ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!| ದೇಶಾದ್ಯಂತ ಭಾರೀ ಸಂಖ್ಯೆಯ ಸಾರ್ವಜನಿಕರಲ್ಲಿ ರೋಗ ನಿರೋಧಕ ಅಂಶಗಳು ಪತ್ತೆ| ಬೆಂಗಳೂರಿನ ಪೀಣ್ಯ ದಾಸರಹಳ್ಳಿ ದೇಶದಲ್ಲೇ ನಂ.2: ಥೈರೋಕೇರ್ ಲ್ಯಾಬ್ ಸಮೀಕ್ಷೆ
ನವದೆಹಲಿ(ಜು.22): ದೇಶದಲ್ಲಿ ನಿತ್ಯವೂ 40000 ಆಸುಪಾಸಿನಲ್ಲಿ ಹೊಸ ಕೊರೋನಾ ಸೋಂಕು ಪತ್ತೆಯಾಗಿ, ಭವಿಷ್ಯ ಇನ್ನಷ್ಟುಭೀಕರ ಎಂಬ ಆತಂಕದ ಬೆನ್ನಲ್ಲೇ, ಭಾರತದಲ್ಲಿ ಈಗಾಗಲೇ ಸುಮಾರು 18 ಕೋಟಿ ಜನರಿಗೆ ಕೊರೋನಾ ಸೋಂಕು ಬಂದು, ಅವರೆಲ್ಲಾ ಗುಣಮುಖರಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಇದು ಈಗಾಗಲೇ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿ, ವಿಶ್ವದಲ್ಲೇ 3ನೇ ಸ್ಥಾನದಲ್ಲಿರುವ ದೇಶಕ್ಕೆ ಹೊಸ ಭರವಸೆಯ ಬೆಳಕಾಗಿ ಮೂಡಿಬಂದಿದೆ.
ವಿಶೇಷವೆಂದರೆ ಅತಿ ಹೆಚ್ಚು ಆ್ಯಂಡಿಬಾಡಿ (ರೋಗ ನಿರೋಧಕ ಅಂಶ) ಪತ್ತೆಯಾದ ಪ್ರದೇಶಗಳಲ್ಲಾ ಅತಿ ಹೆಚ್ಚಿನ ಸೋಂಕು ಪತ್ತೆಯಾದ ಪ್ರದೇಶಗಳೇ ಆಗಿವೆ. ಹೀಗಾಗಿ ಅತಿ ಹೆಚ್ಚು ಸೋಂಕುಪತ್ತೆಯಾದ ಪ್ರದೇಶದಲ್ಲಿ ಸಹಜವಾಗಿಯೇ ಹರ್ಡ್ ಇಮ್ಯುನಿಟಿ (ಸಮೂಹ ರೋಗ ನಿರೋಧಕ ಶಕ್ತಿ) ಕಂಡುಬರುತ್ತದೆ ಎಂಬ ವಾದವನ್ನೂ ಅಂಕಿ ಅಂಶಗಳು ಪುಷ್ಟೀಕರಿಸಿವೆ.
ರೆಮ್‌ಡೆಸಿವಿರ್‌ನ ಜೆನರಿಕ್ ಮಾದರಿ ರಿಲೀಸ್: ಬೆಂಗಳೂರಲ್ಲಿ ಉತ್ಪಾದನೆ!
