ಅಕ್ರಮವಾಗಿ ಭಾರತ ಪ್ರವೇಶಿಸಿ ಬೆಂಗಳೂರಿಗೆ ಬರುತ್ತಿದ್ದ 14 ಅಕ್ರಮ ಬಾಂಗ್ಲಾ ವಲಸಿಗರು ಸೆರೆ

By Kannadaprabha News  |  First Published Nov 13, 2023, 7:42 AM IST

ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಆರೋಪದ ಮೇಲೆ ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶದ ಪ್ರಜೆಗಳನ್ನು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಾವು ಉದ್ಯೋಗ ಅರಸಿ ಕರ್ನಾಟಕದ ಬೆಂಗಳೂರಿಗೆ ಹೋಗಲು ಯೋಜಿಸಿದ್ದೆವು ಎಂದು ತಿಳಿಸಿದ್ದಾರೆ.


ಅಗರ್ತಲಾ: ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಆರೋಪದ ಮೇಲೆ ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶದ ಪ್ರಜೆಗಳನ್ನು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಾವು ಉದ್ಯೋಗ ಅರಸಿ ಕರ್ನಾಟಕದ ಬೆಂಗಳೂರಿಗೆ ಹೋಗಲು ಯೋಜಿಸಿದ್ದೆವು ಎಂದು ತಿಳಿಸಿದ್ದಾರೆ.

ಮಾಹಿತಿ ಮೇರೆಗೆ ಬೈಷ್ನಾಪುರದ (Baishnapur) 2 ಮನೆಗಳ ಮೇಲೆ ದಾಳಿ ನಡೆಸಿದಾಗ 14 ಜನರನ್ನು ಬಂಧಿಸಿ, ಅವರಿಗೆ ಆಶ್ರಯ ನೀಡಿದ್ದ ಮೂವರು ಸ್ಥಳೀಯರನ್ನೂ ಬಂಧಿಸಲಾಗಿದೆ. ನಾಲ್ವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 14 ಬಾಂಗ್ಲಾದೇಶದ (Bangladesh) ಪ್ರಜೆಗಳನ್ನು ದಕ್ಷಿಣ ತ್ರಿಪುರಾದ ಸಬ್ರೂಮ್‌ನ ಗಡಿಯಲ್ಲಿರುವ ಮನೆಯೊಂದರಿಂದ ಬಂಧಿಸಲಾಗಿದೆ.

Tap to resize

Latest Videos

ಹಾಲೆಂಡ್‌ಗೂ ಆಗುತ್ತಾ ಫ್ರಾನ್ಸ್‌ಗಾದ ಗತಿ: ಅರಬ್‌ ವಲಸಿಗರ ವಿವಾದಕ್ಕೆ ಹಾಲೆಂಡ್‌ ಸರ್ಕಾರವೇ ಬಲಿ!

ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಬಂಧಿತರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶಾದ್ಯಂತ ಮಾನವ ಕಳ್ಳಸಾಗಣೆ (Human trafficking) ಮತ್ತು ಒಳನುಸುಳುವಿಕೆ ವಿರುದ್ಧ ದಾಳಿ ನಡೆಸುತ್ತಿರುವ ಎನ್‌ಐಎ (NIA) ಕಳೆದ ನಾಲ್ಕು ದಿನಗಳಲ್ಲಿ 44 ಜನರನ್ನು ಬಂಧಿಸಿತ್ತು.

ಗ್ರೀಸ್‌ ಬಳಿ ದೋಣಿ ದುರಂತ: 300 ಪಾಕಿಸ್ತಾನಿ ಅಕ್ರಮ ವಲಸಿಗರು ಬಲಿ?

Ramanagara: ಬಾಂಗ್ಲಾ ಪ್ರಜೆಗಳ ಬಂಧನ: ಜನರಲ್ಲಿ ಹೆಚ್ಚಿದ ಆತಂಕ

click me!