ಒಂದೇ ಕಾಲಿನಲ್ಲಿ ಕುಂಟತ್ತಲೇ 2 ಕಿ.ಮೀ ದೂರದ ಶಾಲೆಗೆ ಹೋಗುವ ಬಿಹಾರದ ಈ ಹುಡುಗಿಗೆ ವೈದ್ಯೆಯಾಗುವ ಆಸೆ!

Published : Jun 30, 2022, 03:45 PM ISTUpdated : Jun 30, 2022, 04:04 PM IST
ಒಂದೇ ಕಾಲಿನಲ್ಲಿ ಕುಂಟತ್ತಲೇ 2 ಕಿ.ಮೀ ದೂರದ ಶಾಲೆಗೆ ಹೋಗುವ ಬಿಹಾರದ ಈ ಹುಡುಗಿಗೆ ವೈದ್ಯೆಯಾಗುವ ಆಸೆ!

ಸಾರಾಂಶ

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ದಿವ್ಯಾಂಗ ಬಾಲಕಿಯೊಬ್ಬಳು, ಪ್ರತಿದಿನ 2 ಕಿಲೋಮೀಟರ್‌ ದೂರವನ್ನು ಒಂದೇ ಕಾಲಿನಲ್ಲಿ ಕುಂಟುತ್ತಲೇ ಶಾಲೆಗೆ ಹೋಗುತ್ತಾಳೆ. ವೈದ್ಯೆಯಾಗುವ ಆಸೆ ಹೊತ್ತುಕೊಂಡಿರುವ ಈಕೆ ಸದ್ಯ ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪಾಟ್ನಾ (ಜೂನ್‌ 30): ಇತ್ತೀಚೆಗೆ ಬಿಹಾರದ ಜಮುಯಿಯಲ್ಲಿ(Jamui) ವಾಸ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರ ಕಥೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಒಂದೇ ಕಾಲಿದ್ದರೂ, 500 ಮೀಟರ್‌ ದೂರದ ಶಾಲೆಗೆ ಹೋಗುತ್ತಿದ್ದ ಸುದ್ದಿ ಅದಾಗಿತ್ತು. ಈಗ ಅದೇ ರೀತಿಯ ಇನ್ನೊಂದು ಪ್ರಕರಣ ಬಿಹಾರದಿಂದಲೇ (Bihar) ವರದಿಯಾಗಿದ್ದು, ವೈದ್ಯೆಯಾಗುವ (Doctor) ಆಸೆ ಹೊತ್ತುಕೊಂಡಿರುವ ಈಕೆಗೆ ಒಂದು ಕಾಲಿಲ್ಲ. ಒಂದು ಕಾಲು ಇಲ್ಲದೇ ಇದ್ದರೂ ಇದು ಆಕೆಯ ಇಚ್ಛಾಶಕ್ತಿಯ ಮೇಲೆ ಪರಿಣಾಮ ಬೀರಿಲ್ಲ. 2 ಕಿಲೋಮೀಟರ್‌ ದೂರದ ಶಾಲೆಗೆ ಕುಂಟುತ್ತಲೇ ಹೋಗುವ ಈ ಹುಡುಗಿಯ ಹೆಸರು ಪ್ರಿಯಾಂಶು ಕುಮಾರಿ ( Priyanshu Kumari). ಈಕೆಗೆ 11 ವರ್ಷ. ಇವಳ ಕಲಿಯುವ ಆಸಕ್ತಿ ಹಾಗೂ ಇಚ್ಛಾಶಕ್ತಿಯನ್ನು ಮೆಚ್ಚಿ ಈಗಾಗಲೇ ಹಲವು ಸುದ್ದಿಗಳು ಬಂದಿವೆ.

ಬಿಹಾರದ ಸಿವಾನ್‌ನಲ್ಲಿ(Bihars Siwan) ವಾಸಿಸುವ 11 ವರ್ಷದ ಬಾಲಕಿ ಪ್ರತಿದಿನ ಶಾಲೆಗೆ ಹೋಗುತ್ತಾಳೆ. ಬಾಲ್ಯದಲ್ಲಿಯೇ ಒಂದು ಕಾಲನ್ನು ಕಳೆದುಕೊಂಡಿರುವ ಪ್ರಿಯಾಂಶು ಕುಮಾರಿ ಕುಟುಂಬಕ್ಕೆ ಆಕೆಗೆ ಕೃತಕ ಕಾಲನ್ನು ಖರೀದಿ ಮಾಡಿಕೊಡುವಷ್ಟು ಶಕ್ತಿಯಲ್ಲ. ಅದಕ್ಕಾಗಿ 2 ಕಿಲೋಮೀಟರ್‌ ದೂರದ ಶಾಲೆಗೆ ಕುಂಟುತ್ತಲೇ ಹೋಗುತ್ತಾಳೆ. ದೊಡ್ಡವಳಾದ ಮೇಲೆ ವೈದ್ಯೆಯಾಗುವ ಹಂಬಲ ಇರುವುದಾಗಿ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ.

