Extreme fast-food consumer: ಸಿಕ್ಕಾಪಟ್ಟೆ ಫಾಸ್ಟ್‌ಫುಡ್‌ ತಿನ್ನುತ್ತಿದ್ದ 16ರ ಬಾಲಕಿ ಅನಾರೋಗ್ಯಕ್ಕೆ ಸಾವು

Published : Dec 24, 2025, 08:50 AM IST
Girl Death

ಸಾರಾಂಶ

ಅತಿಯಾದ ಫಾಸ್ಟ್‌ಫುಡ್‌ ಸೇವನೆಯಿಂದ 16 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.  ಬರ್ಗರ್‌, ಪಿಜ್ಜಾ, ಮ್ಯಾಗಿ ಮೊದಲಾದ ಫಾಸ್ಟ್‌ ಫುಡ್‌ಗಳನ್ನೇ ಹೆಚ್ಚಾಗಿ ಸೇವಿಸುತ್ತಿದ್ದಳು.

ಲಖನೌ: ಫಾಸ್ಟ್‌ ಫುಡ್‌ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮದ ಆತಂಕ ಹೆಚ್ಚುತ್ತಿರುವ ನಡುವೆಯೇ, ಉತ್ತರ ಪ್ರದೇಶದ ಅಮ್ರೋಹಾದ 16 ವರ್ಷದ ಬಾಲಕಿಯೊಬ್ಬಳು ಅತಿಯಾದ ಪ್ರಮಾಣದ ಫಾಸ್ಟ್‌ಫುಡ್‌ (ಕುರುಕಲು ತಿಂಡಿ) ಸೇವಿಸಿ ಮೃತಪಟ್ಟ ಕಳವಳಕಾರಿ ಘಟನೆ ನಡೆದಿದೆ.

ಅಹಾನಾ ಮೃತ ಬಾಲಕಿ. ಈಕೆ ಬರ್ಗರ್‌, ಪಿಜ್ಜಾ, ಮ್ಯಾಗಿ ಮೊದಲಾದ ಫಾಸ್ಟ್‌ ಫುಡ್‌ಗಳನ್ನೇ ಹೆಚ್ಚಾಗಿ ಸೇವಿಸುತ್ತಿದ್ದಳು. ಅಪರೂಪಕ್ಕೆ ಮಾತ್ರ ಮನೆಯೂಟ ಮಾಡುತ್ತಿದ್ದಳು. ಇದರಿಂದಾಗಿ ಸೆಪ್ಟೆಂಬರ್‌ನಲ್ಲಿ ಕರುಳಿನ ಸಮಸ್ಯೆ ಆರಂಭವಾಯಿತು. ನ.30ರಂದು ಶಸ್ತ್ರಚಿಕಿತ್ಸೆಯೂ ನಡೆಯಿತು. ಆರಂಭದಲ್ಲಿ ಚೇತರಿಕೆ ಕಂಡರೂ ಕ್ರಮೇಣ ಆರೋಗ್ಯ ಕ್ಷೀಣಿಸುತ್ತಾ ಬಂದಿತು. ವಿಪರೀತ ನಿಶ್ಶಕ್ತಿ ಮತ್ತು ಕರುಳಿನ ಹಾನಿಯಿಂದಾಗಿ ಮಂಗಳವಾರ ಹೃದಯಾಘಾತ ಸಂಭವಿಸಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ.

ಗೀತೆ ಜತೆ ರಾಮಾಯಣ, ಮಹಾಭಾರತ ಬೋಧನೆ

ಡೆಹ್ರಾಡೂನ್‌: ಉತ್ತರಾಖಂಡ ಸರ್ಕಾರವು ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಅಳವಡಿಸಲು ಸಿದ್ಧತೆ ಆರಂಭಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಪಠ್ಯದ ಜೊತೆ ಜೊತೆಯಲ್ಲಿಯೇ ಈ ಮಹಾಕಾವ್ಯಗಳ ಬೋಧನೆಯೂ ಶುರುವಾಗಲಿದೆ. ಕಳೆದ ಜು.14ರಿಂದ ಉತ್ತರಾಖಂಡದಲ್ಲಿ ಭಗವದ್ಗೀತೆಯ ಬೋಧನೆ ನಡೆಯುತ್ತಿದೆ. 

2020ರ ಎನ್‌ಇಪಿ ಅಡಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಡಿ ಶೇ.30ರಷ್ಟು ಪಠ್ಯಕ್ರಮವನ್ನು ರಾಜ್ಯ ಸರ್ಕಾರಗಳು ಸೇರಿಸಲು ಅವಕಾಶವಿದ್ದು, ಈ ಮಾರ್ಗದಲ್ಲಿ ಈ ಮಹಾಕಾವ್ಯಗಳ ಪಠ್ಯಗಳನ್ನು ಸೇರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ಭಾರತದ ಮೌಲ್ಯ, ತತ್ವ ಮತ್ತು ಶ್ರೀಮಂತ ಸಂಸ್ಕೃತಿಯ ಅರಿವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರಕ್ಕೆ ಪದಚ್ಯುತಗೊಳಿಸುವ ಎಚ್ಚರಿಕೆ

ನಿರ್ಭಯಾ ಹಂತಕರ ಪರ ವಾದಿಸಿದ್ದ, ಪಿಐಎಲ್‌ ಖ್ಯಾತಿಯ ಶರ್ಮಾ ನಿಧನ

ನವದೆಹಲಿ: 2012ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಕೇಸ್‌ನಲ್ಲಿ ದೋಷಿಗಳ ಪರ ವಾದ ಮಂಡಿಸಿದ್ದ ವಕೀಲ ಮನೋಹರ್‌ ಲಾಲ್‌ ಶರ್ಮಾ (69) (ಎಂ.ಎಲ್‌.ಶರ್ಮಾ) (69) ಸಾವನ್ನಪ್ಪಿದ್ದಾರೆ. ಕಿಡ್ನಿ ಸಂಬಂಧಿತ ವ್ಯಾಧಿಯಿಂದಂ ಮೃತಪಟ್ಟಿದ್ದಾರೆ. ಶರ್ಮಾ, ಕಳೆದ 2 ದಶಕಗಳ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸುವುದರಲ್ಲಿಯೂ ಇವರ ನಿಪುಣರಾಗಿದ್ದರು. ಕಲ್ಲಿದ್ದಲು ಹಗರಣ, ಪೆಗಾಸಸ್‌ ಸೇರಿ ನೂರಾರು ಪಿಐಎಲ್‌ಗಳನ್ನು ಸಲ್ಲಿಸಿದ ಖ್ಯಾತಿ ಇವರಿಗಿತ್ತು.

ಇದನ್ನೂ ಓದಿ: ಅತೀ ದೊಡ್ಡ ಪರಾರಿಗಳು ನಾವೇ, ಮಲ್ಯ ಜೊತೆಗೆ ವಿಡಿಯೋ ಮೂಲಕ ಭಾರತ ಅಣಕಿಸಿದ ಲಲಿತ್ ಮೋದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಂಗ್ರೆಸ್ ನಾಯಕರ ಕುಟುಂಬಕ್ಕೆ ಸಂಕಷ್ಟ: ಏನಿದು ಕೇಸ್?
ಪ್ರಿಯಾಂಕಾ ಗಾಂಧಿ ಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ: ಪತಿ ರಾಬರ್ಟ್‌ ಸ್ಫೋಟಕ ನುಡಿ