ಕೊರೋನಾ ನಡುವೆ ಆತ್ನ ನಿರ್ಭರ ಭಾರತಕ್ಕೆ ಕರೆ ಕೊಟ್ಟ ಪ್ರಧಾನಿ ನರೇಂದ್ರ ಮೋದಿ/ ದೇಶಿಯ ಉತ್ಪನ್ನ ಬಳಕೆ ಮತ್ತು ಮಾರಾಟಕ್ಕೆ ಉತ್ತೇಜನ/ ಆತ್ಮನಿರ್ಭರ ಭಾರತ ಕನಸಿನೊಂದಿಗೆ ಯುವಾಬ್ರಿಗೇಡ್ ಹುಟ್ಟುಹಾಕಿದ ಸಂಸ್ಥೆ Glocal India
ಬೆಂಗಳೂರು(ಜು. 21) ಪ್ರಧಾನಮಂತ್ರಿ ನರೇಂದ್ರಮೋದಿ ಆತ್ಮನಿರ್ಭರ ಭಾರತ ಕನಸಿನೊಂದಿಗೆ ಯುವಾಬ್ರಿಗೇಡ್ ಹುಟ್ಟುಹಾಕಿದ ಸಂಸ್ಥೆ Glocal India. ಇದು Global ಮಟ್ಟಕ್ಕೇರಬಲ್ಲ Local ವಸ್ತುಗಳಿಗೆ Vocal ಆಗುವ ಪ್ರಯತ್ನ. ಇಲ್ಲಿ ಜಿಲ್ಲಾ ಮಟ್ಟದ ಸ್ಥಳೀಯ ಉತ್ಪನ್ನಗಳನ್ನು ಪಟ್ಟಿಮಾಡಿ ಅವುಗಳು ಸಿಗುವ ಸ್ಥಳಗಳನ್ನು ತಿಳಿಸಲು ವೇದಿಕೆ ರೂಪಿಸಿಕೊಡಲಾಗಿದೆ.
ಆಯಾ ಸ್ಥಳೀಯ ಕಂಪೆನಿಗಳು ತಾವು Global ಆಗುವ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ಕೂಡ ತಜ್ಞರ ಸಮಿತಿ ನಿರ್ಧರಿಸಿ ಅವರಿಗೆ ಗುಣಮಟ್ಟ ಪತ್ರವನ್ನು ಕೊಡಲಾಗುತ್ತದೆ. ವೆಬ್‌ಸೈಟ್‌ನಲ್ಲಿ ಅಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಪ್ರತ್ಯೇಕವಾಗಿ ಬಿಂಬಿಸಲಾಗುತ್ತದೆ. ಇದು ಸ್ಥಳೀಯ ವಸ್ತುಗಳಿಗೆ ವೇದಿಕೆ ಮಾತ್ರ ಆಗಿದ್ದು ಇದರ ಮೂಲಕ ಮಾರಾಟ ನಡೆಯುವುದಿಲ್ಲ. ಬದಲಿಗೆ ಉತ್ಪಾದಕರ ನೇರ ಸಂಪರ್ಕವನ್ನು ಗ್ರಾಹಕರಿಗೆ ಈ ಮೂಲಕ ಕಲ್ಪಿಸಿಕೊಡಲಾಗುತ್ತದೆ.
undefined
ಅದಾಗಲೇ 200ಕ್ಕೂ ಹೆಚ್ಚು ಉತ್ಪಾದಕರು ಈ ವೆಬ್‌ಸೈಟ್ ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಜಿಐ ಟ್ಯಾಗ್ ಹೊಂದಿರುವ ಕರ್ನಾಟಕದ ಉತ್ಪನ್ನಗಳನ್ನೂ ಒಳಗೊಂಡಂತೆ ಹಲವು ಉತ್ಪನ್ನಗಳ ಕುರಿತು ಮಾಹಿತಿಯನ್ನು ಈ ವೆಬ್‌ಸೈಟ್‌ನ ಬ್ಲಾಗ್‌ನಲ್ಲಿ ಕಾಣಬಹುದು.
ಈ ವೆಬ್‌ಸೈಟ್ ಅನ್ನು ಯುವಾಬ್ರಿಗೇಡ್ ನ Fifth Pillar ಕಾರ್ಯಕ್ರಮದಲ್ಲಿ ಸಚಿವ ಜಗದೀಶ್ ಶೆಟ್ಟರ್ ಲೋಕಾರ್ಪಣೆ ಮಾಡಿದರು.
ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು #Glocal_India ಕುರಿತು ಜನರಿಗೆ ತಲುಪಿಸುವ ಸಲುವಾಗಿ ಟ್ವಿಟರ್ ಟ್ರೆಂಡ್ ಅಭಿಯಾನ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆಯಿಂದ ನಡೆದ ಟ್ರೆಂಡ್ ಮಧ್ಯಾಹ್ನ 2 ಗಂಟೆಯವರೆಗೂ ಮುಂದುವರೆಯಿತು. ಒಟ್ಟಾರೆ 40 ಸಾವಿರಕ್ಕೂ ಅಧಿಕ ಟ್ವೀಟ್‌ಗಳು #Glocal_India ಅಭಿಯಾನದಡಿಯಲ್ಲಿ ಆದವು.
ವಿಶೇಷವೆಂದರೆ ಟ್ರೆಂಡ್ ಪ್ರಾರಂಭಿಸಿದ ಐದೇ ನಿಮಿಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಟಾಪ್ 20 ಯಲ್ಲಿ #Glocal_India ಕಾಣಿಸಿಕೊಂಡಿತು. ಅಭಿಯಾನ ಪ್ರಾರಂಭಿಸಿದ ಕೇವಲ 45 ನಿಮಿಷಗಳೊಳಗೆ ರಾಷ್ಟ್ರ ಮಟ್ಟದಲ್ಲಿ ಮೊದಲ ಐದರ ಸ್ಥಾನದಲ್ಲಿತ್ತು #Glocal_India.
ಅಂಧರ ಮನೆಗೆ ಬೆಳಕಾದ ಯುವಾ ಬ್ರಿಗೇಡ್
ಕರ್ನಾಟಕದ ಮಟ್ಟದಲ್ಲಿ 11:45ರಿಂದ ಮೂರು ಗಂಟೆಗಳ ಕಾಲ #Glocal_India ಮೊದಲ ಸ್ಥಾನದಲ್ಲಿಯೇ ಇದ್ದದ್ದು ವಿಶೇಷ. ನಿಮಿಷಕ್ಕೆ ಸುಮಾರು 440 ಟ್ವೀಟ್‌ಗಳಾಗುತ್ತಿದ್ದವು. ಕೇವಲ ಕರ್ನಾಟಕವಲ್ಲದೇ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಸಿಕ್ಕಿಂ, ಕೋಲ್ಕತ್ತಾ, ಜಾರ್ಖಂಡ್‌ಗಳಿಂದಲೂ ಟ್ವೀಟ್‌ಗಳನ್ನು ಮಾಡಲಾಗಿತ್ತು. ಅಷ್ಟೇ ಅಲ್ಲ, ಕ್ಯಾಲಿಫೋರ್ನಿಯಾ, ಡೆಟ್ರಾಯ್ಟ್, ಡಲ್ಲಾಸ್, ಬೆನಿನ್, ದುಬೈ, ಪಾಕಿಸ್ತಾನ, ಜರ್ಮನಿ, ಸಿಂಗಾಪೂರ, ಫಿಲಿಪೈನ್ಸ್, ಯುನೈಟೆಡ್ ಕಿಂಗ್ಡಮ್ ಹೀಗೆ ಹಲವು ದೇಶಗಳಿಂದ ಟ್ವೀಟ್‌ಗಳು ಹರಿದುಬಂದವು.
#Glocal_India ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ರಾಷ್ಟ್ರಮಟ್ಟದಲ್ಲಿ Glocal India ಟ್ರೆಂಡ್ ಆಗುತ್ತಿದ್ದಂತೆ ವೆಬ್‌ಸೈಟ್‌ಗೆ ಹಿಟ್ಸ್ ಬಹಳವಾಗಿಯೇ ಬಂತು. ಹಲವು ಉತ್ಪಾದಕರು ತಮ್ಮ ಉತ್ಪನ್ನಗಳನ್ನು ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳಲು ಮುಂದೆ ಬಂದಿದ್ದಾರೆ.
ಯುವಾಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಗ್ರಾಹಕರು ಮತ್ತು ಉತ್ಪಾದಕರ ನಡುವೆ ಸೇತುವೆಯಾಗಿ ಇನ್ನು ಮುಂದೆ ನಿಲ್ಲಲಿದೆ.