ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್? SPಗೆ ಸೇರ್ತಾರಾ ರೀಟಾ ಬಹುಗುಣ ಜೋಶಿ? ಅಖಿಲೇಶ್ ಹೇಳಿದ್ದಿಷ್ಟು

By Suvarna NewsFirst Published Feb 23, 2022, 7:50 PM IST
Highlights

* ಉತ್ತರ ಪ್ರದೇಶ ರಾಜಕೀಯ ಅಖಾಡದಲ್ಲಿ ಕಂಡೂ ಕೇಳರಿಯದ ಬೆಳವಣಿಗೆ

* ಬಿಜೆಪಿಗೆ ಶಾಕ್ ಕೊಡ್ತಾರಾ ಸಂಸದೆ ರೀಟಾ ಬಹುಗುಣ ಜೋಶಿ

* ಅಖಿಲೇಶ್ ಭೇಟಿಯಾದ ಜೋಶಿ ಪುತ್ರ ಮಯಾಂಕ್

ಲಕ್ನೋ(ಫೆ.23): ಯುಪಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಮತ್ತು ಅವರ ಪುತ್ರ ಮಯಾಂಕ್ ಜೋಶಿ ವಿಚಾರವಾಗಿ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ, ಬಿಜೆಪಿ ಸಂಸದೆ ಎಸ್‌ಪಿ ಸೇರುವ ಪ್ರಶ್ನೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಮುಖ ಹೇಳಿಕೆ ನೀಡಿದ್ದಾರೆ. ರೀಟಾ ಬಹುಗುಣ ಜೋಶಿ ಎಸ್‌ಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ನಾನು ಏನನ್ನೂ ಹೇಳಲಾರೆ, ಆದರೆ ಅವರ ಮಗ ನಮ್ಮನ್ನು ಭೇಟಿಯಾಗಿದ್ದಾನೆ ಎಂದು ಅವರು ಹೇಳಿದರು.

ಇದರೊಂದಿಗೆ ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಈ ಸಮಯದಲ್ಲಿ ಸಮಾಜವಾದಿ ಪಕ್ಷ ಹೆಚ್ಚು ಹೆಚ್ಚು ನಾಯಕರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದೆ ಎಂದು ಹೇಳಿದರು. ವಾಸ್ತವವಾಗಿ, ಪ್ರಯಾಗ್‌ರಾಜ್ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಅವರು ಮಂಗಳವಾರ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ, ಅವರ ಚಿತ್ರವನ್ನು ಎಸ್ಪಿ ಮುಖ್ಯಸ್ಥರೇ ಹಂಚಿಕೊಂಡಿದ್ದಾರೆ. ಮಯಾಂಕ್ ಜೋಶಿ ಎಸ್ಪಿ ಸೇರಬಹುದು ಎಂದು ಹೇಳಲಾಗುತ್ತಿದೆ. ಲಕ್ನೋ ಕ್ಯಾಂಟ್‌ನಿಂದ ಮಯಾಂಕ್ ಜೋಶಿಗೆ ಟಿಕೆಟ್ ನೀಡುವಂತೆ ಬಿಜೆಪಿ ಸಂಸದರು ತಮ್ಮ ಪಕ್ಷಕ್ಕೆ ಮನವಿ ಮಾಡಿದ್ದರೂ, ಪಕ್ಷವು ಟಿಕೆಟ್ ನೀಡಿರಲಿಲ್ಲ ಎಂಬುವುದು ಉಲ್ಲೇಖನೀಯ.

Latest Videos

ರೀಟಾ ಬಹುಗುಣ ಜೋಶಿ ಈ ಹಿಂದೆ ಹೇಳಿದ್ದಷ್ಟು

ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಸಂಪೂರ್ಣ ಕಸರತ್ತು ನಡೆಸಿದ್ದರು. ಅಷ್ಟೇ ಅಲ್ಲ, 'ಅವರು (ಮಯಾಂಕ್ ಜೋಶಿ) 2009 ರಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಅದಕ್ಕೆ ಅರ್ಜಿ ಸಲ್ಲಿಸಿದ್ದಾರೆ (ಲಕ್ನೋ ಕ್ಯಾಂಟ್‌ನಿಂದ ಟಿಕೆಟ್). ಆದರೆ ಪಕ್ಷವು ಪ್ರತಿ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ನಿರ್ಧರಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಮಯಾಂಕ್ ಅವರಿಗೆ ಟಿಕೆಟ್ ಸಿಕ್ಕರೆ ನಾನು ನನ್ನ ಪ್ರಸ್ತುತ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು

