ಆಫ್ಘಾನ್‌ ವಶಪಡಿಸಿದ ತಾಲಿಬಾನ್‌ಗೆ ಪಿಎಫ್‌ಐ ಹೊಗಳಿಕೆ!

By Suvarna NewsFirst Published Aug 25, 2021, 9:52 AM IST
Highlights

* ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್‌

* ತಾಲಿಬಾನ್‌ ಉಗ್ರರನ್ನು ಕೊಂಡಾಡಿರುವ ಕೇರಳ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ

ಕೊಚ್ಚಿ(ಆ.25): ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್‌ ಉಗ್ರರನ್ನು ಕೊಂಡಾಡಿರುವ ಕೇರಳ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಆಫ್ಘನ್‌ನಲ್ಲಿ ಹೊಸ ಭರವಸೆ ಮೂಡಿದೆ ಎಂದಿದೆ.

ಪಿಎಫ್‌ಐ ನಾಯಕ ಪರಪ್ಪುರತು ಕೋಯಾ ಈ ಬಗ್ಗೆ ಮಾತನಾಡಿದ್ದು, ‘ಬಹುತೇಕ ಪಾಶ್ಚಿಮಾತ್ಯ ಮಾಧ್ಯಮಗಳು ತಾಲಿಬಾನ್‌ ಬಗ್ಗೆ ಸುಳ್ಳು ಹರಡುತ್ತಿವೆ. ತಾಲಿಬಾನನ್ನು ಪೂರ್ವಾಗ್ರಹ ಪೀಡಿತರಾಗಿ ನೋಡಬಾರದು. ಪಾಕಿಸ್ತಾನವನ್ನು ಅಫ್ಘನ್‌ನಿಂದ ದೂರವಿಡಲು ಭಾರತ ರಾಜತಾಂತ್ರಿಕ ಸಂಬಂಧ ಬೆಳೆಸಬೇಕು’ ಎಂದಿದ್ದಾರೆ.

‘ವಿಯೆಟ್ನಾಂ, ಬೊಲಿವಿಯಾದಲ್ಲಿ ಅಮೇರಿಕಾ ಸೇನೆಯನ್ನು ಹಿಮ್ಮೆಟ್ಟಿಸಿದ ಹಾಗೆಯೇ ತಾಲಿಬಾನ್‌ ಕೂಡ ಪ್ರತಿರೋಧ ತೋರಿದೆ. ಅಮೆರಿಕ ನೇಮಿಸಿದ್ದ ಅಶ್ರಫ್‌ ಘನಿ ವ್ಯಾಪಕ ಭ್ರಷ್ಟಾಚಾರದಲ್ಲಿ ನಡೆಸಿದ್ದರು. ಇದು ತಾಲಿಬಾನ್‌ಗೆ ನೆರವಾಯಿತು’ ಎಂದು ಹೇಳಿದ್ದಾರೆ.

click me!