ಮೋಮೊಸ್ ಮಾಡಲು ಹಿಟ್ಟು ಕಲಸುವ ಯಂತ್ರಕ್ಕೆ ಸಿಲುಕಿ ಬಾಲಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ
ನವದೆಹಲಿ: ಮೋಮೊಸ್ ಮಾಡಲು ಹಿಟ್ಟು ಕಲಸುವ ಯಂತ್ರಕ್ಕೆ ಸಿಲುಕಿ ಬಾಲಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 15 ವರ್ಷದ ಬಾಲಕಿಯ ಕೈ ಹಾಗೂ ತಲೆ ಹಿಟ್ಟು ಕಲಸುವ(mixing) ಮೆಷಿನ್‌ಗೆ ಸಿಲುಕಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬಾಲಕಿ ಬದುಕುಳಿಯಲಿಲ್ಲ, ಮೋಮೊಸ್ ಹಾಗೂ ಸ್ಪ್ರಿಂಗ್‌ರೋಲ್ ಮಾಡುವುದಕ್ಕೆ ಹಿಟ್ಟು ಕಲಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ದೆಹಲಿಯ ರೋಹಿಣಿ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಬೇಗಂಪುರದಲ್ಲಿ ಘಟನೆ ನಡೆದಿದೆ. ಅಲ್ಲಿ ಕೋಣೆಯೊಂದರ ಒಳಗೆ ಈ ಹಿಟ್ಟು ಕಲಿಸುವ ಯಂತ್ರವನ್ನು ಇರಿಸಲಾಗಿತ್ತು. ಮೃತ ಬಾಲಕಿ ಈ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೊದಲಿಗೆ ಬಾಲಕಿಯ ಕೈ ಯಂತ್ರಕ್ಕೆ ಸಿಲುಕಿದ್ದು, ಬಳಿಕ ಆಕೆಯ ತಲೆಯನ್ನು ಮೆಷಿನ್ ಎಳೆದುಕೊಂಡಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಂಜೆ 7.18 ನಿಮಿಷಕ್ಕೆ ಬೇಗಂಪುರ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದೆ. ಹನುಮಾನ್ ಚೌಕದ ಬಳಿ ಬಾಲಕಿಯೊಬ್ಬಳು ಹಿಟ್ಟು ಕಲಸುವ ಯಂತ್ರದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಈ ಕರೆ ಮಾಹಿತಿ ನೀಡಿದೆ. ಮಾಹಿತಿಯ ನಂತರ ಸ್ಥಳಕ್ಕೆ ಹೋಗಿ ನೋಡಿದಾಗ ಬಾಲಕಿಯ ತಲೆ ಯಂತ್ರದಲ್ಲಿ ಸಿಲುಕಿಕೊಂಡಿದ್ದು, ಆಕೆ ಸಂಪೂರ್ಣ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಈ ಯಂತ್ರ ಹೇಳುವಷ್ಟು ದೊಡ್ಡಮಟ್ಟದಲ್ಲಿ ಇಲ್ಲವೆಂಬುದು ಕಂಡು ಬಂದಿದೆ. ಮೊದಲಿಗೆ ಆಕೆಯ ಕೈ ನಂತರ ತಲೆ ಹಿಟ್ಟು ಕಲಿಸುವ ಟಬ್‌ನಲ್ಲಿ ಸಿಲುಕಿದ್ದರಿಂದ ಬಳಿಕ ಆಕೆಯನ್ನು ಮಿಷಿನ್ ತನ್ನತ್ತ ಎಳೆದಿದ್ದರಿಂದ ಈ ದುರಂತ ಸಂಭವಿಸಿದೆ ಎಂಬುದು ಬಳಿಕ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
undefined
ಕಾಯಿ ತುರಿಯುವ ಯಂತ್ರಕ್ಕೆ ಸಿಲುಕಿ ಶಿವಮೊಗ್ಗ ಬಾಲಕ ಸಾವು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿಟ್ಟಿನ ಅಂಗಡಿ ಮಾಲೀಕ ರಾಜೇಶ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳಾದ ಬಾಲಕಿಯ ನಿಜವಾದ ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಆಕೆ ಬಾಲ ಕಾರ್ಮಿಕೆಯಾಗಿ ಕೆಲಸ ಮಾಡುತ್ತಿದ್ದೀರಬಹುದೇ ಎಂಬ ಸಂಶಯದ ಬಗ್ಗೆ ಪೊಲೀಸರು ವಯಸ್ಸಿನ ಬಗ್ಗೆ ಖಚಿತವಾದ ಬಳಿಕ ನಿರ್ಧರಿಸಲಿದ್ದಾರೆ. ಆದರೆ ಹೊಟ್ಟೆಪಾಡಿಗಾಗಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಹೀಗೆ ದುರಂತಮಯವಾಗಿ ಸಾವಿಗೀಡಾಗಿದ್ದು ಮಾತ್ರ ವಿಧಿ ವಿಪರ್ಯಾಸವೇ ಸರಿ.
ಎಂಆರ್’ಐ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಸಾವು..