ಕಾಶ್ಮೀರದಲ್ಲಿ ಭಯೋತ್ಪಾದಕ ಪ್ರಕರಣ ಶೇ.168ರಷ್ಟು ಇಳಿಕೆ, ಉಗ್ರರ ವಿರುದ್ಧ ಕೇಂದ್ರದ ಸವಾರಿ!

By Suvarna NewsFirst Published Dec 19, 2022, 7:09 PM IST
Highlights

ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆ ಚಟುವಟಿಕೆ ಗಣನೀಯವಾಗಿ ಇಳಿಕೆಯಾಗಿದ್ದರೆ, ಭಯೋತ್ಪಾದನಾ ಚಟುವಟಿಕೆಗೆ ಹಣಕಾಸು ನೆರವು ನೀಡಿದ ಪ್ರಕರಣಗಳ ಪೈಕಿ ಶೇಕಡಾ 94 ರಷ್ಟು ಮಂದಿ ಶಿಕ್ಷೆ ನೀಡಲಾಗಿದೆ. ಇತ್ತ ಈಶಾನ್ಯ ಭಾರತದಲ್ಲಿ 6,000 ಉಗ್ರಗಾಮಿಗಳ ಶರಣಾಗಿದ್ದಾರೆ. ಉಗ್ರರ ವಿರುದ್ದ ಕೇಂದ್ರ ಶೂ್ಯ ಸಹಿಷ್ಣುತೆ ಕುರಿತು ಸಚಿವ ಅನುರಾಗ್ ಠಾಕೂರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ(ಡಿ.19): ಕೇಂದ್ರ ಬಿಜೆಪಿ ಸರ್ಕಾರ ಅವಧಿಯಲ್ಲಿ ಭಯೋತ್ಪಾದನೆ ವಿರುದ್ಧ ನಡೆಸಿದ ಹಲವು ದಾಳಿ ಹಾಗೂ ಉಗ್ರರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯಿಂದಾಗಿ ಭಾರತದಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಸರ್ಜಿಕಲ್ ಸ್ಟ್ರೈಕ್‌, ಬಾಲಕೋಟ್ ಸ್ಟ್ರೈಕ್‌ ಮೂಲಕ ಭಾರತ ಗಡಿ ದಾಟಿ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸಿದೆ. ದೇಶದೊಳಗೆ ಉಗ್ರ ಚಟುವಟಿಕೆ, ಉಗ್ರರಿಗೆ ಹಣಕಾಸಿನ ನೆರವು ಸೇರಿದಂತೆ ಯಾವುದೇ ನೆರವು ನೀಡಿದವರ ವಿರುದ್ದವೂ ಸತತ ದಾಳಿಯಾಗುತ್ತಿದೆ.  ಸಶಸ್ತ್ರ ಪಡೆಗಳ ದಿಟ್ಟ ಕ್ರಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ 168% ರಷ್ಟು ಗಣನೀಯ ಇಳಿಕೆಯಾಗಿದೆ. ಇನ್ನು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣಗಳಲ್ಲಿ ಶೇಕಡಾ 94 ರಷ್ಟು ಮಂದಿಗೆ ಶಿಕ್ಷೆ ನೀಡುವಲ್ಲಿ ಕೇಂದ್ರ ಸರ್ಕಾರ ಸಫಲವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.  

ಭಯೋತ್ಪಾದನೆಯನ್ನು ಎದುರಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಅನುರಾಗ್ ಠಾಕೂರ್ ಮಾಧ್ಯಮಕ್ಕೆ ವಿವರಣೆ ನೀಡಿದ್ದರೆ.  ತಮ್ಮ ನಿವಾಸದಲ್ಲಿ ಮಾತನಾಡಿದ ಅನುರಾಗ್ ಠಾಕೂರ್ ಕೇಂದ್ರ ಸರ್ಕಾರವು ಯು.ಎ.ಪಿ.ಎ.ಯನ್ನು ಬಲಪಡಿಸುವ ಮೂಲಕ, ಕಾನೂನು ರಂಗದಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದರು.  ಅದೇ ಸಮಯದಲ್ಲಿ ನಿಯಮಾವಳಿಯ ಜಾರಿ ಮಟ್ಟದಲ್ಲಿಯೂ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಕಾಯ್ದೆಯನ್ನು ಪರಿಚಯಿಸುವ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿಜವಾದ ಫೆಡರಲ್ ರಚನೆಯನ್ನು ನೀಡುವ ಮೂಲಕ ಮತ್ತು ಈ ಕ್ರಮಗಳ ಸಾಮೂಹಿಕ ಪರಿಣಾಮವು ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸುವಲ್ಲಿ ಯಶಸ್ಸು ಕಂಡಿದೆ  ಎಂದರು.  ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ  ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಂಡಿದೆ ಎಂದರು.

