
ಉತ್ತರಖಂಡ(ಜೂ.05): ಪವಿತ್ರ ಚಾರ್ ಧಾಮ್ ಯಾತ್ರೆ ತೆರಳಿದ್ದ ಮಧ್ಯಪ್ರದೇಶ ಪನ್ನಾ ಜಿಲ್ಲೆಯ ಯಾತ್ರಾರ್ಥಿಗಳ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಬಸ್ ಕಂದಕ್ಕೆ ಉರುಳಿ ಬಿದ್ದ ಕಾರಣ 22 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ 6 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
32 ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಭೀಕರ ಅಪಘಾತದ ಕಾರಣ ಸಾವಿನ ಸಂಖ್ಯೆ ನಿರ್ದಿಷ್ಟವಾಗಿ ತಿಳಿದುಬಂದಿಲ್ಲ. ಗಾಯಗೊಂಡವರು ಪರಿಸ್ಥಿತಿ ಗಂಭೀರವಾಗಿದೆ. ಮಧ್ಯಪ್ರದೇಶದಿಂದ ಹೊರ ಈ ಬಸ್, ಬೆಳಗ್ಗೆ 10 ಗಂಟೆಗೆ ಹರಿದ್ವಾರದಿಂದ ಚಾರ್ ಧಾಮ್‌ನತ್ತ ಪ್ರಯಾಣ ಬೆಳೆಸಿದೆ.
ಚಲಿಸುತ್ತಿದ್ದಾಗಲೇ ಎರಡು ಭಾಗವಾದ ಪಿಕ್ಅಪ್ ವಾಹನ: ರಸ್ತೆಗುರುಳಿದ ಜನ
ದಮ್ತಾ ಹಾಗೂ ಬೆರಿಂಗಾಡ್ ನಡುವಿನ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಬಳಿ ಈ ಅಪಘಾತ ಸಂಭವಿಸಿದೆ.ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸ್ಥಳಕ್ಕೆ ಧಾವಿಸಿದೆ. ಗಂಭೀರ ಗಾಯಗೊಂಡ 6 ಮಂದಿಯನ್ನು ಆಸ್ಪತ್ರೆ ದಾಖಲಿಸಿದ್ದೇವೆ. ಕಂದಕ್ಕೆ ಉರುಳಿ ಬಿದ್ದ ಕಾರಣ ಬಸ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಹೀಗಾಗಿ ಮೃತರ ಶವಗಳನ್ನು ಹೊರತೆಗೆಯಲು ಹರಸಾಹಸ ಮಾಡಬೇಕಾಗಿದೆ. ಗಾಯಗೊಂಡವರಿಗೆ ಹೆಚ್ಚಿನ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಉತ್ತರಖಂಡ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಚಾರ್‌ಧಾಮ್ ಯಾತ್ರೆ: ಈ ವರ್ಷ ಅನಾರೋಗ್ಯಕ್ಕೆ 39 ಯಾತ್ರಿಗಳ ಸಾವು
ಪವಿತ್ರ ಚಾರ್ ಧಾಮ್ ಯಾತ್ರೆ ಆರಂಭವಾದಾನಿಂದ ಇಲ್ಲಿಯವರೆಗೆ ಸುಮಾರು 39 ಯಾತ್ರಿಕರು ಸಾವಿಗೀಡಾಗಿದ್ದಾರೆ. ಪ್ರಯಾಣದ ಹಾದಿಯಲ್ಲಿ ಹೃದಯ ಸ್ತಂಭನ, ಅತಿಯಾದ ರಕ್ತದೊತ್ತಡ ಮತ್ತು ಪರ್ವತ ಅನಾರೋಗ್ಯದಿಂದ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗೋತ್ರಿ, ಯಮುನೋತ್ರಿ ಯಾತ್ರೆ ಮೇ 3ರಿಂದ, ಕೇದಾರನಾಥ ಯಾತ್ರೆ ಮೇ 6 ಮತ್ತು ಬದರೀನಾಥ ಯಾತ್ರೆ ಮೇ 8ರಂದು ಆರಂಭವಾಗಿತ್ತು. ಯಾತ್ರಾತ್ರಿಗಳಿಗೆ ಯಾತ್ರೆಯ ವೇಳೆ ಹಲವು ಸ್ಥಳಗಳಲ್ಲಿ ಆರೋಗ್ಯ ಪರೀಕ್ಷೆ ನಡೆಸುತ್ತಾದರೂ, ಸಾವು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಹೆಲ್ಮೆಟ್ ಧರಿಸದ ಸವಾರ ಸಾವು
ಚಾರ್‌ಧಾಮ್ ಯಾತ್ರೆಗೆ ದೈನಂದಿನ ಭಕ್ತಾದಿಗಳ ಮಿತಿ ಪ್ರಕಟ
ಮೇ 3ರಿಂದ ಆರಂಭವಾಗಲಿರುವ ಪವಿತ್ರ ಚಾರ್ ಧಾಮ್ ಯಾತ್ರೆಗೆ ಈ ವರ್ಷ ದೈನಂದಿನ ಭಕ್ತಾಧಿಗಳ ಮಿತಿಯನ್ನು ಉತ್ತರಾಖಂಡ ಸರ್ಕಾರ ಪ್ರಕಟಿಸಿದೆ. ಬದರೀನಾಥಕ್ಕೆ ನಿತ್ಯ 15 ಸಾವಿರ, ಕೇದಾರನಾಥಕ್ಕೆ 12 ಸಾವಿರ, ಗಂಗೋತ್ರಿಗೆ 7 ಸಾವಿರ ಮತ್ತು ಯಮುನೋತ್ರಿಗೆ 4 ಸಾವಿರದ ಮಿತಿ ವಿಧಿಸಲಾಗಿದೆ. ಈ ಹೊಸ ನಿಯಮ ಮುಂದಿನ 45 ದಿನಗಳಿಗೆ ಅನ್ವಯವಾಗುತ್ತದೆ. ಈ ಬಾರಿ ಚಾರ್ ಧಾಮ್ ಯಾತ್ರೆಗೆ ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಕೇದಾರನಾಥಕ್ಕೆ ಮೇ 6 ಮತ್ತು ಬದರಿನಾಥಕ್ಕೆ ಮೇ 8ರವರೆಗೆ ದೇವಸ್ಥಾನ ವೆಬ್‌ಸೈಟ್ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು.
ಮೇ. 3 ರಿಂದ ಪವಿತ್ರ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ. ಗಂಗೋತ್ರಿ, ಯಮುನೋತ್ರಿ, ಕೇದಾರ್‌ನಾಥ್ ಹಾಗೂ ಬದರೀನಾಥ್ ಈ ನಾಲ್ಕು ಪುಣ್ಯಕ್ಷೇತ್ರಗಳನ್ನು ಚಾರ್‌ಧಾಮ್ ಎಂದು ಕರೆಯಲಾಗುತ್ತದೆ. ಮಧ್ಯಾಹ್ನ 11.15 ಗಂಟೆಗೆ ಗಂಗೋತ್ರಿ ಹಾಗೂ 12.15 ಗಂಟೆಗೆ ಯಮುನೋತ್ರಿಯ ದ್ವಾರಗಳು ಪ್ರವಾಸಿಗರಿಗಾಗಿ ತೆರೆದುಕೊಂಡಿದೆ.. ಮೇ. 6 ರಂದು ಕೇದಾರನಾಥ್ ಹಾಗೂ ಮೇ 8 ರಂದು ಬದರೀನಾಥ್‌ದ ದ್ವಾರಗಳನ್ನು ತೆರೆಯಲಾಗಿದೆ. ಈಗಾಗಲೇ ಚಾರ್‌ಧಾಮ್ ಯಾತ್ರೆಗೆ ಲಕ್ಷಾಂತರ ಪ್ರವಾಸಿಗರು ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ದೈನಂದಿನ ಭಕ್ತಾದಿಗಳ ಮಿತಿಯನ್ನು ಪ್ರಕಟಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