ಮನೆಗೆ ಸರ್ಕಾರದಿಂದ ಹಣ ಪಡೆದು ಗಂಡನಿಗೆ ಕೈಕೊಟ್ಟು ಪ್ರೇಮಿಗಳ ಜೊತೆ ಮಹಿಳೆಯರು ಎಸ್ಕೇಪ್‌..!

By Kannadaprabha News  |  First Published Jul 9, 2024, 11:33 AM IST

ಹಣ ಖಾತೆಗೆ ಜಮೆ ಆಗುತ್ತಲೇ 11 ಮಹಿಳೆಯರು ತಮ್ಮ ತಮ್ಮ ಗಂಡಂದಿರಿಗೆ ಕೈಕೊಟ್ಟು ಪ್ರೀತಿಸಿದ ವ್ಯಕ್ತಿಗಳೊಂದಿಗೆ ಪರಾರಿಯಾಗಿದ್ದಾರೆ. ಪರಿಣಾಮ ಮನೆಗೆ ಬಂದ ಹಣದ ಜೊತೆ ಪತ್ನಿಯೂ ಕೈತಪ್ಪಿದಳು ಎಂದು ಪರಿತಪಿಸುವ ಸರದಿ ಗಂಡಂದಿರದ್ದಾಗಿದೆ. 


ಲಖನೌ(ಜು.09):  ಕೇಂದ್ರ ಸರ್ಕಾರ ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ನೆರವಾಗಲೆಂದು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ 2.50 ಲಕ್ಷ ರು.ವರೆಗೆ ಸಬ್ಸಿಡಿ ಹಣ ನೀಡುತ್ತದೆ. ಆದರೆ ಉತ್ತರಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಕೆಲ ಮಹಿಳೆಯರು ಪಿಎಂ ಆವಾಸ್ ಯೋಜನೆಯ ಹಣ ಪಡೆದು ಪ್ರೇಮಿಗಳ ಜೊತೆ ಓಡಿ ಹೋಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಜಿಲ್ಲೆಯಲ್ಲಿ 2350 ಜನ ಈ ಬಾರಿ ಯೋಜನೆಗೆ ಆಯ್ಕೆಯಾಗಿದ್ದರು. ಈ ಪೈಕಿ ಇತ್ತೀಚೆಗೆ ಮೊದಲ ಕಂತಿನ 40000 ರು. ಹಣ ಬಿಡುಗಡೆಯಾಗಿತ್ತು. ಈ ಹಣ ಖಾತೆಗೆ ಜಮೆ ಆಗುತ್ತಲೇ 11 ಮಹಿಳೆಯರು ತಮ್ಮ ತಮ್ಮ ಗಂಡಂದಿರಿಗೆ ಕೈಕೊಟ್ಟು ಪ್ರೀತಿಸಿದ ವ್ಯಕ್ತಿಗಳೊಂದಿಗೆ ಪರಾರಿಯಾಗಿದ್ದಾರೆ. 

Tap to resize

Latest Videos

ಮದ್ವೆಯಾಗಿದ್ರೂ ಇಬ್ಬರ ಜೊತೆ ಸರಸ ಸಲ್ಲಾಪ; ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ್ಳು!

ಪರಿಣಾಮ ಮನೆಗೆ ಬಂದ ಹಣದ ಜೊತೆ ಪತ್ನಿಯೂ ಕೈತಪ್ಪಿದಳು ಎಂದು ಪರಿತಪಿಸುವ ಸರದಿ ಗಂಡಂದಿರದ್ದಾಗಿದೆ. ಹೀಗಾಗಿ ಅವರೆಲ್ಲರೂ ಇದೀಗ ಅಧಿಕಾರಿಗಳಿಗೆ ದೂರು ನೀಡಿದ್ದು, ಮುಂದಿನ ಕಂತಿನ ಹಣ ಬಿಡುಗಡೆ ಮಾಡದಂತೆ ಕೋರಿಕೆ ಸಲ್ಲಿಸಿದ್ದಾರೆ.

click me!