ಬ್ರಿಜೇಶ್ ಪಾಠಕ್ ಮೇಲೆ ಬಿಜೆಪಿ ಬೆಟ್ಟಿಂಗ್ 

ಇಂದು ಮತದಾನ ನಡೆದ ಲಕ್ನೋದ ಕ್ಯಾಂಟ್ ಕ್ಷೇತ್ರದಿಂದ ರಾಜ್ಯ ಸಚಿವ ಬ್ರಿಜೇಶ್ ಪಾಠಕ್ ಅವರನ್ನು ಬಿಜೆಪಿ ನಾಮನಿರ್ದೇಶನ ಮಾಡಿದೆ. ಅಂದಹಾಗೆ, ಮಯಾಂಕ್ ಜೋಶಿ ಹೊರತುಪಡಿಸಿ, ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಈ ಸ್ಥಾನದಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದರು.

ಕ್ಯಾಂಟ್ ಸೀಟಿನ ಜಾತಿ ಸಮೀಕರಣ ಏನು?

ಕ್ಯಾಂಟ್ ಸೀಟ್ ಬ್ರಾಹ್ಮಣ ಪ್ರಾಬಲ್ಯ ಹೊಂದಿದೆ. ಈ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಮತದಾರರು ಬ್ರಾಹ್ಮಣರಾಗಿದ್ದಾರೆ. ಇಲ್ಲಿನ ಸಿಂಧಿ-ಪಂಜಾಬಿ ಮತದಾರರ ಸಂಖ್ಯೆ ಸುಮಾರು 65 ಸಾವಿರ. ಅತ್ತ ಇಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 25 ಸಾವಿರ. ಯಾದವ ಜಾತಿಯ ಮತಗಳು ಸುಮಾರು 20 ಸಾವಿರ ಮತ್ತು ಠಾಕೂರ್ ಜಾತಿಯ ಮತಗಳು ಸುಮಾರು 15 ಸಾವಿರ.

ಲಕ್ನೋ ಕ್ಯಾಂಟ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ

ಲಕ್ನೋ ಕ್ಯಾಂಟ್ ವಿಧಾನಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಇಲ್ಲಿ ರೀಟಾ ಬಹುಗುಣ ಜೋಶಿ 2017 ರ ಚುನಾವಣೆಯಲ್ಲಿ ಟಿಕೆಟ್ ಪಡೆದು ಗೆದ್ದಿದ್ದರು. ಇದಾದ ನಂತರ ಉಪಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ತಿವಾರಿ ಮತ್ತೊಮ್ಮೆ ಇಲ್ಲಿಂದ ಶಾಸಕರಾದರು. ಸುರೇಶ್ ತಿವಾರಿ ಅವರು ಇಲ್ಲಿಂದ ಮೂರು ಬಾರಿ (1996, 2002 ಮತ್ತು 2007) ಬಿಜೆಪಿಯ ಬಾವುಟ ಹಾರಿಸಿದ್ದಾರೆ. 2012ರಲ್ಲಿ ಈ ಕ್ಷೇತ್ರವನ್ನು ರೀಟಾ ಬಹುಗುಣ ಜೋಶಿ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು.

ಕ್ಯಾಂಟ್‌ನಿಂದ ಬಿಜೆಪಿ ಆಕಾಂಕ್ಷಿಗಳ ಪಟ್ಟಿ

ರಾಜಕೀಯ ಸಮೀಕರಣದ ಪ್ರಕಾರ ಬಿಜೆಪಿಗೆ ಅನುಕೂಲಕರ ಎನ್ನಲಾದ ಈ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿಯೂ ದೊಡ್ಡದಿದೆ. ಇಲ್ಲಿ ಸ್ವತಃ ಶಾಸಕ ಸುರೇಶ್ ತಿವಾರಿ ಹೆಸರೇ ಮೊದಲ ಸ್ಥಾನದಲ್ಲಿದೆ. ಇದರ ನಂತರ, ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ, ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಸಂಪುಟ ಸಚಿವ ಮಹೇಂದ್ರ ಸಿಂಗ್, ಮೇಯರ್ ಸಂಯುಕ್ತಾ ಭಾಟಿಯಾ ಅವರ ಸೊಸೆ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

click me!