ಮಹಾಕುಂಭದಲ್ಲಿ ಮೋದಿ ಸ್ನಾನ, ಮತದಾನದ ದಿನವೇ ಮೋದಿ 11ನೇ ಬಾರಿಗೆ ತೀರ್ಥಯಾತ್ರೆ!

Published : Feb 05, 2025, 11:19 AM ISTUpdated : Feb 05, 2025, 11:42 AM IST
ಮಹಾಕುಂಭದಲ್ಲಿ ಮೋದಿ ಸ್ನಾನ, ಮತದಾನದ ದಿನವೇ ಮೋದಿ 11ನೇ ಬಾರಿಗೆ ತೀರ್ಥಯಾತ್ರೆ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ತೀರ್ಥಸ್ನಾನ ಮಾಡಲಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವಾಗಲೇ ಮೋದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಈ ಕ್ರಮವು ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ನವದೆಹಲಿ (ಫೆ.5): ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರು ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡಲಿದ್ದಾರೆ. ಇನ್ನೊಂದೆಡೆ ದೆಹಲಿ ವಿಧಾನಸಭೆಗೆ ಬುಧವಾರ ಮತದಾನ ಪ್ರಕ್ರಿಯೆ ನಡೆಯತ್ತಿದೆ. ಮತದಾನ ನಡೆಯುವ ದಿನವೇ ಪ್ರಧಾನಿ ಮೋದಿ ತೀರ್ಥಯಾತ್ರೆ, ದೇವಸ್ಥಾನ ಭೇಟಿ ಹಾಗೂ ಅಮೃತ ಸ್ನಾನದಂಥ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು 11ನೇ ಬಾರಿಯಾಗಿದೆ. 2014ರ ಬಳಿಕ ಮೋದಿ ಇಂಥದ್ದೇ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಮೋದಿ ಮಂದಿರ ಅಥವಾ ತೀರ್ಥಯಾತ್ರೆಯಲ್ಲಿ ಭಾಗಿಯಾಗುತ್ತಾರೆ.

2019 ಮೇ 19: ಲೋಕಸಭೆ ಚುನಾವಣೆಯ ಅಂತಿಮ ಹಂತ.8 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿದ್ದ ದಿನದಂದೇ ಪ್ರಧಾನಿ ಮೋದಿ ಕೇಸರಿ ವಸ್ತ್ರ ಧರಿಸಿದ್ದ ಪ್ರಧಾನಿ ಮೋದಿ ಕೇದಾರನಾಥ ಮಂದಿರದಲ್ಲಿ ದರ್ಶನ ಮಾಡಿದ್ದರು. ಆ ಬಳಿಕ ಕೇದಾರನಾಥನ ಸಮೀಪದ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈ ಫೋಟೋಗಳು ಭಾರೀ ವೈರಲ್‌ ಆಗಿದ್ದವು. ನಾಲ್ಕು ದಿನಗಳ ಬಳಿಕ ಅಂದರೆ ಮೇ 23 ರಂದು ನಡೆದ ಮತ ಎಣಿಕೆಯಲ್ಲಿ ಮೋದಿ ಸರ್ಕಾರ 303 ಸೀಟ್‌ಗಳಲ್ಲಿ ಜಯ ಸಾಧಿಸಿ 2ನೇ ಬಾರಿಗೆ ಅಧಿಕಾರಕ್ಕೆ ಏರಿದ್ದರು.

