
ನವದೆಹಲಿ(ಮೇ.08): ಭಾರತದಲ್ಲಿ ಸತತ 40 ದಿನದ ಕಠಿಣ ಲಾಕ್‌ಡೌನ್, ಬಳಿಕ ರೆಡ್ ಝೋನ್, ಕಂಟೈನ್ಮೆಂಟ್ ಝೋನ್‌ಗಳಲ್ಲಿ ಮತ್ತಷ್ಟು ಬಿಗಿಯಾದ ಲಾಕ್‌ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ಕೊರೋನಾ ವೈರಸ್ ಹರಡುವಿಕೆ ಕೆಲ ರಾಜ್ಯಗಳಲ್ಲಿ ನಿಂತಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೊಸ ವರದಿ ಬಿಡುಗಡೆ ಮಾಡಿದ್ದು, ಭಾರತೀಯರ ಆತ್ಮವಿಶ್ವಾಸ ಹೆಚ್ಚಿದೆ.
ಲಾಕ್‌ಡೌನ್ ಎಫೆಕ್ಟ್: ಬ್ರಿಡ್ಜ್ ಕೆಳಗೆ ವಾಸ, ಊಟ ಸಿಗದೆ ಕಂಗಾಲಾದ ಬಡ ಕಾರ್ಮಿಕರು..!.
ಒಡಿಶಾ, ಜಮ್ಮ ಮತ್ತು ಕಾಶ್ಮೀರ ಹಾಗೂ ಕೇರಳ ಸೇರಿದಂತೆ 13 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಒಂದು ಹೊಸ ಕೊರೋನಾ ಕೇಸ್ ಪತ್ತೆಯಾಗಿಲ್ಲ. ಈ ಮೂಲಕ ಈ ರಾಜ್ಯ ಕೇಂದ್ರಾಡಳಿತ ಪ್ರದೇಶ ಕೊರೋನಾ ನಿಯಂತ್ರಿಸುವಲ್ಲಿ ಸಫಲವಾಗಿದೆ ಎಂದು ಹರ್ಷ ವರ್ಧನ್ ಹೇಳಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,561 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಇನ್ನು 1084 ಸೋಂಕಿತರು ಗುಣಮುಖರಾಗಿದ್ದಾರೆ.
ಕೊರೋನಾ ಹೋರಾಟದಲ್ಲಿ ಯುರೋಪ್‌ನ್ನು ಮೀರಿಸಿದ ಉತ್ತರ ಪ್ರದೇಶ: ಯೋಗಿ
ಭಾರತದಲ್ಲಿ ಸಾವಿನ ಪ್ರಮಾಣ 3.3 % ಹಾಗೂ ಸೋಂಕಿತರ ಗುಣಮುಖ ಪ್ರಮಾಣ 28.83%. ಇತರ ದೇಶಗಳಿಗೆ ಹೋಲಿಸಿದರೆ ಭಾರತ ಕೊರೋನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಗುಣಮುಖರ ಪ್ರಮಾ ಹೆಚ್ಚಿದೆ. ದೇಶದ 180 ಜಿಲ್ಲೆಗಳಲ್ಲಿ ಕಳೆದ 7 ದಿನಗಳಿಂದ ಒಂದೇ ಒಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿಲ್ಲ ಎಂದು ಹರ್ಷ ವರ್ಧನ್ ಹೇಳಿದ್ದಾರೆ.
ಕಳೆದ 24 ಗಂಟೆಯಲ್ಲಿ ಶೂನ್ಯ ಕೊರೋನ ರಾಜ್ಯಗಳು:
ಚತ್ತೀಸ್‌ಘಡ, ಹಿಮಾಚಲ ಪ್ರದೇಶ, ಜಮ್ಮ ಮತ್ತು ಕಾಶ್ಮೀರ, ಜಾರ್ಖಂಡ್, ಮಿಜೋರಾಂ, ಮಣಿಪುರ್, ಗೋವಾ, ಮೇಘಾಲಯ, ಲಡಾಕ್, ಅರುಣಾಚಲ ಪ್ರದೇಶ, ಒಡಿಶಾ, ಕೇರಳ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪ
ಇದುವರೆಗೆ ಕೊರೋನಾ ಸುಳಿಯದ ರಾಜ್ಯಗಳು
ದೀವ್-ದಮನ್, ಸಿಕ್ಕಿಂ, ನಾಗಾಲ್ಯಾಂಡ್, ಲಕ್ಷದ್ವೀಪ
ಭಾರತದಲ್ಲಿ ಕೊರೋನ ವೈರಸ್ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಪರೀಕ್ಷೆ ಮಾಡುತ್ತಿರುವುದರಿಂದ ಸದ್ಯ ಪರೀಕ್ಷಾ ಸಮಾರ್ಥ್ಯ 95,000ಕ್ಕೆ ಏರಿಕೆಯಾಗಿದೆ. 327 ಸರ್ಕಾರಿ ಹಾಗೂ 118 ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಹರ್ಷವಧನ್ ಮಾಹಿತಿ ನೀಡಿದರು.
ಭಾರತದಲ್ಲಿ 821 ಕೊರೋನಾ ವೈರಸ್ ಚಿಕಿತ್ಸಾ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದೆ. ಈ ಮೂಲ 1,50,059 ಬೆಡ್ ಲಭ್ಯವಿದೆ. ಇದರಲ್ಲಿ 1,32,219 ಐಸೋಲೇಶನ್ ಹಾಗೂ 17,840 ಐಸಿಯು ಬೆಡ್‌ಗಳಿವೆ. ಇನ್ನು 1,898 ಆರೋಗ್ಯ ಕೇಂದ್ರಗಲ್ಲಿ 1,19,109 ಬೆಡ್ ಸೌಲಭ್ಯವಿದೆ. ಇದರ ಜೊತೆಗೆ 7,569 ಕ್ವಾರಂಟೈನ್ ಕೇಂದ್ರಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು.
29.06 ಲಕ್ಷ ಪಿಪಿಇ ಕಿಟ್, 62.77 ಲಕ್ಷ ಎನ್-95 ಮಾಸ್ಕ್‌ಗಳನ್ನು ರಾಜ್ಯಗಳ ಆಸ್ಪತ್ರೆ ಸಿಬ್ಬಂದಿಗಳು ಸೇರಿದಂತೆ ಕೊರೋನಾ ವಾರಿಯರ್ಸ್‌ಗೆ ವಿತರಸಿಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