ಥೈರೋಕೇರ್ ಎಂಬ ಖಾಸಗಿ ರೋಗಪತ್ತೆ ಸಂಸ್ಥೆ, ಕಳೆದ 20 ದಿನಗಳ ವ್ಯಾಪ್ತಿಯಲ್ಲಿ ದೇಶದ 600 ಪಿನ್‌ಕೋಡ್ ವ್ಯಾಪ್ತಿಯ ಪ್ರದೇಶಗಳಲ್ಲಿ 60000 ಜನರ ಮೇಲೆ ನಡೆಸಲಾದ ಆ್ಯಂಟಿಬಾಡಿ (ಪ್ರತಿಕಾಯ) ಪರೀಕ್ಷೆಯ ಫಲಿತಾಂಶ ಆಧರಿಸಿ ಟ್ವೀಟರ್‌ನಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಅದರನ್ವಯ ಈಗಾಗಲೇ ದೇಶದ 15ರಷ್ಟುಜನರು ಅಂದರೆ ಸುಮಾರು 18 ಕೋಟಿ ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅದರ ವಿರುದ್ಧ ಅವರ ದೇಹದಲ್ಲೇ ಆ್ಯಂಡಿಬಾಡಿಗಳು ಉತ್ಪಾದನೆಯಾಗಿವೆ. ಈ ಮೂಲಕ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇನ್ನೊಂದು ಅಚ್ಚರಿಯ ವಿಷಯವೆಂದರೆ ಹೀಗೆ ಪ್ರತಿಕಾಯಗಳು ಅತಿ ಹೆಚ್ಚು ಪತ್ತೆಯಾಗಿರುವ ಪಿನ್‌ಕೋಡ್ ಪ್ರದೇಶಗಳ ಪೈಕಿ ಬೆಂಗಳೂರಿನ ಪೀಣ್ಯ ದಾಸರಹಳ್ಳಿ ಶೇ.47.1ರಷ್ಟುಫಲಿತಾಂಶದೊಂದಿಗೆ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದ ಭಿವಾಂಡಿ ಶೇ.44.1ರೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ಶೇ.21.4ರಷ್ಟುಫಲಿತಾಂಶದೊಂದಿಗೆ ಬಳ್ಳಾರಿ 31ನೇ ಸ್ಥಾನದಲ್ಲಿದೆ.\
ಒಂದು ಪತ್ರ ಬರೆದರೆ ಸಾಕು 5 ಸಾವಿರ ಬೆಡ್ ಸಿಗ್ತಾವೆ: ರಾಜ್ಯ ಸರ್ಕಾರ ಈ ಕಡೆ ಒಮ್ಮೆ ನೋಡಲೇಬೇಕು!
ಏನಿದು ಆ್ಯಂಟಿಬಾಡಿ?
ನಮ್ಮ ದೇಹದ ಮೇಲೆ ಯಾವುದೇ ವೈರಸ್, ಬ್ಯಾಕ್ಟೀರಿಯಾ ದಾಳಿ ಮಾಡಿದಾಗ, ಅದನ್ನು ಪ್ರತಿರೋಧಿಸಲು ನಮ್ಮ ದೇಹದಲ್ಲಿನ ರೋಗ ನಿರೋಧಕ ವ್ಯವಸ್ಥೆಯಲ್ಲಿನ ಪ್ಮಾಸ್ಮಾ ಪ್ರೋಟೀನ್‌ಗಳನ್ನು ಬಿಡುಗಡೆ ಮಾಡಿ ಪ್ರತಿದಾಳಿ ನಡೆಸುತ್ತದೆ. ಇಂಥ ಪ್ರತಿದಾಳಿ ನಡೆಸುವ ಜೀವಕೋಶಗಳನ್ನು ಆ್ಯಂಡಿಬಾಡಿ ಎನ್ನಲಾಗುತ್ತದೆ.
ವರದಿಯ ಅರ್ಥವೇನು?
ಈಗಾಗಲೇ ಕೋಟ್ಯಂತರ ಜನರಲ್ಲಿ ಒಬ್ಬರಿಂದ ಒಬ್ಬರಿಗೆ ಸೋಂಕು ಹಬ್ಬಿದೆ
ತಮಗೆ ಸೋಂಕು ಹಬ್ಬಿದ ವಿಷಯ ಬಹುತೇಕ ಜನರಿಗೆ ಅರಿವಿಗೇ ಬಂದಿಲ್ಲ
ದೇಶದ ಕೆಲವು ಭಾಗಗಳಲ್ಲಿ ಈಗಾಗಲೇ ಸಾಮುದಾಯಿಕ ಹರಡುವಿಕೆ ಇದೆ
ರೋಗ ನಿರೋಧಕ ಶಕ್ತಿ ಹೆಚ್ಚಿರುವ ವ್ಯಕ್ತಿಗಳಲ್ಲಿ ಸೋಂಕು ನಿವಾರಣೆಯಾಗಿದೆ
ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ: ಕೇಂದ್ರದ ವಾರ್ನಿಂಗ್!
ಟಾಪ್-5 ಸ್ಥಳಗಳು
ಶೇ.47.1: ಭಿವಾಂಡಿ, ಥಾಣೆ
ಶೇ.44.1: ಪೀಣ್ಯ ದಾಸರಹಳ್ಳಿ, ಬೆಂಗಳೂರು
ಶೇ.37.7: ಆನಂದ್ ವಿಹಾರ್, ನವದೆಹಲಿ
ಶೇ.37.3: ಜುಬಿಲಿ, ಹೈದರಾಬಾದ್
ಶೇ.36.7: ದಹಿಸಾರ್, ಥಾಣೆ