Covid Crisis: ತಮಿಳುನಾಡಿನಲ್ಲಿ ಒಮಿಕ್ರೋನ್‌ ರೂಪಾಂತರಿಯ 12 ಕೇಸು ಪತ್ತೆ

By Govindaraj SFirst Published Jun 6, 2022, 3:00 AM IST
Highlights

ಕರ್ನಾಟಕದ ಗಡಿ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮತ್ತೊಂದು ನೆರೆಯ ರಾಜ್ಯ ತಮಿಳುನಾಡಿನಲ್ಲಿ ಒಮಿಕ್ರೋನ್‌ ರೂಪಾಂತರಿಯಾದ ಬಿಎ4 ಮತ್ತು ಬಿಎ5ನ 12 ಪ್ರಕರಣಗಳು ದೃಢಪಟ್ಟಿವೆ.

ಚೆನ್ನೈ (ಜೂ.06): ಕರ್ನಾಟಕದ ಗಡಿ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮತ್ತೊಂದು ನೆರೆಯ ರಾಜ್ಯ ತಮಿಳುನಾಡಿನಲ್ಲಿ ಒಮಿಕ್ರೋನ್‌ ರೂಪಾಂತರಿಯಾದ ಬಿಎ4 ಮತ್ತು ಬಿಎ5ನ 12 ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಿಂದ 150 ಮಾದರಿಗಳನ್ನು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 12ರಲ್ಲಿ ಒಮಿಕ್ರೋನ್‌ ರೂಪಾಂತರಿ ಸೋಂಕು ಕಂಡುಬಂದಿದೆ. 

ಇದರಲ್ಲಿ 4 ಜನರಿಗೆ ಬಿಎ4 ಮತ್ತು 8 ಜನರಿಗೆ ಬಿಎ5 ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನೂ ಐಸೋಲೇಟ್‌ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್‌ ಹೇಳಿದ್ದಾರೆ. ಈ 12 ಜನರು ಚೆನ್ನೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಉಳಿದ ಮಾದರಿಗಳಲ್ಲಿ ಬಿಎ1 ಮತ್ತು ಬಿಎ2 ರೂಪಾಂತರಿ ಕಾಣಿಸಿಕೊಂಡಿದೆ. ಈ ಸೋಂಕಿತರ ಸಂಪರ್ಕ ಬಂದಿರುವವರನ್ನು ಗುರುತಿಸಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ರೂಪಾಂತರಿ ಮಹಾರಾಷ್ಟ್ರದಲ್ಲೂ ಸಹ ಪತ್ತೆಯಾಗಿತ್ತು.

Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!

ಮಹಾರಾಷ್ಟ್ರದಲ್ಲಿ ಮೊದಲ BA.4 ಹಾಗೂ BA.5 ಉಪತಳಿ ಪತ್ತೆ: ಭಾರತದ ಕಳೆದೆರಡು ವಾರದಿಂದ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಮಹಾರಾಷ್ಟ್ರದಲ್ಲಿ ಮೊದಲ ಓಮಿಕ್ರಾನ್ ಉಪತಳಿ  BA.4 ಹಾಗೂ BA.5 ಪತ್ತೆಯಾಗಿದೆ. ಪುಣೆಯಲ್ಲಿ ಪತ್ತೆಯಾದ 7 ಪ್ರಕರಣಗಳಲ್ಲಿ ಮೂರು ಪ್ರಕರಣ BA.4 ಹಾಗೂ ಇನ್ನುಳಿದ 4 ಪ್ರಕರಣ BA.5 ಉಪತಳಿಯಾಗಿದೆ. ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆ ಓಮಿಕ್ರಾನ್ ಉಪತಳಿ ಪತ್ತೆಯನ್ನು ಖಚಿತಪಡಿಸಿದೆ. ಒಂದೇ ಬಾರಿಗೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿರುವುದು ಮಹಾರಾಷ್ಟ್ರದ ಆತಂಕ ಹೆಚ್ಚಿಸಿದೆ. 

Omicron BA.4 ಮತ್ತು BA.5, ಭಾರತದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಬಹುದೇ ?

ಪುಣೆಯಲ್ಲಿ ನಡೆಸಿದ ಜೆನೋಮ್ ಸೀಕ್ವೆನ್ಸ್ ಪರೀಕ್ಷೆಯಲ್ಲಿ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಇದೀಗ ಮುಂಬೈನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜಿನೋಮ್ ಸೀಕ್ವೆನ್ಸ್ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಮೊದಲ  BA.4 ಉಪತಳಿ ಹೈದರಾಬಾದ್‌ನಲ್ಲಿ ಪತ್ತೆಯಾಗಿತ್ತು. ಬಳಿಕ ತೆಲಂಗಾಣ, ತಮಿಳುನಾಡಿನಲ್ಲೂ ಉಪತಳಿ ಪತ್ತೆಯಾಗಿತ್ತು. ಇದೀಗ ಮತ್ತೆ ಓಮಿಕ್ರಾನ್ ಉಪತಳಿ ಹಾವಳಿ ಹೆಚ್ಚಾಗುತ್ತಿದೆ. BA.4 ಹಾಗೂ BA.5 ಅತ್ಯಂತ ವೇಗವಾಗಿ ಹರಡಬಲ್ಲ ಉಪತಳಿಯಾಗಿದೆ. 

click me!