ರಿಲ್ಯಾಕ್ಸ್‌ ಮೂಡ್‌ನಲ್ಲಿ ಗಡ್ಕರಿ ಸಾಹೇಬ್ರು; ಪಂಚಕರ್ಮ ಚಿಕಿತ್ಸೆಯಿಂದ ಮುಖ ಲಕಲಕ..!

Kannadaprabha News   | Asianet News
Published : May 08, 2020, 12:48 PM IST
ರಿಲ್ಯಾಕ್ಸ್‌ ಮೂಡ್‌ನಲ್ಲಿ ಗಡ್ಕರಿ ಸಾಹೇಬ್ರು; ಪಂಚಕರ್ಮ ಚಿಕಿತ್ಸೆಯಿಂದ ಮುಖ ಲಕಲಕ..!

ಸಾರಾಂಶ

ಕೇಂದ್ರ ಸಚಿವ  ನಿತಿನ್ ಗಡ್ಕರಿ ಲಾಕ್ಡೌನ್ ಸಂದರ್ಭದಲ್ಲಿ ಅವರ ಊರಾದ ನಾಗ್ಪುರದಲ್ಲಿ ಠಿಕಾಣಿ ಹೂಡಿದ್ದಾರೆ. ಈ ವಿರಾಮದಲ್ಲಿ ಪಂಚಕರ್ಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕೊರೋನಾ ಸಮಯದಲ್ಲಿ ನಾಗಪುರದಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಕೇಂದ್ರ ಕ್ಯಾಬಿನೆಟ್‌ ಸಚಿವರ ಪೈಕಿ ದೆಹಲಿಯಲ್ಲಿ ಇರದೆ ಊರಲ್ಲಿ ಠಿಕಾಣಿ ಹೂಡಿದವರು ಗಡ್ಕರಿ ಒಬ್ಬರೇ. ಅದಕ್ಕೆ ಅವರ ಆರೋಗ್ಯದ ಸ್ಥಿತಿಯೂ ಕಾರಣ. ಊರಲ್ಲಿರುವ ಗಡ್ಕರಿ 40 ದಿನಗಳ ಆಯುರ್ವೇದಿಕ್‌ ಪಂಚಕರ್ಮ ಚಿಕಿತ್ಸೆ ತೆಗೆದುಕೊಂಡಿದ್ದಾರೆ.

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರ ವಲಸೆ; ಕೃಷಿಗೆ ಸಿಕ್ತಾರೆ ಜನ...!

ದಿನವೂ ಬೆಳಿಗ್ಗೆ 2 ಗಂಟೆ ಎಣ್ಣೆ ಮಸಾಜ್‌, ಬಸ್ತಿ ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಗಡ್ಕರಿ, ಒಂದೂವರೆ ಗಂಟೆ ನಡಿಗೆ ಸೇರಿದಂತೆ ಲಘು ವ್ಯಾಯಾಮ ಕೂಡ ಆರಂಭಿಸಿ ಇನ್ನೂ ಸ್ವಲ್ಪ ತೂಕ ಇಳಿಸಿಕೊಂಡಿದ್ದಾರೆ. ದಿನವೂ ಸಂಜೆ ಒಂದು ಟೀವಿ ಚಾನಲ್‌ಗೆ ಭರ್ತಿ ಒಂದು ಗಂಟೆ ಸಂದರ್ಶನ ಕೊಡುವ ಗಡ್ಕರಿ ಸಾಹೇಬರು, ‘ಏನು ಮುಖ ಲಕಲಕ ಹೊಳೆಯುತ್ತಿದೆ’ ಎಂದು ಕೇಳಿದರೆ ಆರೋಗ್ಯದ ಗುಟ್ಟಿನ ಟಿಫ್ಸ್‌ ಕೊಡಲು ಶುರುಮಾಡುತ್ತಾರಂತೆ. ಏನೇ ಇರಲಿ ಗಡ್ಕರಿ ಜೀವನ ಪ್ರೀತಿ ಇರೋ ದಿಲ್‌ದಾರ್‌ ಮನುಷ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