ಐದು ವರ್ಷಗಳ ಬಳಿಕ ಅಂದರೆ 2024ರ ಜೂನ್‌ 1 ರಂದು ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯ ವಿವೇಕಾನಂದ ರಾಕ್‌ ಮೆಮೋರಿಯಲ್‌ನಲ್ಲಿ ಧ್ಯಾನ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್‌ ಆದವು. ಅದೇ ದಿನ ಲೋಕಸಭೆ ಚುನಾವಣೆಯ ಕೊನೇ ಹಂತದ ಮತದಾನ ನಡೆಯುತ್ತಿತ್ತು. ಈ ವೇಳೆ ಅವರು ರುದ್ರಾಕ್ಷಿ ಜಪಮಾಲೆಯನ್ನು ಹಿಡಿದುಕೊಂಡಿದ್ದರು. ಇದರಿಂದಾಗಿ ಕೊನೇ ಹಂತದ ಚುನಾವಣೆಯಲ್ಲಿ 57 ಸೀಟ್‌ಗಳಲ್ಲಿ ಚುನಾವಣೆ ನಡೆಯಬೇಕಿತ್ತು. ಇದರಲ್ಲಿ 18 ಸೀಟ್‌ಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರ 240 ಸೀಟ್‌ಗಳಲ್ಲಿ ಗೆಲುವು ಕಂಡಿತ್ತು. ಇತರ ಪಕ್ಷಗಳ ಬೆಂಬಲದೊಂದಿಗೆ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಉಳಿಸಿಕೊಂಡರು.

ಇನ್ನು ವಿಧಾನಸಭೆ ಚುನಾವಣೆಯ ಸಮಯವನ್ನು ಲೆಕ್ಕ ಹಾಕುವುದಾದರೆ, 2024ರ ಅಕ್ಟೋಬರ್‌ 5 ರಂದು ಹರಿಯಾಣದ 90 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಇದೇ ದಿನ ಪ್ರಧಾನಿ ಮೋದಿ ಮಹಾರಾಷ್ಟ್ರದ ವಾಶಿಂ ಜಿಲ್ಲೆಯಲ್ಲಿ ಜಗದಂಬಾ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ ಮತ ಎಣಿಕೆಯಲ್ಲಿ ಬಿಜೆಪಿ 90 ಸೀಟ್‌ಗಳ ಪೈಕಿ 48 ರಲ್ಲಿ ಗೆಲುವು ಕಂಡಿತ್ತು. ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಉಳಿಸಿಕೊಂಡಿತ್ತು.

2023ರ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮೋದಿಯ ದೇವಸ್ಥಾನ ಭೇಟಿ ಯಾವುದೇ ಪರಿಣಾಮ ಬೀರಲಿಲ್ಲ. ಕರ್ನಾಟಕ ಚುನಾವಣೆಯಲ್ಲಿ 224 ಸೀಟ್‌ಗಳ ಪೈಕಿ ಬಿಜೆಪಿ 66ರಲ್ಲಿ ಮಾತ್ರವೇ ಗೆಲುವು ಕಂಡಿತ್ತು. ಹಿಂದಿನ ಚುನಾವಣೆಗಿಂತ 38 ಸೀಟ್‌ ಕಡಿಮೆಯಾಗಿತ್ತು. 135 ಸೀಟ್‌ ಗೆದ್ದು ಕಾಂಗ್ರೆಸ್‌ ಅಧಿಕಾರಕ್ಕೆ ಏರಿತ್ತು.

2021ರ ಮಾರ್ಚ್‌ 27ರಂದು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆಯ ಮೊದಲ ಚರಣದ ಮತದಾನ ನಡೆಯುತ್ತಿತ್ತು. ಈ ವೇಳೆ ಮೋದಿ ಬಾಂಗ್ಲಾದೇಶದ ಢಾಕಾದಲ್ಲಿ ಯಶೋರೇಶ್ವರಿ ಶಕ್ತಿಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.ಆ ಬಳಿಕ ಮತುವಾ ಸಮುದಾಯದ ಮಂದಿರಕ್ಕೂ ಭೇಟಿ ನೀಡಿದ್ದರು. ಮತುವಾ ಪಶ್ಚಿಮ ಬಂಗಾಳದಲ್ಲೂ ಪ್ರಮುಖ ಪಂಗಡ. ಇದರ ಪರಿಣಾಮದಿಂದಾಗಿ ಬಂಗಾಳ ಚುನಾವಣೆಯಲ್ಲಿ 77 ಸೀಟ್‌ ಗೆದ್ದು ಬಿಜೆಪಿ ಮೊದಲ ಬಾರಿಗೆ ಪ್ರಮುಖ ವಿಪಕ್ಷ ಎನಿಸಿಕೊಂಡಿತು. ಇನ್ನು ಅಸ್ಸಾಂನಲ್ಲಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಏರುವಲ್ಲಿ ಯಶಸ್ವಿಯಾಯಿತು.

