕೌಂಟ್" (discount ) ಯೋಜನೆಯನ್ನು ರೂಪಿಸಿದೆ. ಟ್ರಾಫಿಕ್ ನಿಯಮ (Traffic Violations) ಉಲ್ಲಂಘಿಸಿದವರಿಗೆ ಈಗಾಗಲೇ ನೀಡಲಾಗಿರುವ ಚಲನ್ ನ (challan)ಮೊತ್ತದಲ್ಲಿ ಸಾಕಷ್ಟು ರಿಯಾಯಿತಿಯೊಂದಿಗೆ ದಂಡದ ಮೊತ್ತವನ್ನು ಕಟ್ಟುವ ಸ್ಕೀಮ್ ನೀಡಲಾಗಿದೆ. ಬುಧವಾರ ಹೈದರಾಬಾದ್ ಹಾಗೂ ರಾಚಕೊಂಡ ಟ್ರಾಫಿಕ್ ಪೊಲೀಸ್ ಪ್ರಕಟಣೆಯ ಮೂಲಕ ಇದನ್ನು ತಿಳಿಸಿದೆ.
ಟ್ರಾಫಿಕ್ ಪೊಲೀಸ್ ಇಲಾಖೆ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೈದರಾಬಾದ್‌ನ ಜನರು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದರಿಂದ 'ಮಾನವೀಯ ಸೂಚಕ'ವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಪ್ರಕಟಣೆಯ ಪ್ರಕಾರ ಪೊಲೀಸ್ ಇಲಾಖೆ ನೀಡಿರುವ ಶೇ. 85ರಷ್ಟು ಚಲನ್ ಗಳು ಸಮಾಜದ ಮಧ್ಯಮ ಹಾಗೂ ಕೆಳ ಮಧ್ಯಮವರ್ಗದವರಿಗೆ ಸೇರಿದ ದ್ವಿಚಕ್ರ ವಾಹನಗಳು ಹಾಗೂ ಆಟೋಗಳಿಗೆ ಸಂಬಂಧಿಸಿದ್ದವಾಗಿವೆ.
ಈ ಪಾವತಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾಡಬೇಕು ಎಂದು ಹೈದರಾಬಾದ್ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಈ ಸೌಲಭ್ಯವನ್ನು ಮಾರ್ಚ್ 1 ರಿಂದ ಮಾರ್ಚ್ 31 ರ ನಡುವೆ ಬಳಕೆ ಮಾಡಬಹುದಾಗಿದೆ.
ವಾಹನದ ವರ್ಗಕ್ಕೆ ಅನುಗುಣವಾಗಿ ಪ್ರಸ್ತಾಪಿಸಲಾದ ರಿಯಾಯಿತಿ:
* ದ್ವಿಚಕ್ರ ವಾಹನಗಳು ಮತ್ತು ಆಟೋಗಳಿಗೆ ಶೇ.25ರಷ್ಟು ಚಲನ್ ಮೊತ್ತ ಪಾವತಿಸಿದರೆ ಬಾಕಿ ಉಳಿದಿರುವ ಶೇ.75 ರಷ್ಟು ಚಲನ್ ನ ಮೊತ್ತವನ್ನು ಮನ್ನಾ ಮಾಡಲಾಗುತ್ತದೆ. ಇದರ್ಥ 1 ಸಾವಿರ ರೂಪಾಯಿ ದಂಡದ ಚಲನ್ ನೀಡಿದ್ದರೆ, ವ್ಯಕ್ತಿಯೊಬ್ಬ 250 ರೂಪಾಯಿ ಪಾವತಿ ಮಾಡಿದರೆ ಸಾಕಾಗುತ್ತದೆ.
* ತಳ್ಳುವ ಗಾಡಿಗಳು ಮತ್ತು ಸಣ್ಣ ಮಾರಾಟಗಾರರಿಗೆ (39b ಪ್ರಕರಣಗಳು), 20% ಪಾವತಿಸಿದರೆ, ಉಳಿದ 80% ಅನ್ನು ಮನ್ನಾ ಮಾಡಲಾಗುತ್ತದೆ.
* ಲಘು ಮೋಟಾರು ವಾಹನಗಳು (ಎಲ್‌ಎಂವಿಗಳು), ಕಾರುಗಳು, ಜೀಪ್‌ಗಳು ಮತ್ತು ಭಾರೀ ವಾಹನಗಳಿಗೆ, 50% ಪಾವತಿಸಿದರೆ, ಉಳಿದ 50% ಮನ್ನಾ ಮಾಡಲಾಗುತ್ತದೆ.
*ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಚಾಲಕರಿಗೆ ಶೇ.30 ಪಾವತಿಸಿದರೆ ಉಳಿದ ಶೇ.70 ರಷ್ಟನ್ನು ಮನ್ನಾ ಮಾಡಲಾಗುತ್ತದೆ.
Manipur Elections: 5 ವರ್ಷ ಅಧಿಕಾರ ಕೊಡಿ, ಯಾವೊಬ್ಬ ಯುವಕನೂ ಶಸ್ತ್ರಾಸ್ತ್ರ ಹಿಡಿಯುವುದಿಲ್ಲ ಎಂದ ಶಾ!
