* ಮಣಿಪುರದ ನೋನಿ ಜಿಲ್ಲೆಯಲ್ಲಿ ಭೀಕರ ಅಪಘಾತ
* ಮಣಿಪುರ ಸೇನಾ ಕ್ಯಾಂಪ್‌ನಲ್ಲಿ ಭೂಕುಸಿತ, 7 ಮೃತದೇಹಗಳು ಪತ್ತೆ
* ಮುಂದುವರೆದ ಕಾರ್ಯಾಚರಣೆ
ಇಂಫಾಲ(ಜೂ.30): ಮಣಿಪುರದ ನೋನಿ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಭಾರತೀಯ ಸೇನೆಯ 107 ಟೆರಿಟೋರಿಯಲ್ ಆರ್ಮಿ ಕಂಪನಿಯು ಬುಧವಾರ ಮಧ್ಯರಾತ್ರಿ ತುಪುಲ್ ರೈಲು ನಿಲ್ದಾಣದ ಬಳಿ ನಿಯೋಜಿಸಲಾದ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಘಟನೆಯ ನಂತರ, 50 ಕ್ಕೂ ಹೆಚ್ಚು ಯೋಧರು ಸ್ಥಳದಲ್ಲೇ ಸಮಾಧಿಯಾಗಿದ್ದಾರೆ ಎಂದು ವರದಿಯಾಗಿದೆ. ಸತತ ಕಾರ್ಯಾಚರಣೆ ಮುಂದುವರಿದಿದ್ದು, ಈವರಗೆ 13 ಯೋಧರು ಹಾಗೂ ಐವರು ನಾಗರೀಕರನ್ನು ರಕ್ಷಿಸಲಾಗಿದೆ. ಇನ್ನು 7 ಸೇನಾ ಯೋಧರು ಹಾಗೂ ಓರ್ವ ನಾಗರೀಕನ ಮೃತದೇಹ ಹೊರತೆಗೆಯಲಾಗಿದೆ. ಸದ್ಯ ಪರಿಹಾರ ಕಾರ್ಯ ನಡೆಯುತ್ತಿದೆ.
ಮಣಿಪುರದ ರಾಜಭವನದಿಂದ ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯ ಪ್ರಕಾರ, ಘಟನೆಯ ಸ್ಥಳದಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಆದರೆ ಡಜನ್‌ಗಟ್ಟಲೆ ಜನರು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ. ಭೂಕುಸಿತ ಸಂಭವಿಸಿದ ಸೇನಾ ತುಕಡಿಯನ್ನು ತುಪುಲ್ ಯಾರ್ಡ್ ರೈಲ್ವೇ ಕನ್‌ಸ್ಟ್ರಕ್ಷನ್ ಕ್ಯಾಂಪ್ ಜಿರಿಬಾಮ್‌ನಲ್ಲಿ ರೈಲು ಮಾರ್ಗದ ರಕ್ಷಣೆಗೆ ನಿಯೋಜಿಸಲಾಗಿತ್ತು.
ವೇಗವಾಗಿ ಸಾಗಿದ ರಕ್ಷಣಾ ಕಾರ್ಯಾಚರಣೆ
ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ತುಕಡಿಗಳು ಭಾರೀ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸ್ಥಳದಲ್ಲಿ ಲಭ್ಯವಿರುವ ಇಂಜಿನಿಯರ್ಡ್ ಪ್ಲಾಂಟ್ ಉಪಕರಣಗಳನ್ನು ರಕ್ಷಣಾ ಪ್ರಯತ್ನಗಳಲ್ಲಿ ನಿಯೋಜಿಸಲಾಗಿದೆ. ಮುಂಜಾನೆ 5.30ರ ಸುಮಾರಿಗೆ 13 ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ನೋನಿ ಸೇನಾ ವೈದ್ಯಕೀಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುಮಿತ್ ಕೆ ಶರ್ಮಾ ತಿಳಿಸಿದ್ದಾರೆ.
ಇಜೈ ನದಿಯ ಹರಿವು ಬೇರೆಡೆಗೆ ತಿರುಗಿತು
ಭೂಕುಸಿತದಿಂದಾಗಿ ಇಜೈ ನದಿಯ ಹರಿವು ಪರಿಣಾಮ ಬೀರಿದ್ದು, ಪರಿಸ್ಥಿತಿ ಹದಗೆಡಬಹುದು. ನದಿಯ ಹರಿವು ಸ್ಥಗಿತಗೊಂಡಿದ್ದು, ನೀರು ಹರಿಸಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ತುಂಬಲು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಆದರೆ, ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಪ್ರದೇಶವನ್ನು ಖಾಲಿ ಮಾಡುವಂತೆ ಜನರಿಗೆ ಸೂಚನೆ
"ಸಂದರ್ಭಗಳನ್ನು ಗಮನಿಸಿದರೆ, ಸಾರ್ವಜನಿಕರು ತಮ್ಮದೇ ಆದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಮತ್ತು ನಿರ್ದಿಷ್ಟವಾಗಿ ಮಕ್ಕಳಿಗೆ ನದಿಯ ಬಳಿ ಬರದಂತೆ ನೋಡಿಕೊಳ್ದಳಿ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆರವು ಮಾಡಬಹುದಾದವರಿಗೂ ತೆರವು ಮಾಡಲು ಸೂಚಿಸಲಾಗಿದೆ. ಸಾರ್ವಜನಿಕರು ಜಾಗರೂಕರಾಗಿರಲು ಮತ್ತು ಮಳೆ ಪರಿಸ್ಥಿತಿ ಹದಗೆಟ್ಟರೆ ಯಾವುದೇ ಸಹಾಯಕ್ಕೆ ಸಿದ್ಧರಾಗಿರಲು ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 37 ಅನ್ನು ತಪ್ಪಿಸಲು ಸಲಹೆಗಳು
ತಾಜಾ ಭೂಕುಸಿತಗಳು ಮತ್ತು ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸಿದೆ, ಆದರೂ ಕಾಣೆಯಾದವರನ್ನು ರಕ್ಷಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಹವಾಮಾನ ಸ್ಪಷ್ಟವಾಗಲು ಸೇನಾ ಹೆಲಿಕಾಪ್ಟರ್‌ಗಳು ಸ್ಟ್ಯಾಂಡ್‌ಬೈನಲ್ಲಿ ಕಾಯುತ್ತಿವೆ. ರಸ್ತೆ ತಡೆಯಿಂದಾಗಿ ಜನರು NH 37 ಅನ್ನು ತಪ್ಪಿಸಲು ಸೂಚಿಸಲಾಗಿದೆ