2017ರ ಮಾರ್ಚ್‌ 8 ರಂದು ಪಿಎಂ ಮೋದಿ ಗುಜರಾತ್‌ನ ಸೋಮನಾಥ ಮಂದಿರದಲ್ಲಿ ನಡೆದ ಪೂಜೆಯಲ್ಲಿ ಭಾಗಿಯಾಗಿದ್ದರು. ಅವರೊಂದಿಗೆ ಅಮಿತ್‌ ಶಾ ಕೂಡ ಇದ್ದರು. ಇದೇ ದಿನ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಅಂತಿಮ ಹಂತದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ನಾಲ್ಕು ದಿನಗಳ ಬಳಿಕ ನಡೆದ ಮತ ಎಣಿಕೆಯಲ್ಲಿ ಬಿಜೆಪಿ 15 ವರ್ಷಗಳ ಉತ್ತರ ಪ್ರದೇಶದ ಅಧಿಕಾರದ ವನವಾಸವನ್ನು ಕೊನೆ ಮಾಡಿತ್ತು. ಉತ್ತರ ಪ್ರದೇಶದ 403 ಕ್ಷೇತ್ರಗಳಲ್ಲಿ ಬಿಜೆಪಿ 312 ಕ್ಷೇತ್ರದಲ್ಲಿ ಗೆಲುವು ಕಂಡಿತ್ತು. ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾಗಿ ನೇಮಕವಾದರು.

ಟ್ರಂಪ್‌ ಪ್ರಮಾಣವಚನಕ್ಕೆ ಮೋದಿ ಕರೆಯಿರಿ ಎಂದು ಕೇಳಲು ಮಂತ್ರಿ ಅಮೆರಿಕಕ್ಕೆ ಹೋಗಿದ್ದರು: ರಾಹುಲ್‌ ಗಾಂಧಿ

ರಾಜನೀತಿ ವಲಯದಲ್ಲಿ ವೋಟಿಂಗ್‌ ದಿನ ಪ್ರಧಾನಿ ಮೋದಿ ಮಂದಿರಕ್ಕೆ ಭೇಟಿ ನೀಡುವ ಪರಿಣಾಮ ಮತದಾರರ ಮೇಲೂ ಪರಿಣಾಮ ಬೀರುತ್ತದೆ. ಮತದಾನದ ವೇಳೆ ಗೊಂದಲದಲ್ಲಿರುವ ಮತದಾರರನ್ನು ಮೋದಿ ಟಾರ್ಗೆಟ್‌ ಮಾಡುತ್ತಾರೆ. ಮತದಾನದ ದಿನವೇ ಅವರು ಮಹಾಕುಂಭ ಮೇಳಕ್ಕೆ ಹೋಗುವುದು ದೆಹಲಿ ಚುನಾವಣೆಯ ದಿನ ಪರಿಣಾಮ ಬೀರುತ್ತದೆ. ಇದು ಬಿಜೆಪಿಯ ಮತ ಗಳಿಕೆ ಪ್ರಮಾಣ ಏರಿಕೆಯಲ್ಲಿ ಕಾರಣವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ ರಶೀದ್‌ ಕಿದ್ವಾಯಿ ಹೇಳಿದ್ದಾರೆ.

 

ಮೋದಿ-ಅಮಿತ್‌ ಶಾ ಅದೆಷ್ಟೇ ತೀರ್ಥಸ್ನಾನ ಮಾಡಿದ್ರೂ ಅವರು ಹೋಗೋದು ನರಕಕ್ಕೆ: ಮಲ್ಲಿಕಾರ್ಜುನ ಖರ್ಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