ಹೈದರಾಬಾದ್ ಟ್ರಾಫಿಕ್ ಪೊಲೀಸ್ 2021ರ ಡಿಸೆಂಬರ್ ಗೆ ಮುಗಿದ ವರ್ಷವೊಂದರಲ್ಲಿ ದಾಖಲೆಯ 80 ಲಕ್ಷ ಚಲನ್ ಅನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಇದರಲ್ಲಿ ಶೇ.60ರಷ್ಟು ಚಲನ್ ಗಳು ಹೆಲ್ಮೆಟ್ ಧರಿಸಿದೇ ವಾಹನ ಚಾಲನೆ ಮಾಡಿದ ಹಾಗೂ ವೇಗದ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ನೀಡಿದವಾಗಿವೆ. ಈ 80 ಲಕ್ಷ ಚಲನ್ ಗಳ ಪೈಕಿ ಕೇವಲ ಶೇ. 40ರಷ್ಟು ಚಲನ್ ಗಳಲ್ಲಿ ಮಾತ್ರವೇ ದಂಡ ಪಾವತಿ ಮಾಡಲಾಗಿದೆ. ಇನ್ನು ಉಳಿದ ಶೇ. 60ರಷ್ಟು ಬಾಕಿ ದಂಡದ ಪೈಕಿ, ಬಹುತೇಕ ಮಂದಿ ಪದೇ ಪದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿಯೂ ತಪ್ಪಿಸಿಕೊಂಡಿದ್ದಾರೆ. 1.75 ಕೋಟಿ ಬಾಕಿ ಉಳಿದಿರುವ ಚಲನ್ ಗಳು ಟ್ರಾಫಿಕ್ ಪೊಲೀಸರ ಬಳಿ ಇವೆ. ಬಾಕಿ ಉಳಿದಿರುವ ಫೈನ್ ಗಳ ಮೊತ್ತವೇ ಈಗ ಅಂದಾಜು 600 ಕೋಟಿಯ ಗಡಿ ತಲುಪಿದೆ ಎಂದು ಹೇಳಲಾಗಿದೆ.
"2014ರಿಂದ ಲೆಕ್ಕ ಹಾಕುವುದಾದರೆ, ದಂಡ ಪಾವತಿ ಮಾಡದ ಚಲನ್ ಗಳ ಸಂಖ್ಯೆ 1.75 ಕೋಟಿಗೆ ಏರಿದೆ. ಒಟ್ಟಾರೆ ಇದರ ಮೊತ್ತ 600 ಕೋಟಿ ರೂಪಾಯಿ ಎಂದು ಅಂದಾಜು ಮಾಡಬಹುದು. ಬ್ಯಾಕ್ ಲಾಗ್ ಆಗಿರುವ ಫೈನ್ ಗಳನ್ನು ಸಂಗ್ರಹ ಮಾಡುವುದರ ಬಗ್ಗೆ ಕಾನೂನಿನ ಮೊರೆ ಹೋಗಲಾಗಿದೆ. ಲೋಕ್ ಅದಾಲತ್ ಮೂಲಕ ದಂಡದ ಮೊತ್ತವನ್ನು ಸಂಗ್ರಹ ಮಾಡುವುದೂ ಕೂಡ ಆಯ್ಕೆಯಲ್ಲಿದೆ. ಟೀಮ್ ಕೂಡ ಹೊಸ ಹೊಸ ತಂತ್ರಗಳನ್ನು ಬಳಕೆ ಮಾಡುತ್ತಿದೆ' ಎಂದು ಟ್ರಾಫಿಕ್ ಪೊಲೀಸರೊಬ್ಬರು ತಿಳಿಸಿದ್ದಾರೆ.
ಅಂದು ಗುಜರಿ ವ್ಯಾಪಾರಿ, ಇಂದು ಕೋಟ್ಯಾಧಿಪತಿ, ಹೀಗಿದೆ ನವಾಬ್ ಮಲಿಕ್ ರಾಜಕೀಯ ಪಯಣ!
ಈವರೆಗೂ ಟ್ರಾಫಿಕ್ ದಂಡ ಮೊತ್ತವನ್ನು ಪಾವತಿ ಮಾಡದ ವ್ಯಕ್ತಿಗಳಿಗೆ ಕೆಲ ಆಫರ್ ಗಳನ್ನು ನೀಡುವ ಬಗ್ಗೆ ಹೈದರಾಬಾದ್ ಟ್ರಾಫಿಕ್ ಪೊಲೀಸ್ ಮುಖ್ಯಸ್ಥರು ಈ ಹಿಂದೆ ಸೂಚನೆಯನ್ನೂ ನೀಡಿದ್ದರು. ಸಾಂಕ್ರಾಮಿಕದಿಂದಾಗಿ ಜನರ ಜೀವನಮಟ್ಟ ಇನ್ನಷ್ಟು ಕುಸಿತವಾಗಿದೆ. ಹಾಗಾಗಿ ಬಾಕಿ ಉಳಿದಿರುವ ಚಲನ್ ಗಳಲ್ಲಿ ದಂಡದ ಮೊತ್ತ ಪಾವತಿಗೆ ಡಿಸ್ಕೌಂಟ್ ಅನ್ನು ನೀಡುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