'ಹಾವನ್ನು ಸಾಕಿದ್ದೀರಿ, ಅದು ನಿಮ್ಮನ್ನೂ ಕೂಡ ಕಚ್ಚಬಹುದು..' ಪಾಕಿಸ್ತಾನಕ್ಕೆ ಮಾತಿನಲ್ಲೇ ತಿವಿದ ಜೈಶಂಕರ್!

ಜಾಗತಿಕ ಅತ್ಯುನ್ನತ ಮಟ್ಟದಲ್ಲಿ ಭಾರತವು ತನ್ನ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಮತ್ತು ಸಭೆಗಳಲ್ಲಿ ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಒಂದಾಗುವಂತೆ ಜಗತ್ತನ್ನು ಒತ್ತಾಯಿಸಿದ್ದಾರೆ.  2000 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳ ಭಾಗವಹಿಸಿದ್ದ 90 ನೇ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯ ಸಮಾರೋಪ ಕಾರ್ಯಕ್ರಮವು 'ಭಯೋತ್ಪಾದನಾ ಕಾಯ್ದೆ ವಿರುದ್ಧ ಜಾಗತಿಕ ಕ್ರಮ' ಘೋಷಣೆಯೊಂದಿಗೆ ಕೊನೆಗೊಂಡಿತು  ಎಂದು ಠಾಕೂರ್ ಹೇಳಿದ್ದಾರೆ.

  ಈಶಾನ್ಯ ಭಾರತದಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ತೆಗೆದುಕೊಂಡ ಪ್ರಯತ್ನಗಳ ಕುರಿತು ಸಚಿವರು ಸುದೀರ್ಘವಾಗಿ ಮಾತನಾಡಿದರು ಮತ್ತು “2014 ರಿಂದ ಭಾರತದ ಈಶಾನ್ಯ ಪ್ರದೇಶದಲ್ಲಿ ಶಾಂತಿಯ ಯುಗವು ಉದಯಿಸಿದೆ. ಬಂಡಾಯ/ ಉಗ್ರ ಹಿಂಸಾಚಾರವು 80 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಮತ್ತು ನಾಗರಿಕರ ತೀವ್ರ ಸಾವು-ನೋವುಗಳಲ್ಲಿ 89 ಪ್ರತಿಶತದಷ್ಟು ಕುಸಿತವನ್ನು ಕಂಡಿವೆ. 2014 ರಿಂದ ಸುಮಾರು ಆರು ಸಾವಿರ ಉಗ್ರಗಾಮಿಗಳ ಶರಣಾಗತಿಯ ಸಾಧನೆ ಇದಕ್ಕೆ ಪೂರಕವಾಗಿದೆ.

“ಭಯೋತ್ಪಾದನೆಯನ್ನು ಎದುರಿಸಲು ಸಶಸ್ತ್ರ ಕ್ರಮವನ್ನು ಮೀರಿ ಹೋಗಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಪ್ರದೇಶದಾದ್ಯಂತ ಶಾಶ್ವತ ಶಾಂತಿಯ ವಾತಾವರಣವನ್ನು ಸೃಷ್ಟಿಸಲು ಪೂರಕ ಕೆಲಸ ಮಾಡಿದೆ. ಈ ಶಾಂತಿ ಉಪಕ್ರಮಗಳು ಕೇಂದ್ರ ಸರ್ಕಾರದ ಸಾಧನೆಗಳ ಪರಂಪರೆಯಾಗಿದೆ” ಎಂದು ಈ ಕುರಿತು ವಿವರಿಸಿದ ಠಾಕೂರ್, ಕೇಂದ್ರ ಸರ್ಕಾರವು ಸಹಿ ಮಾಡಿದ ಶಾಂತಿ ಒಪ್ಪಂದಗಳನ್ನು ಪಟ್ಟಿ ಮಾಡಿದರು.