ದಿವ್ಯಾಂಗ (Divyang) ಪ್ರಿಯಾಂಶು ಕುಮಾರಿಯ ಕಣ್ಣಲ್ಲಿ ವೈದ್ಯೆಯಾಗುವ ಕನಸಿದೆ. ವಿದ್ಯಾಭ್ಯಾಸದಲ್ಲೂ (Studies ) ಉತ್ತಮವಾಗಿರುವ ಈಕೆ, ತನ್ನೆಲ್ಲಾ ಕಷ್ಟಗಳನ್ನು ಬದಿಗಿಟ್ಟು 2 ಕಿಲೋಮೀಟರ್ ದೂರದ ಶಾಲೆಗೆ ಕುಂಟುತ್ತಲೇ ಹೋಗುತ್ತಾಳೆ. ಮಾರ್ಗಮಧ್ಯೆ ಯಾರಾದರೂ ಸಿಕ್ಕಲ್ಲಿ ಅವರ ಸಹಾಯ ಪಡೆದು ಶಾಲೆ ತಲುಪುತ್ತಾಳೆ. 

ತನಗೆ ಸಹಾಯ ಮಾಡುವಂತೆ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ( Bihar Government ) ಮನವಿ ಮಾಡಿರುವ ಪ್ರಿಯಾಂಶುಗೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ ಪ್ರಿಯಾಂಶು, ಸರ್ಕಾರವು ತನಗೆ ಹೆಚ್ಚಿನ ಸಹಾಯವನ್ನು ನೀಡಬೇಕು ಮತ್ತು ನನ್ನ ಆಪರೇಷನ್ ( Opration ) ಪೂರ್ಣಗೊಳಿಸಲು ಸಹಾಯ ಮಾಡಬೇಕು. ಇದರಿಂದ ಅವನು ತನ್ನ ಮುಂದಿನ ಅಧ್ಯಯನವನ್ನು ಮುಂದುವರಿಸಬಹುದು ಎಂದು ಹೇಳುತ್ತಾಳೆ. ಸುದ್ದಿಸಂಸ್ಥೆಯೊಂದಿಗೆ ಈ ಬಗ್ಗೆ ಮಾತನಾಡಿದ ಪ್ರಿಯಾಂಶು ಕುಮಾರಿ, 'ವೈದ್ಯೆಯಾಗುವುದು ನನ್ನ ಕನಸು. ಸರ್ಕಾರಕ್ಕೆ ನನ್ನ ಮನವಿ ಎಂದರೆ ನಮಗೆ ಸಹಾಯ ಮಾಡಿ ಮತ್ತು ನನ್ನ ಕಾಲಿನ ಆಪೇಷನ್ ಮಾಡಿಸಿ ಅಥವಾ ಕೃತಕ ಕಾಲಿನ ವ್ಯವಸ್ಥೆ ಮಾಡಿಸಿ. ಇದರಿಂದ ನಾನು ಮುಂದೆ ಓದಲು ಮತ್ತು ಬರೆಯಲು ಸಾಧ್ಯವಾಗುತ್ತದೆ' ಎನ್ನುತ್ತಾರೆ.

ಮಣಿಪುರ ಸೇನಾ ಕ್ಯಾಂಪ್‌ನಲ್ಲಿ ಭೂಕುಸಿತ, 7 ಮೃತದೇಹಗಳು ಪತ್ತೆ, 45 ಮಂದಿ ಇನ್ನೂ ನಾಪತ್ತೆ!

ಪ್ರಿಯಾಂಶು ಕುಮಾರಿ ಬಿಹಾರದ ಸಿವಾನ್ ಜಿಲ್ಲೆಯ ಜಿರಾಡೆ ಬ್ಲಾಕ್‌ನ ಬಂತು ಶ್ರೀರಾಮ್ ಗ್ರಾಮದ (Sri Ram Village)  ನಿವಾಸಿಯಾಗಿದ್ದಾರೆ. ಈಕೆಯ ತಂದೆ ಕೃಷಿಕ. ತಾಯಿ ಮನೆಗೆಲಸ ಮಾಡುವ ಮೂಲಕ ದಿನದೂಡುತ್ತಿದ್ದಾರೆ. ಬಡತನದ ಕಾರಣದಿಂದಾಗಿ ಈಕೆಯ ಕುಟುಂಬಕ್ಕೆ ಪ್ರಿಯಾಂಶು ಕುಮಾರಿಗೆ ಕೃತಕ ಕಾಲಿನ  (artificial limb ) ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ಅವರು ಸರ್ಕಾರದ ಕಡೆಗೆ ನೆರವಿನ ಹಸ್ತ ಚಾಚಿದ್ದಾರೆ.

Belagavi Crime News: ಮನೆ ಮೇಲೆ ನೇತಾಡಿದ ವೃದ್ಧನ ಶವ: ಬೆಚ್ಚಿಬಿದ್ದ ಕುಂದಾನಗರಿ ಜನ!

ಈಕೆ ಕುಂಟುತ್ತಲೇ ಶಾಲೆಗೆ ಹೋಗುತ್ತಿದ್ದರೆ, ಸಾಮಾನ್ಯ ಮಕ್ಕಳೂ ಇದರಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾರೆ ಎನ್ನುವುದು ಸ್ಥಳೀಯರ ಮಾತು. ಹುಟ್ಟಿನಿಂದಲೇ ಪ್ರಿಯಾಂಶು ಕುಮಾರಿಯ ಎಡಗಾಲು ಊನವಾಗಿತ್ತು. ಸ್ಥಳೀಯ ವೈದ್ಯರಿಗೆ ತೋರಿಸಿದರಾದರೂ ಇದರಿಂದ ಯಾವುದೇ ಸಹಾಯವಾಗಿರಲಿಲ್ಲ. ಖಾಸಗಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಪ್ರಿಯಾಂಶು, ಸರ್ಕಾರ ಕೃತಕ ಕಾಲುಗಳನ್ನು ತಮಗೆ ನೀಡಿದರೆ ಬಹಳ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!