ಕುಕ್ಕರ್ ಅಂತೆ ಕುಕ್ಕರ್ ಎಂದ ಡಿಕೆ ಶಿವಕುಮಾರ್‌ ತಲೆಗೆ ಚಕ್ಕರ್ ಎಂದ ಬಿಜೆಪಿ!

1 ಜನವರಿ 2020 ರಲ್ಲಿ ಬೋಡೋ ಒಪ್ಪಂದ,
2 ಜನವರಿ 2020 ರಲ್ಲಿ ಬ್ರೂ-ರಿಯಾಂಗ್ ಒಪ್ಪಂದ,
3 ಆಗಸ್ಟ್ 2019 ರಲ್ಲಿ ಎನ್.ಎಲ್.ಎಫ್.ಟಿ.-ತ್ರಿಪುರಾ ಒಪ್ಪಂದ,
4 ಸೆಪ್ಟೆಂಬರ್ 2021 ರಲ್ಲಿ ಕರ್ಬಿ ಆಂಗ್ಲಾಂಗ್ ಒಪ್ಪಂದ,
5 ಮಾರ್ಚ್ 2022 ರಲ್ಲಿ ಅಸ್ಸಾಂ-ಮೇಘಾಲಯ ಅಂತರ ರಾಜ್ಯ ಗಡಿ ಒಪ್ಪಂದ.

“ಅಸ್ಫಾ (ಎ.ಎಫ್‌.ಎಸ್‌.ಪಿ.ಎ.) ಹಿಂಪಡೆಯುವ ಸಮಯದಲ್ಲಿ ಇದೊಂದು ಕೇವಲ ಚರ್ಚೆಯ ವಿಷಯವಾಗುವ ಬದಲು, ಕೇಂದ್ರ ಸರ್ಕಾರವು ಇಡೀ ತ್ರಿಪುರ ಮತ್ತು ಮೇಘಾಲಯ ಸೇರಿದಂತೆ ಈಶಾನ್ಯದ ಹೆಚ್ಚಿನ ಭಾಗದಿಂದ ಅಸ್ಫಾ (ಎ.ಎಫ್‌.ಎಸ್‌.ಪಿ.ಎ.) ಕಾನೂನನ್ನು ಸಕಾಲಿಕವಾಗಿ ಹಿಂದಕ್ಕೆ ತೆಗೆದುಕೊಂಡಿದೆ. ಇದು ಅರುಣಾಚಲ ಪ್ರದೇಶದ 3 ಜಿಲ್ಲೆಗಳಲ್ಲಿ ಮಾತ್ರ ಇಂದು ಜಾರಿಯಲ್ಲಿದೆ.  ಅಸ್ಸಾಂನ ಶೇಕಡಾ 60 ರಷ್ಟು ಅಸ್ಫಾ (ಎ.ಎಫ್‌.ಎಸ್‌.ಪಿ.ಎ.) ಕಾಯಿದೆಯಿಂದ ಮುಕ್ತವಾಗಿದೆ, 6 ಜಿಲ್ಲೆಗಳಲ್ಲಿ 15 ಪೊಲೀಸ್ ಠಾಣೆಗಳನ್ನು ಸಮಸ್ಯೆ ಪ್ರದೇಶದ ವರ್ಗದಿಂದ ತೆಗೆದುಹಾಕಲಾಗಿದೆ, 7 ಜಿಲ್ಲೆಗಳಲ್ಲಿ 15 ಪೊಲೀಸ್ ಠಾಣೆಗಳನ್ನು ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯ ವ್ಯಾಪ್ತಿಯಿಂದ ತೆಗೆದುಹಾಕಲಾಗಿದೆ ಎಂದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ ಕುರಿತು ಅನುರಾಗ್ ಠಾಕೂರ್ ಹೇಳಿದ್ದಾರೆ.

click me!